ಯುವಕರೇ ನಿಮ್ಮ ರಕ್ತವನ್ನು ಬಿಸಿಮಾಡಿ ಅನ್ಯಾಯದ ವಿರುದ್ದ ಧ್ವನಿಯೆತ್ತಿ..ಸಹಿಸಿ ತಣ್ಣಗಿರುವುದರಿಂದಲೇ ರಾಜಕಾರಣಿಗಳು ಭ್ರಷ್ಟಾಚಾರಿಗಳಾಗುತ್ತಿದ್ದಾರೆ : ಶಿಬರೂರು

0

ಡಾ. ಯು.ಪಿ. ಶಿವಾನಂದರ ನೇತೃತ್ವದಲ್ಲಿ ಸುದ್ದಿ ಬಿಡುಗಡೆ ಪತ್ರಿಕಾ ಸಮೂಹವು ಲಂಚ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಯಲ್ಲಿ ತೊಡಗಿದೆ. ಇದೀಗ ಇದಕ್ಕೆ ಪೂರಕವೆಂಬಂತೆ ಖ್ಯಾತ ಪತ್ರಕರ್ತೆ ಹಾಗೂ ವಿಜಯಟೈಮ್ಸ್ ಚಾನೆಲ್‌ನ ಸಂಪಾದಕಿ ವಿಜಯ ಲಕ್ಷ್ಮಿ ಶಿಬರೂರು ಅವರು ಕೂಡ ಲಂಚ ಭ್ರಷ್ಟಾಚಾರದ ವಿರುದ್ಧ ಕಿಡಿ ಕಾರಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಬಗ್ಗೆ ಪ್ರಶ್ನೆ ಮಾಡುವ ತಾಕತ್ತು ಇಲ್ಲ ಅಂದ್ರೆ ಡೆಮಾಕ್ರಸಿ ಯಲ್ಲಿ ಇನ್ನೇನು ಸಾಧ್ಯ ಎಂದು ಗುಡುಗಿದ್ದಾರೆ . ಈಗಿನ ಯುವಕರನ್ನು ಬಿಸಿ ರಕ್ತದ ಯುವಕರು ಅಂತ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಸ್ವಾಮಿ ವಿವೇಕಾನಂದ ಅವರು ಈಗ ಇರುತ್ತಿದ್ದರೆ ಬಿಸಿ ರಕ್ತದ ಯುವಕರು ಎಂದು ಹೇಳ್ತಾನೆ ಇರಲಿಲ್ಲ. ಯಾಕೋ ಈಗಿನ ಯುವಕರು ಹೇಡಿಗಳಾಗುತ್ತಿದ್ದಾರೆ. ಚಾಲೆಂಜ್ ಮಾಡಲ್ಲ. ಸಣ್ಣ ಸಣ್ಣ ವಿಷಯಗಳನ್ನು ಕೂಡ ಪ್ರಶ್ನೆ ಮಾಡಲ್ಲ. ನಮ್ಮ ಮಕ್ಕಳನ್ನು ಹೇಡಿಗಳಾಗಿ ಬೆಳೆಸಿರೋದಕ್ಕೆ ಈಗಿನ ರಾಜಕಾರಣಿಗಳು ಭ್ರಷ್ಟಾಚಾರಿಗಳಾಗುತ್ತಿದ್ದಾರೆ. ಪ್ರಶ್ನೆ ಮಾಡುವ ತಾಕತ್ತು ನಮ್ಮಲ್ಲಿಲ್ಲಾಂದ್ರೆ ಈ ಸಂವಿಧಾನದಲ್ಲಿ ಇನ್ನೇನು ಸಾಧ್ಯ ಎಂದು ವಿಜಯಲಕ್ಷ್ಮಿಯವರು ಪ್ರಶ್ನಿಸಿದರು.

 

ಎಲ್ಲಿ ಹೋಗುತ್ತಿದೆ ಸಮಾಜ.ವಿಜಯಲಕ್ಷ್ಮೀ ಪ್ರಶ್ನೆ ಮಾಡುತ್ತಿದ್ದಾಳೆ ಮಾಡಲಿ ಬಿಡಿ, ನಮ್ಮ ಮಕ್ಕಳು , ನಮ್ಮ ಜೀವನ ಸೇಫಾಗಿರಬೇಕು. ನಾವು ಬಚಾವಾದ್ರೆ ಸಾಕು ಎನ್ನುವ ಮನೋಭಾವ ಜನರದ್ದು. ಮೊದಲು ಇದರಿಂದ ಹೊರಬರಬೇಕು. ವಿಜಯಲಕ್ಷ್ಮಿ ರಿಸ್ಕ್ ತಕೊಳ್ತಿದ್ದಾರೆ ತಕೊಳ್ಳಲಿ ಬಿಡಿ ಎನ್ನುವವರಿದ್ದಾರೆ. ಹಾಗಾಗಬಾರದು ಎಲ್ಲರೂ ನಾಯಕತ್ವ ಬೆಳೆಸಿಕೊಳ್ಳಬೇಕು.ಆದ್ದರಿಂದ ಇವತ್ತಿನಿಂದಲೇ ನಿಮ್ಮ ರಕ್ತಾನಾ ಬಿಸಿ ಮಾಡಿಕೊಳ್ಳಲು ಶುರು ಮಾಡಿ. ಅನ್ಯಾಯ ನೋಡಿದಾಗ ರಕ್ತ ಕುದಿಯ ಬೇಕು.ಅದರ ವಿರುದ್ಧ ಧ್ವನಿಯೆತ್ತಿ. ಭ್ರಷ್ಟಾಚಾರ ಕಂಡಾಗ ಪ್ರಶ್ನೆ ಮಾಡಬೇಕು ಎನ್ನುವ ಭಾವನೆ ನಿಮ್ಮಲ್ಲಿ ಮೂಡಬೇಕು. ಈಗ ೪೦ ಶೇಕಡಾದಷ್ಟು ಲಂಚ ಭ್ರಷ್ಟಾಚಾರ ನಡಿತಿದೆ. ನೀವು ತಣ್ಣಗಿದ್ರೆ 90 ಶೇಕಡಾಕ್ಕೆ ತಲುಪುತ್ತದೆ. ಆದ್ದರಿಂದ ನೀವು ಮೌನವಾಗಿ ಕುಳಿತುಕೊಳ್ಳದಿರಿ. ಪ್ರಶ್ನಿಸಿ,ಧ್ವನಿಯೆತ್ತಿ ಎಂದು ವಿಜಯಲಕ್ಷ್ಮಿ ಶಿಬರೂರು ಅವರು ಲಂಚ ಭ್ರಷ್ಟಾಚಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಯುವಜನತೆಗೆ ಲಂಚಭ್ರಷ್ಟಾಚಾರದ ಕುರಿತು ಕಿವಿಮಾತು ಹೇಳಿದರು.

LEAVE A REPLY

Please enter your comment!
Please enter your name here