ಮುಂಡೂರಿನಲ್ಲಿ ಒಕ್ಕಲಿಗ ಗೌಡ ಸಂಘದ ವಾರ್ಷಿಕ ಸಮಾರಂಭ, ಆಟಿ ಆಚರಣೆ

0

 

ಪುತ್ತೂರು; ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸಂಘ, ಮಹಿಳಾ ಘಟಕ ಮುಂಡೂರು ಗ್ರಾಮ ಸಮಿತಿ ಹಾಗೂ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಮುಂಡೂರು ಇವುಗಳ ವಾರ್ಷಿಕ ಸಮಾರಂಭ, ಆಟಿ ಆಚರಣೆ, ವಿದ್ಯಾರ್ಥಿಗಳಿಗೆ ಕೊಡೆ, ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಜು.೨೪ರಂದು ಬೆಳಿಗ್ಗೆ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಒಕ್ಕಲಿಗ ಗೌಡ ಸೇವಾ ಸಂಘ ಮುಂಡೂರು ಗ್ರಾಮ ಸಮಿತಿ ಗೌರವ ಸಲಹೆಗಾರ ಲೋಕಪ್ಪ ಗೌಡ ಕರೆಮನೆ ಮಾತನಾಡಿ, ಒಕ್ಕಲಿಗ ಗೌಡ ಸಂಘ ಮುಂಡೂರು ಗ್ರಾಮ ಸಮಿತಿ ಗೌರವಾಧ್ಯಕ್ಷ ಲೋಕಪ್ಪ ಗೌಡ ಕೆರೆಮನೆ ಮಾತನಾಡಿ, ಒಕ್ಕಲಿಗ ಸಮಾಜ ಬಾಂಧವರು ಪ್ರತಿಯೊಂದು ಕ್ಷೇತ್ರದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮಾಜದ ಉನ್ನತಿಗಾಗಿ ಪ್ರತಿಯೊಬ್ಬ ಸಾಮಾಜ ಬಾಂಧವರು ದುಡಿಯಬೇಕು. ಎಲ್ಲರೂ ಒಗ್ಗಟ್ಟಿನಿಂದ ದುಡಿದಾಗ ಸಂಘ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದರು.


ಸ್ವ-ಸಹಾಯ ಗುಂಪುಗಳಿಗೆ ಲಾಭಾಂಶ ವಿತರಿಸಿದ ಒಕ್ಕಲಿಗ ಸ್ವ-ಸಹಾಯ ಸೇವಾ ಟ್ರಸ್ಟ್ ಅಧ್ಯಕ್ಷ ಮನೋಹರ್ ಡಿ.ವಿ. ಮಾತನಾಡಿ, ಸಮಾಜ ಬಾಂಧವನ್ನು ಒಗ್ಗೂಡಿಸುವುದು ಹಾಗೂ ಆರ್ಥಿಕ ಸಮಾನತೆ ಕಾಪಾಡುವ ನಿಟ್ಟಿನಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಕಾರ್ಯಾಚರಿಸುತ್ತಿದೆ. ಪುತ್ತೂರಿನಲ್ಲಿ ಒಟ್ಟು ೭೨೦ ಸ್ವ-ಸಹಾಯ ಸಂಘಗಳು ಕಾರ್ಯಾಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್‌ಗೆ ಸ್ವಂತ ಕಟ್ಟಡ ನಿರ್ಮಾಣವಾಗಲಿದೆ. ಟ್ರಸ್ಟ್ ಮುಖಾಂತರ ಸಮಾಜ ಬಾಂಧವರಿಗೆ ವೈದ್ಯಕೀಯ ನೆರವು, ವಿವಾಹ ವೇದಿಕೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಮಾತನಾಡಿ, ಸಮಾಜಕ್ಕಾಗಿ ಸಂಘವು ಕೆಲಸ ಮಾಡುತ್ತಿದೆ. ಸಂಘದ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರ ಸಹಕಾರ‌ ಆವಶ್ಯಕ. ಸಂಘವು ಕೈಗೊಂಡಿರುವ ಕಾರ್ಯಕ್ರಮಗಳಲ್ಲಿ ಸಹಕರಿಸಿದ ಸಮಾಜ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು.


ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಮಹಿಳಾ ಘಟಕದ ಕಾರ್ಯದರ್ಶಿ ನವೀನಾ ಬಿ.ಡಿ., ಪುಸ್ತಕದ ದಾನಿ ಒಕ್ಕಲಿಗ ಗೌಡ ಸಮುದಾಯ ಭವನದ ಉಸ್ತುವಾರಿ ಸಮಿತಿ ಅಧ್ಯಕ್ಷ ದಯಾನಂದ ಕೆ.ಎಸ್. ಮಾತನಾಡಿ, ಸಂಘದ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ಗ್ರಾಮ ಸಮಿತಿ ಗೌರವಾಧ್ಯಕ್ಷೆ ಪುಷ್ಪಾ ಪುರಂದರ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಗುತ್ತಿನಪಾಲು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷ ಸುಧಾಕರ ಗೌಡ ಪಜಿಮಣ್ಣು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ, ಪ್ರತಿಭಾ ಪುರಸ್ಕಾರ:
ನಿವೃತ್ತ ಶಿಕ್ಷಕಿ ಮನೋರಮಾ ನಾರಾಯಣ ಗೌಡ ಕಡ್ಯ, ಹಿರಿಯರಾದ ದುಗ್ಗಣ್ಣ ಗೌಡ ಪಜಿಮಣ್ಣುರವರನ್ನು ಸನ್ಮಾನಿಸಲಾಯಿತು. ಕರೆಮನೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಶ್ವನಾಥ ಗೌಡ ಕರೆಮನೆ, ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಕವಿತಾ ಕರುಣಾಕರ ಗೌಡ, ಕಡ್ಯ, ಪುಷ್ಪಾ‌ ನಾರಾಯಣ ಗೌಡ ಕಡ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಂಡೂರು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಪುಷ್ಪಾ ರಾಜೇಶ್ ಅಂಬಟ, ೨೦೨೧-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ಧೀರಜ್ ಬಿ.ಆರ್., ಸ್ವಸ್ತಿಕ್ ಎನ್.ರಿಶಿಕಾ ಕೆ.ಕೆ., ಅಶ್ವಿತ್ ಕುಮಾರ್, ವಿಧ್ಯೇಶ್ ಪಿ., ಕುಶಿತಾ ಎನ್., ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಹರ್ಷಿತಾ ಪಿ.ಆರ್., ಸಂಜನಾ ಜೆ.ಎಸ್., ಕೀರ್ತನ್ ಎ.ಜೆ. ಹಾಗೂ ಬಿಂದುಶ್ರೀಯವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಲಾಭಾಂಶ, ಪುಸ್ತಕ, ಕೊಡೆ ವಿತರಣೆ:
ಒಕ್ಕಲಿಗ ಗೌಡ ಸಮುದಾಯ ಭವನದ ಉಸ್ತುವಾರಿ ಸಮಿತಿ ಅಧ್ಯಕ್ಷ ದಯಾನಂದ ಕೆ.ಎಸ್. ಕೊಡುಗೆಯಾಗಿ ನೀಡಿದ ಪುಸ್ತಕವನ್ನು ಸಮಾಜದ ಬಾಂಧವರ ಮಕ್ಕಳಿಗೆ ವಿತರಿಸಲಾಯಿತು. ಒಕ್ಕಲಿಗ ಸ್ವ-ಸಹಾಯ ಗುಂಪುಗಳಿಗೆ ಲಾಭಾಂಶ ಹಾಗೂ ಉತ್ತಮ ಸಂಘಗಳಿಗೆ ಬಹುಮಾನ ಹಾಗೂ ವಿದ್ಯಾರ್ಥಿಗಳಿಗೆ ಕೊಡೆ ವಿತರಿಸಲಾಯಿತು.

ಭಾರತಿ, ಶುಭಶ್ರೀ ಪ್ರಾರ್ಥಿಸಿದರು. ರಾಜೇಶ್ ಅಂಬಟ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪದ್ಮಯ್ಯ ಗೌಡ ಕಡ್ಯ, ಮೋಹನ ಗೌಡ ನಡುಬೈಲು, ಲಲಿತ ಪಜಿಮಣ್ಣು, ಚೆನ್ನಪ್ಪ ಗೌಡ ತೌಡಿಂಜ, ಶೋಭಾ ಕಂಬಳಿ, ಬಾಲಚಂದ್ರ ಗೌಡ ಕಡ್ಯ, ರಜನಿ ಕಡ್ಯ, ಕಾವ್ಯಶ್ರೀ ತೌಡಿಂಜ, ರಾಜೇಶ್ ಅಂಬಟ, ತಿಮ್ಮಪ್ಪ ಗೌಡ ನಡುಬೈಲು, ರಾಮಣ್ಣ ಗೌಡ ಪಜಿಮಣ್ಣು ಅತಿಥಿಗಳನ್ನು ತಾಂಬೂಲ ನೀಡಿ ಸ್ವಾಗತಿಸಿದರು. ರಜನಿ ಕಡ್ಯ ಪ್ರತಿಭಾ ಪುರಸ್ಕಾರದ ಪಟ್ಟಿ ಓದಿದರು. ಒಕ್ಕಲಿಗ ಸ್ವ-ಸಹಾಯ ಸಂಘಗಳ ಪ್ರೇರಕಿ ನಮಿತ ಲಾಭಾಂಶ ವಿತರಣೆ ಮಾಹಿತಿ ನೀಡಿದರು.ಮುಂಡೂರು ಗ್ರಾಮ ಸಮಿತಿ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುರೇಶ ನಡುಬೈಲು ವಾರ್ಷಿಕ ವರದಿ ವಾಚಿಸಿದರು. ಗಂಗಾಧರ ಕಲ್ಲಮ ಕಾರ್ಯಕ್ರಮ ನಿರೂಪಿಸಿದರು. ಮೋನಪ್ಪ ಗುತ್ತಿನಪಾಲು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಟಿ ತಿಂಗಳ ವಿಶೇಷ ತಿಂಡಿ, ತಿನಿಸುಗಳನ್ನು ಒಳಗೊಂಡ ಸಹ ಭೋಜನ ನಡೆಯಿತು.

LEAVE A REPLY

Please enter your comment!
Please enter your name here