ಏನೆಕಲ್ಲು: ಗುಡ್ಡ ಕುಸಿದು ರಸ್ತೆಗೆ ಬಿದ್ದ ಮಣ್ಣು-ಸಂಪರ್ಕ ಕಡಿತ

0
  •  ಸ್ಥಳೀಯರಿಂದ ಮಣ್ಣು ತೆರವು ಕಾರ್ಯ

 

ಕಡಬ: ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ.ಗೊಳಪಟ್ಟ ಏನೆಕಲ್ಲು ಗ್ರಾಮದ ಸಂಕಡ್ಕ ಎಂಬಲ್ಲಿ ಜೂ.30ರಂದು ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದ ಪರಿಣಾಮ ಏನೆಕಲ್ಲು-ಸಂಕಡ್ಕ-ಹಾಲೆಮಜಲು ರಸ್ತೆ ಸಂಪರ್ಕವು ಕಡಿತಗೊಂಡಿತ್ತು. ಬಳಿಕ 23 ದಿನಗಳಾದರೂ ಮಣ್ಣು ತೆರವುಗೊಳಿಸದೆ ಇದ್ದುದರಿಂದ ಜು.24ರಂದು ಸ್ಥಳೀಯರೇ ಸೇರಿ ಮಣ್ಣು ತೆರವುಗೊಳಿಸಿದ್ದಾರೆ.

ಏನೆಕಲ್ಲು-ಸಂಕಡ್ಕ-ಹಾಲೆಮಜಲು ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವ ಬಗ್ಗೆ ಆ ಭಾಗದ ಜನರು ಪಂಚಾಯತ್ ಸದಸ್ಯರಲ್ಲಿ ತಿಳಿಸಿದ್ದರೂ ಅವರು ಮಣ್ಣು ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಜು.24ರಂದು ಜಗದೀಶ್ ಸಂಕಡ್ಕ ಅವರ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಮೂಲಕ ಮಣ್ಣು ತೆರವುಗೊಳಿಸಲಾಯಿತು. ರಸ್ತೆ ಸಂಪರ್ಕ ಸ್ಥಗಿತಗೊಂಡಿದ್ದರೂ ಗ್ರಾಮ ಪಂಚಾಯತ್ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here