ಬೃಹತ್ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

0

ಕೆಯ್ಯೂರು: ಒಡಿಯೂರು ಶ್ರೀ ಗಳ ಜನ್ಮದಿನೋತ್ಸವ, ಗ್ರಾಮೋತ್ಸವ, ಗುರುವಂದನೆ ಪ್ರಯುಕ್ತ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು, ಒನ್ ಸೈಟ್ ಎಸ್ಸಿಲೋರ್ ಲುಕ್ಷೋಟಿಕಾ ಪೌಂಡೇಶನ್, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧ್ವತ್ವ ವಿಭಾಗ) ಡಾ.ಪಿ.ದಯನಂದ ಪೈ ಮತ್ತು ಪಿ.ಸತೀಶ್ ಪೈ  ಚಾರಿಟೇಬಲ್ ಟ್ರಸ್ಟ್ ಇದರ ಜಂಟಿ ಸಹಯೋಗದಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಅಂಕತ್ತಡ್ಕ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಇದರ ವತಿಯಿಂದ ಬೃಹತ್ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಜು24ರಂದು ಕೆ.ಪಿ.ಎಸ್.ಕೆಯ್ಯೂರಿನಲ್ಲಿ ನಡೆಯಿತು.
ಒಡಿಯೂರು ಶ್ರೀ ಗಳ ಜನ್ನದಿನೋತ್ಸವ, ಗ್ರಾಮ ಸಮಿತಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಜನರು ಅರೋಗ್ಯದ ಕುರಿತು ಹೆಚ್ಚು ಆಶಕ್ತಿ ತೋರಬೇಕು, ಆರೋಗ್ಯದ ವಿಚಾರದಲ್ಲಿ ಜಾಗೃತಿ ಮೂಡಿಸಲು ನೇತ್ರ ತಪಸಣಾ ಶಿಬಿರಗಳು ನಿರ್ವಹಿಸಬೇಕು ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಅಂಕತ್ತಡ್ಕ ಗೌರವ ಅಧ್ಯಕ್ಷ ಎಸ್ ಬಿ ಜಯರಾಮ ರೈ ಬಳಜ್ಜ  ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ರೋಗಿ ವೈದರ ಸಂಬಂಧ ಉತ್ತಮವಾದಗ ಆರೋಗ್ಯ ಪೂರ್ಣ ವಾತಾವರಣ ನಿರ್ಮಾಣವಾಗುತ್ತದೆ. ಗ್ರಾಮದಲ್ಲಿರುವ ನೂರಾರು ಬಡ ಕುಟುಂಬ ಗಳಿಗೆ ಸಹಾಯವಾಗುತ್ತದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಿ ಎಂದು ಮನವಿ ಮಾಡಿದರು. 
ಒಡಿಯೂರು ಶ್ರೀ ಗಳ ಜನ್ನದಿನೋತ್ಸವ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ, ನಿರ್ದೇಶಕರು  ದ.ಕ.ಹಾಲು ಒಕ್ಕೂಟ ಮಂಗಳೂರು ಸುಧಾಕರ ರೈ ಬಿ,  ಕೆ.ಪಿ.ಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯ ಗುರು ಬಾಬು.ಎನ್, ಪ್ರದಾನ ನೇತ್ರಾಲಯ ,ಸೂಪರ್ ಸ್ಪೇಷಾಲಿಟಿ ಕಣ್ಣಿನ ಅಸ್ಪತ್ರೆ ಮಂಗಳೂರು ವೈದ್ಯರಾದ ಡಾ.ಅವಿನಾಶ್, ಡಾ.ಸೈಯದ್ ಉಪಸ್ಥಿತರಿದ್ದರು.
 ಶಿಬಿರದಲ್ಲಿ 172 ಮಂದಿಗೆ ದ ಕಣ್ಣಿನ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಗುರು ದೇವ ಸೇವಾ ಬಳಗದ ಪಧಾಧಿಕಾರಿಗಳಾದ ತ್ಯಾಂಪಣ್ಣರೈ ಅಂಕತ್ತಡ್ಕ, ಮೋನಪ್ಪ ಕೆ.ಅಂಕತ್ತಡ್ಕ, ರಾಮಣ್ಣರೈ ಬಾಕಿಜಾಲು, ವಿಶ್ವನಾಥ ರೈ ಪಾಲ್ತಾಡಿ, ಸಂತೋಷ್ ರೈ ಅಂಕತ್ತಡ್ಕ, ರೋಹಿತ್ ರೈ ಕುಂಜಾಡಿ, ಕೃಷ್ಣಪ್ಪ ಅಂಕತ್ತಡ್ಕ, ನಿರೀಕ್ಷಾ ರೈ ಬಾಕಿಜಾಲು, ಅರ್ಪಿತಾ ರೈ, ಅನಿರೀಕ್ಷಿತಾ ರೈ, ಸುಪರ್ ವೈಸರ್ ಕವಿತ, ಗ್ರಾಮಸಂಯೋಜಕಿ ಶಶಿ.ಬಿ ಸಹಕರಿಸಿದರು.
ಅನ್ವಿತಾ ಪ್ರಾರ್ಥಿಸಿ, ಶ್ರೀ ಗುರುದೇವ ಸೇವಾ ಬಳಗ ಅಂಕತ್ತಡ್ಕ ಅಧ್ಯಕ್ಷ ಕರುಣಾಕರ ರೈ ಚೆನ್ನಾವರ ಪಟ್ಟೆ ಸ್ವಾಗತಿಸಿ, ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಶಿಕ್ಷಕಿ ಸುಧಾ ವಿ.ಜೆ ವಂದಿಸಿ  ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here