ಕೆಮ್ಮಾಯಿ:ಅಶ್ವತ್ಥ ವೃತ್ತ, ದಾರಿ ಸೂಚಕ ಲೋಕಾರ್ಪಣೆ

0

ಪುತ್ತೂರು:ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ ಜಂಕ್ಷನ್‌ನಲ್ಲಿ ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ವತಿಯಿಂದ ನಿರ್ಮಾಣಗೊಂಡ ಅಶ್ವತ್ಥ ವೃತ್ತ ಹಾಗೂ ದಾರಿ ಸೂಚಕವನ್ನು ಜು.24ರಂದು ಲೋಕಾರ್ಪಣೆಗೊಳಿಸಲಾಯಿತು.


ಊರಿನ ಹಿರಿಯರಾದ ಚಿದಂಬರ ನಾಕ್ ವೃತ್ತ ಹಾಗೂ ದಾರಿ ಸೂಚಕವನ್ನು ಲೋಕಾರ್ಪಣೆಗೊಳಿಸಿದರು. ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಸದಸ್ಯ ಮುಕುಂದ ಬಜತ್ತೂರು, ನಗರ ಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಲೀಲಾವತಿ ಕೃಷ್ಣನಗರ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ರಮೇಶ್ ಗೌಡ ಏಕ, ಸದಸ್ಯರಾದ ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಅಂದ್ರಟ್ಟ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ, ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಚಿದಾನಂದ ರೈ, ರಾಧಾ ರೆಸಿಡೆನ್ಸಿಯ ಪ್ರವೀಣ್ ನಾಕ್, ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಧಾಕರ ನಾಕ್, ಬನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಜಿನ್ನಪ್ಪ ಗೌಡ ಕೊಲ್ಯ, ಮಾಜಿ ಸದಸ್ಯ ಅಣ್ಣಿ ಪೂಜಾರಿ,ಪ್ರಮುಖರಾದ ಸತೀಶ್ ಬಲ್ಯಾಯ, ಹೇಮಚಂದ್ರ, ಡಾ.ನಾರಾಯಣ ಭಟ್, ನಾಗೇಶ್ ಕೆ., ಲಿಂಗಪ್ಪ ಗೌಡ ಕೆಮ್ಮಾಯಿ, ಉಮೇಶ್ ಗೌಡ ಕೆಮ್ಮಾಯಿ, ಪ್ರದೀಪ್ ಭರತಪುರ, ಜಯೇಶ್ ತಾರಿಗುಡ್ಡೆ, ರಾಜೇಶ್ ಹೊಸೊಕ್ಲು, ಪ್ರವೀಣ್ ಬಡಾವು, ಪ್ರಕಾಶ್ ಹೊಸೊಕ್ಲು, ಉಮಾವತಿ, ಜನಾರ್ದನ ಪೇರಲ್ತಡಿ, ಪ್ರಶಾಂತ್ ಗೋವುದಕಾಡು, ಚಂದ್ರಶೇಖರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಸ್ವಾಗತಿಸಿದರು. ನಾಗೇಶ್ ಟಿ.ಎಸ್ ವಂದಿಸಿದರು.

LEAVE A REPLY

Please enter your comment!
Please enter your name here