ಕಾವು: ಲಯನ್ಸ್ ಮೆಡಿಕಲ್ ಲ್ಯಾಬೋರೇಟರಿಯಲ್ಲಿ ವೈದ್ಯಕೀಯ ಸೇವೆ

0

  • ಗುರುಹಿರಿಯರ ಸಮ್ಮುಖದಲ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟ ಡಾ. ವಾಸ್ತವಿ ಎಚ್ ಶೆಟ್ಟಿ

 


ಪುತ್ತೂರು: ಪುತ್ತೂರು-ಕಾವು ಲಯನ್ಸ್ ಕ್ಲಬ್ ವತಿಯಿಂದ ಕಾವು ಚಿಕ್ಕಪೇಠೆ ಅಕ್ಷಯ ಕಾಂಪ್ಲೆಕ್ಸ್‌ನಲ್ಲಿ ಆರಂಭಗೊಂಡ ಲಯನ್ಸ್ ಮೆಡಿಕಲ್ ಲ್ಯಾಬೋರೇಟರಿಯಲ್ಲಿ ವೈದ್ಯಕೀಯ ಸೇವೆ ಜು.25ರಂದು ಆರಂಭಗೊಂಡಿತು.


ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ. ರಘು ಬೆಳ್ಳಿಪ್ಪಾಡಿಯವರು ಕ್ಲಿನಿಕನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನೂತನ ಕ್ಲಿನಿಕ್‌ನಲ್ಲಿ ಕಾವು ಹೇಮನಾಥ ಶೆಟ್ಟಿ ಮತ್ತು ಅನಿತಾ ಹೇಮನಾಥ ಶೆಟ್ಟಿಯವರ ಯವರ ಹಿರಿಯ ಪುತ್ರಿ ಡಾ. ವಾಸ್ತವಿ ಎಚ್ ಶೆಟ್ಟಿ ಸೇವೆಗೆ ಲಭ್ಯವಿರುತ್ತಾರೆ.


ನಂತರ ನಡೆದ ಸಭಾ ಕಾರ್ಯಕ್ರಮವನ್ನು ಪುತ್ತೂರಿನ ಅಂಬಿಕಾ ವಿದ್ಯಾಲಯದ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜಾರವರು ದೀಪಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರುತ್ತಿದ್ದಾರೆ ಎಂಬುದು ನನಗೆ ಅತೀವ ಸಂತಸವನ್ನು ತಂದಿದೆ. ತಾನು ಕಲಿತ ವಿದ್ಯಾ ಸಂಸ್ಥೆಯ ಗುರುಗಳ ಸಮ್ಮುಖದಲ್ಲಿ ಡಾ. ವಾಸ್ತವಿ ಎಚ್ ಶೆಟ್ಟಿಯವರು ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಸೇವೆಯನ್ನು ನೀಡುವಲ್ಲಿ ಅವರು ಯಶಸ್ವಿಯಾಗಲಿ ಎಂದು ಹೇಳಿದರು. ಯಾವುದೇ ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಿದರೆ ಅದರಲ್ಲಿ ಸಂತೋಷ ಪಡುವುದು ವಿದ್ಯಾರ್ಥಿಯ ಹೆತ್ತವರು ಮತ್ತು ವಿದ್ಯಾರ್ಥಿಗೆ ವಿದ್ಯೆ ನೀಡಿದ ಶಿಕ್ಷಕರು, ಕಲಿಕೆಯಲ್ಲಿ ರ್‍ಯಾಂಕ್ ವಿದ್ಯಾರ್ಥಿಯಾಗಿದ್ದ ವಾಸ್ತವಿ ಶೆಟ್ಟಿಯವರು ಉನ್ನತ ವ್ಯಾಸಂಗ ಮಾಡುವ ಮೊದಲು ತಾನು ಕಲಿತ ವಿದ್ಯೆಯನ್ನು ತನ್ನದೇ ಊರಿನ ಜನರಿಗೆ ಸೇವಾ ರೂಪದಲ್ಲಿ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.

ನೊಂದವರಿಗೆ ಚಿಕಿತ್ಸೆ ನೀಡಬೇಕಿದೆ: ವಿಜಯಹಾರ್ವಿನ್
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುತ್ತೂರು ಸುಧಾನ ರೆಸಿಡೆನ್ಸಿಯಲ್ ಸ್ಕೂಲ್‌ನ ಸಂಚಾಲಕ ವಿಜಯಹಾರ್ವಿನ್‌ರವರು ಮಾತನಡಿ ನಮ್ಮ ಶಾಲೆಯಲ್ಲಿ ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿದ ಡಾ. ವಾಸ್ತವಿ ಎಚ್ ಶೆಟ್ಟಿಯವರು ಇಂದು ವೈದ್ಯೆಯಾಗಿದ್ದಾರೆ. ಇದು ನಮಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಗ್ರಾಮೀಣ ಭಾಗದಲ್ಲಿ ಸೇವೆ ನೀಡಲು ಯಾರೂ ಮುಂದೆ ಬಾರದೆ ಇರುವ ಈ ಕಾಲದಲ್ಲಿ ತನ್ನದೇ ಗ್ರಾಮದ ಜನರಿಗೆ ಸೇವೆಯನ್ನು ಆರಂಭ ಮಾಡಿರುವುದು ಹೃದಯವಂತಿಕೆಯಾಗಿದೆ. ಗ್ರಾಮದಲ್ಲಿರುವ ಮಕ್ಕಳ, ವಯೋವೃದ್ದರಿಗೆ ಚಿಕಿತ್ಸೆಯನ್ನು ನೀಡುವ ಮೂಲಕ ಸೇವಾ ಮನೋಭಾವವನ್ನು ಉತ್ತೇಜಿಸಿಕೊಳ್ಳಬೇಕು. ವಿಶೇಷವಾಗಿ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಪುಟ್ಟ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಿ ಅವರಿಗೆ ಬೇಕಾದ ಚಿಕಿತ್ಸಾ ಮಾಹಿತಿಯನ್ನು ನೀಡಬೇಕು. ಕಾವಿನಂತ ಗ್ರಾಮೀಣ ಪ್ರದೇಶದಲ್ಲಿರುವ ಪ್ರತೀಯೊಬ್ಬರಿಗೂ ತಮ್ಮ ಸೇವೆ ದೊರಕುವಂತಾಗಲಿ ಎಂದ ಅವರು ಆಹಾರ, ಆರೋಗ್ಯ ಮತ್ತು ಸೇವೆ ಈ ಮೂರು ವ್ಯವಸ್ಥೆಗಳು ಸಮಪ್ರಮಾಣದಲ್ಲಿದ್ದರೆ ಸಮಾಜದಲ್ಲಿ ನೆಮ್ಮದಿಯ ವಾತಾವರಣ ಕಾಣಲು ಸಾಧ್ಯವಾಗುತ್ತದೆ ಇದಕ್ಕಾಗಿ ಯುವ ವೈದ್ಯರುಗಳು ಪಣತೊಡಬೇಕು ಎಂದು ಹೇಳಿದರು.

ಕಲಿತು ವೈದ್ಯರಾಗುವುದು ಸುಲಭದ ಕೆಲಸವಲ್ಲ; ಡಾ. ರಘು
ವಿದ್ಯೆ ಕಲಿತು ಡಾಕ್ಟರ್ ಆಗುವುದು ಸುಲಭದ ಕೆಲಸವಲ್ಲ. ಪರಿಶ್ರಮ ಮುಖ್ಯವಾಗುತ್ತದೆ. ಎಂಬಿಬಿಎಸ್ ಮುಗಿಸಿ ಪಟ್ಟಣಗಳಲ್ಲಿ ತಮ್ಮ ಸೇವೆಯನ್ನು ಆರಂಭಿಸುವ ಯುವ ವೈದ್ಯರುಗಳಿಗೆ ಮಾದರಿಯಾಗಿ ಡಾ. ವಾಸ್ತವಿ ಎಚ್ ಶೆಟ್ಟಿ ಮೆರೆದಿದ್ದಾರೆ. ಗ್ರಾಮೀಣ ಜನತೆಯ ಸೇವೆಯನ್ನು ಮಾಡುವ ಮೂಲಕ ಅವರ ನೋವು, ನಲಿವುಗಳಿಗೆ ಸ್ಪಂದಿಸುವ ಗುಣ ಮೈಗೂಡಿಸಿಕೊಂಡಿದ್ದರಿಂದ ಅವರಿಗೆ ಕಾವಿನಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಿದೆ. ಸ್ಪಂದಿಸುವ ಮನೋಭಾವ ಅಉ ಡಾ. ವಾಸ್ತವಿಯವರಿಗೆ ರಕ್ತಗತವಾಗಿ ಬಂದಿದೆ ಎಂದು ಹೇಳಿದ ಅವರು ಲಯನ್ಸ್ ಕ್ಲಬ್ ವತಿಯಿಂದ ಇಲ್ಲಿ ಲ್ಯಾಬೋರೇಟರಿ ಇದೆ, ವೈದ್ಯಕೀಯ ಸೇವೆಯೂ ಇದೆ ಇದು ಅತ್ಯಂತ ಸಂತಸದ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗೆ ಅವಕಾಶ ಕೂಡಿಬರಲಿ ಎಂದು ಶುಭ ಹಾರೈಸಿದರು.
ಬುಶ್ರಾ ವಿದ್ಯಾಸಂಸ್ಥೆಯ ಕಾವು ಅಬ್ದುಲ್ ಅಝೀಝ್ ಬುಶ್ರಾರವರು ಡಾ. ವಾಸ್ತವಿ ಶೆಟ್ಟಿಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಅವರು ಪ್ರಾಥಮಿಕ ಶಿಕ್ಷಣವನ್ನು ಬುಶ್ರಾ ಸಂಸ್ಥೆಯಲ್ಲಿ ಪಡೆದಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದ ಅವರು ಡಾ. ವಾಸ್ತವಿ ಎಚ್ ಶೆಟ್ಟಿಯವರು ಶಿಕ್ಷಣಕ್ಕೆ ಅಡಿಗಲ್ಲು ಹಾಕಿದ್ದು ನಮ್ಮ ಸಂಸ್ಥೆಯಲ್ಲಾಗಿದೆ ಎಂದು ಹೇಳಿದರು.

ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕಾವು-ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಪಾವನರಾಮರವರು ಮಾತನಾಡಿ ಪುತ್ತೂರು-ಕಾವು ಲಯನ್ಸ್ ಕ್ಲಬ್ ಜನರ ಸೇವೆಗೆ ಸದಾ ಸಿದ್ದವಾಗಿದೆ. ಜನರ ಸೇವೆಗೆಂದೇ ನಾವು ಇಲ್ಲಿ ಮೆಡಿಕಲ್ ಲ್ಯಬೋರೇಠರಿ ಆರಂಭಿಸಿದ್ದೇವೆ, ಇವತ್ತಿನಿಂದ ಚಿಕಿತ್ಸಾ ಸೌಲಭ್ಯವೂ ಆರಂಭಗೊಂಡಿದೆ. ಹಂತ ಹಂತವಾಗಿ ವಿವಿಧ ಸಮಾಜ ಸೇವಾ ಚಟುವಟಿಕೆಯನ್ನು ಪ್ರಾರಂಭಿಸುವ ಮೂಲಕ ನಾವು ಸೇವೆಗೆ ಸಿದ್ದರಾಗಿರುವುದಾಗಿ ಹೇಳಿದರು.

ಕಾವಿನಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಲಯನ್ಸ್ ಕ್ಲಬ್ ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕಾವಿನಲ್ಲಿ ಶೀಘ್ರದಲ್ಲೇ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಕ್ಲಬ್ ವತಿಯಿಂದ ಆಯೋಜಿಸಲಿದ್ದೇವೆ. ಖ್ಯಾತ ವೈದ್ಯರುಗಳನ್ನು ಕರೆಸುವ ಮೂಲಕ ಅರಿಯಡ್ಕ , ಮಾಡ್ನೂರು ಹಗೂ ಸುತ್ತಮುತ್ತಲ ಗ್ರಾಮದ ಜನರಿಗೆ ತಮ್ಮ ಆರೋಗ್ಯವನ್ನು ಪರೀಕ್ಷಿಸಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಮಾಡಿಕೊಡಲಿದ್ದೇವೆ ಎಂದು ಹೇಳಿದರು.

ವಾರದಲ್ಲಿ ಎರಡು ದಿನ ಡಾ. ರಘು ರವರಿಂದ ಚಿಕಿತ್ಸೆ
ಖ್ಯಾತ ಕ್ಯಾನ್ಸರ್ ತಜ್ಞ ಡಾ. ರಘು ಬೆಳ್ಳಿಪ್ಪಾಡಿಯವರು ವಾರದಲ್ಲಿ ಎರಡು ದಿನ ಕಾವು ಕ್ಲಿನಿಕ್‌ನಲ್ಲಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸಾ ಸೇವೆಯನ್ನು ನೀಡಲಿದ್ದಾರೆ ಎಂದು ಹೇಮನಾಥ ಶೆಟ್ಟಿ ಸಭೆಗೆ ತಿಳಿಸಿದರು.

ವೇದಿಕೆಯಲ್ಲಿ ರಾಮಯ್ಯ ರೈ ತಿಂಗಳಾಡಿ,ಹಿರಿಯರಾದ ಕಮಲಾಕ್ಷ ಬೋರ್ಕರ್, ಡಾ. ವಾಸ್ತವಿ ಪಿ ಶೆಟ್ಟಿ, ಡಾ. ಸಂಜನಾಶೆಟ್ಟಿ, ಲಯನ್ಸ್ ಪ್ರಮುಖರಾದ ಜಗನ್ನಾಥ ರೈ ಗುತ್ತು, ಗಣೇಶ್ ಶೆಟ್ಟಿ ಪುತ್ತೂರು, ಲ್ಯಾನ್ಸಿ ಮಸ್ಕರೇನಸ್, ಮೋಹನ್‌ದಾಸ್ ಶೆಟ್ಟಿ ನೂಜಿಬೈಲು, ಜಗನ್ನಾಥ ರೈ ಡೆಂಬಾಳೆ, ಅಮ್ಮು ರೈ ಅಂಕೊತ್ತಿಮಾರ್, ಸುರೇಖಾ ಡಿ ಶೆಟ್ಟಿ, ಜಯಪ್ರಕಾಶ್ ರೈ ನೂಜಿಬೈಲು, ಕುಶಾಲಪ್ಪ ಗೌಡ ಬದಿಯಡ್ಕ, ದಿನೇಶ್ ಗೌಡ ಅಮ್ಚಿನಡ್ಕ, ಕೃಷ್ಣಪ್ಪ ಗೌಡಡೆಂಬಾಳೆ, ಅರಿಯಡ್ಕ ಗ್ರಾಪಂ ಸದಸ್ಯರುಗಳಾದ ಮೋನಪ್ಪ ಪೂಜಾರಿ ಕೆರೆಮಾರು, ಜಯಂತಿ, ಸಲ್ಮಾ, ಶಂಕರ ಮಾಡಂದೂರು, ಅಬ್ದುಲ್ ರಹಿಮಾನ್, ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ಕಮಲ, ಶಶಿಕಲಾ ಚೌಟ, ಕೆ ಕೆ ಇಬ್ರಾಹಿಂ ಹಾಜಿ ಕೊಚ್ಚಿ, ನಿಸಾರ್ ಹಾಜಿ ಜನತಾ, ಹಿರಾ ಅಬ್ದುಲ್ ಖಾದರ್ ಹಾಜಿ, ಪುಷ್ಪಕ್ ಇಬ್ರಾಹಿಂ ಹಾಜಿ, ಕೇಶವ ಬೆದ್ರಾಳ, ರವೀಂದ್ರ ಪೈ ಪುತ್ತೂರು, ಸೇಸಪ್ಪ ಗೌಡ, ಬಿ ಕೆ ಇಬ್ರಾಹಿಂ , ಮಂಜು ಸುವರ್ಣ ಮೊಟ್ಟೆತ್ತಡ್ಕ, ಸತೀಶ್ ಶೆಟ್ಟಿ ಕೊಂಬೆಟ್ಟು, ಡಾ. ವಜೀದಾ, ಕವಿತಾ ಸಿರೈ, ರಾದಮ್ಮ ಬಂಟ್ವಾಳ, ಅನ್ವಿತ್ ರೈ, ಡಾ. ಸಾಜನ್ ಶೆಟ್ಟಿ, ಡಾ. ಮೋಹನ್‌ಶೆಟ್ಟಿ, ಪವನ್‌ಕುಮಾರ್, ರವಿಅಶ್ವತ್ತಡಿ, ಖಾಲಿದ್ ಮಡನ್ನೂರು, ಮಹಮ್ಮದ್ ದೇಲಂಪಾಡಿ ಮತ್ತಿತರರು ಉಪಸ್ಥಿತರಿದ್ದರು.

ದಿವ್ಯನಾಥ ಶೆಟ್ಟಿ ಕಾವು ವಂದಿಸಿದರು. ಅನಿತಾ ಹೇಮನಾಥ ಶೆಟ್ಟಿ, ಡಾ. ರಂಜಿತಾ ಎಚ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here