ನರಿಮೊಗರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಿಲ್ಕ್ ಎನಲೈಸರ್ ಮೆಷಿನ್ ಅನಾವರಣ

0

  • ಗುಣಮಟ್ಟದ ಹಾಲು ಸಂಗ್ರಹಣೆಗೆ ಈ ಯಂತ್ರ ಸಹಕಾರಿ-ಸುರೇಶ್ ಪ್ರಭು

ಪುತ್ತೂರು: ನರಿಮೊಗರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಿಲ್ಕ್ ಎನಲೈಸರ್ ಯಂತ್ರದ ಉದ್ಘಾಟನೆ ಜು.24೪ರಂದು ನಡೆಯಿತು. ಸಂಘದ ಹಿರಿಯ ಸದಸ್ಯ ರಾಜೇಂದ್ರ ಭಟ್ ಯಂತ್ರವನ್ನು ಅನಾವಣಗೊಳಿಸಿದರು. ಸಂಘದ ಅಧ್ಯಕ್ಷ ಸುರೇಶ್ ಪ್ರಭು ಹಾಗೂ ಸದಸ್ಯ ನಾರಾಯಣ ಭಟ್ ಮಣಿಯರವರು ಯಂತ್ರಕ್ಕೆ ಚಾಲನೆ ನೀಡಿದರು.

ಗುಣಮಟ್ಟದ ಹಾಲು ಸಂಗ್ರಹಣೆ ಮಾಡಲು ಈ ಯಂತ್ರ ಸಹಕಾರಿಯಾಗಿದ್ದು ಹಾಲಿನಲ್ಲಿ ಕೊಬ್ಬು, ಸಾಂದ್ರತೆ ಮತ್ತು ನೀರಿನಂಶವನ್ನು ವಿಶ್ಲೇಷಿಸುವ ಆಧುನಿಕ ಯಂತ್ರ ಇದಾಗಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಪ್ರಭು ಹೇಳಿದರು. ಹಾಲು ಪರೀಕ್ಷಕ ರಾಜಶೇಖರ್, ನಿರ್ವಹಣಾ ಕಾರ್ಯದರ್ಶಿ ವಿಕೇಶ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here