ಅಯೋಧ್ಯಾನಗರ ಶಾಲೆಯಲ್ಲಿ ‘ಮಿಯಾವಾಕಿ ಮಾದರಿ’ಗಿಡ ನಾಟಿ

0

 

ನೆಲ್ಯಾಡಿ: ಬಜತ್ತೂರು ಗ್ರಾಮದ ಅಯೋಧ್ಯಾನಗರ ಸರಕಾರಿ ಹಿ.ಪ್ರಾ.ಶಾಲೆಯ ಆವರಣದಲ್ಲಿ ಪರಿಸರ ಪ್ರೇಮಿ, ಮೆಸ್ಕಾಂ ಉಪ್ಪಿನಂಗಡಿ ಶಾಖಾ ಪವರ್‌ಮ್ಯಾನ್ ದುರ್ಗಾ ಸಿಂಗ್‌ರವರ ನೇತೃತ್ವ ಹಾಗೂ ಶಾಲಾ ಎಸ್‌ಡಿಎಂಸಿಯ ಅಧ್ಯಕ್ಷ ದಿನೇಶ್‌ರವರ ಸಹಕಾರದೊಂದಿಗೆ ಅರಣ್ಯ ಇಲಾಖೆಯವರು ಕೊಡಮಾಡಿದ ಸುಮಾರು 200ಕ್ಕೂ ಹೆಚ್ಚು ಗಿಡಗಳನ್ನು ಮಿಯಾವಾಕಿ ಮಾದರಿಯಲ್ಲಿ ನೆಡಲಾಯಿತು. ಮನೋಜ್ ಶಾಂತಿನಗರ, ತೇಜಸ್ ಶಾಂತಿನಗರ, ಪ್ರಸಾದ್ ಶಾಂತಿನಗರ, ಚಂದ್ರಶೇಖರ ನೂಜಲ, ಜಯಂತ ಅರ್ತಿಗುಳಿ, ಜಗದೀಶ್ ಅರ್ತಿಗುಳಿ, ಶಿವಾನಂದ ಶಾಂತಿನಗರ, ತೀರ್ಥೇಶ್ ಶಾಂತಿನಗರ, ದಿನೇಶ್ ಅತ್ತಾಜೆಯವರು ಶಾಲಾ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ವನ ನಿರ್ಮಿಸಲು ಶ್ರಮಿಸಿದರು. ಶಾಲಾ ಎಸ್‌ಡಿಎಂಸಿಯವರು, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here