ಪ್ರಗತಿ ಸ್ಟಡಿ ಸೆಂಟರ್‌ನಿಂದ ಪ್ರಗತಿ ವಿಜ್ಞಾನ್ “A School of Knowledge” NEET – ಉದ್ಘಾಟನೆ

0

 

ಪುತ್ತೂರು : ಇಲ್ಲಿನ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಪ್ರಗತಿ ಸಂಸ್ಥೆ ಹಾಗೂ absolute learning academy ಇದರ ಸಹಯೋಗದೊಂದಿಗೆ NEET ದೀರ್ಘಾವಧಿ ತರಗತಿಯ ಉದ್ಘಾಟನೆಗೊಂಡಿತು. absolute learning academy ನಿರ್ದೇಶಕರಾದ ವಿಘ್ನೇಶ್ ಹೆಚ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಕನಸು ಕಾಣುವ ಜೊತೆಗೆ ಅದರ ದಾರಿಯನ್ನು ಕಂಡುಕೊಳ್ಳಬೇಕು. ಆಗ ನಮ್ಮ ಜೀವನ ಸುಂದರವಾಗಿ ನಿರ್ಮಾಣವಾಗುತ್ತದೆ ಎಂಬುದನ್ನು ಹಲವಾರು ಉದಾಹರಣೆಯ ಮೂಲಕ ವಿವರಿಸಿದರು. ನಮ್ಮ ಸಂಸ್ಥೆಯ ಸಂಚಾಲಕ ಗೋಕುಲ್ ನಾಥ್ ಪಿ.ವಿ ಮಾತನಾಡಿ ಪ್ರಗತಿ ವಿಜ್ಞಾನ ಇದರ ಹುಟ್ಟು ಅದರಿಂದ ಸಿಗುವ ಪ್ರಯೋಜನ ಹಾಗೂ ತರಗತಿಗಳ ಕುರಿತು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್ ಮಾತನಾಡಿ ನಮ್ಮ ಜೀವನದಲ್ಲಿ ಗುರಿ ಮುಖ್ಯವಾಗಿದ್ದು ಅದನ್ನು ತಲುಪುವ ಕಡೆ ನಮ್ಮ ಗಮನವಿರಬೇಕು. ಅದಕ್ಕಾಗಿ ನಾವು ಪರಿಶ್ರಮ ಕೊಡಬೇಕು ಎಂದು ಹಿತನುಡಿಗಳನ್ನು ತಿಳಿಸಿದರು. ಶಿವಾನಿ ಪ್ರಾರ್ಥಿಸಿದರು. ಪ್ರಮೀಳ ಎನ್.ಡಿ. ಕಾರ್ಯಕ್ರಮ ನಿರೂಪಿಸಿದರು. ಶೋಭಾ ಸ್ವಾಗತಿಸಿದರು. ಸುಮಿತ್ರಾ ವಂದಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here