- ಅಧ್ಯಕ್ಷರಾಗಿ ಜುನೈದ್ ಸಾಲ್ಮರ, ಕಾರ್ಯದರ್ಶಿ: ಅಝೀಝ್ ಪುಣಚ
ಪುತ್ತೂರು: ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್ಡಿಟಿಯು) ಪುತ್ತೂರು ಕ್ಷೇತ್ರ ಸಮಿತಿಯನ್ನು ಪುನರ್ರಚಿಸಲಾಯಿತು. ಅಧ್ಯಕ್ಷರಾಗಿ ಜುನೈದ್ ಸಾಲ್ಮರ, ಕಾರ್ಯದರ್ಶಿಯಾಗಿ ಅಝೀಝ್ ಪುಣಚರವರು ಆಯ್ಕೆಗೊಂಡರು. ಸದಸ್ಯರಾಗಿ ಮುಸ್ತಫಾ ಒಕ್ಕೆತ್ತೂರು, ಅಝೀಝ್ ಬನ್ನೂರು, ರಿಯಾಝ್ ಬಲಕ್ಕ, ಇರ್ಷಾದ್ ಜಾರತ್ತಾರು, ಅಝೀಝ್ ಉಪ್ಪಿನಂಗಡಿ, ಸಿದ್ದೀಕ್ ಸಾಲ್ಮರ, ಸಮೀರ್ ನಾಜೂಕುರವರನ್ನು ಆಯ್ಕೆ ಮಾಡಲಾಯಿತು. ಎಸ್ಡಿಟಿಯು ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಸಂದೇಶ ನೀಡಿದರು. ನೂತನ ಸಮಿತಿ ಪುನರ್ರಚನೆಯನ್ನು ಎಸ್ಡಿಟಿಯು ದ.ಕ ಜಿಲ್ಲಾ ಉಸ್ತುವಾರಿ ಝಾಕೀರ್ ಉಳ್ಳಾಲ್ ನಡೆಸಿಕೊಟ್ಟರು.