ಕೊಳ್ತಿಗೆ: ಪೆರ್ಲಂಪಾಡಿ ಹಿಂದೂ ಜಾಗರಣ ವೇದಿಕೆ ವತಿಯಿಂದ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಹಿಂದೂ ಜಾಗರಣ ವೇದಿಕೆ ಪೆರ್ಲಂಪಾಡಿ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ ಇವುಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ, ಮಧುಮೇಹ ತಪಾಸಣೆ, ರಕ್ತದೊತ್ತಡ ತಪಾಸಣೆ ಹಾಗೂ ತಮ್ಮೂರ ಯೋಧನಿಗೆ ಸನ್ಮಾನ ಕಾರ್ಯಕ್ರಮವು ಜು.24 ರಂದು ಪೆರ್ಲಂಪಾಡಿಯ ಷಣ್ಮುಖದೇವ ಪ್ರೌಢಶಾಲೆಯಲ್ಲಿ ಜರುಗಿತು.

ಹಿಂದೂ ಜಾಗರಣ ವೇದಿಕೆ ಪೆರ್ಲಂಪಾಡಿ ಘಟಕದ ಸಂಯೋಜಕ್ ಗಿರೀಶ್ ಪಾದೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ ಇದರ ವೈದ್ಯಾಧಿಕಾರಿ ಡಾ. ಅಮಿತ್ ಕುಮಾರ್ ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್, ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ  ಕೃಷ್ಣವೇಣಿ, ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಇದರ ಸಂಯೋಜಕ್ ದಿನೇಶ್ ಪಂಜಿಗ ಉಪಸ್ಥಿತರಿದ್ದರು.

ಯೋಧರಾದ ಭಾರತೀಯ ಭೂ ಸೇನೆಯಲ್ಲಿ(ಭೂತಾನ್) ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್ ಕೊಂರ್ಬಡ್ಕ-ದೊಡ್ಡಮನೆ ಯವರಿಗೆ ಹಿಂದೂ ಜಾಗರಣ ವೇದಿಕೆ ಪೆರ್ಲಂಪಾಡಿ ಘಟಕದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಹಿಂದು ಜಾಗರಣವೇದಿಕೆ ಪೆರ್ಲಂಪಾಡಿ ಘಟಕದ ಕಾರ್ಯಕರ್ತರು, ಗ್ರಾಮಸ್ಥರು,‌ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀನಿವಾಸ ಕೊಂರ್ಬಡ್ಕ- ದೊಡ್ಡಮನೆ ಸ್ವಾಗತಿಸಿ, ಹಿಂದೂ ಜಾಗರಣ ವೇದಿಕೆ ಪೆರ್ಲಂಪಾಡಿ ಇದರ ಸಂಯೋಜಕ್ ಗಿರೀಶ್ ಪಾದೆಕಲ್ಲು ವಂದಿಸಿದರು. ಸಹ ಸಂಯೋಜಕ್ ಜಯತ್ ಕೆಮ್ಮಾರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here