ವಳತ್ತಡ್ಕ ಹಿದಾಯತುಲ್ ಇಸ್ಲಾಂ ಮದ್ರಸ -ಎಸ್‌ಕೆಎಸ್‌ಬಿವಿಗೆ, ನಿರ್ದೇಶಕ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಹಿದಾಯತುಲ್ ಇಸ್ಲಾಂ ಮದ್ರಸ ವಳತ್ತಡ್ಕ ಇದರ 2022-23ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟ (ಎಸ್‌ಕೆಎಸ್‌ಬಿವಿ) ಸಮಿತಿ ರಚನೆ ಮತ್ತು ವಿದ್ಯಾರ್ಥಿ ನಾಯಕಿಯರ ಆಯ್ಕೆಯನ್ನು ಚುನಾವಣೆಯ ಮೂಲಕ ನಡೆಸಲಾಯಿತು.

ಚುಣಾವಣೆಯ ಮೊದಲ ಹಂತವಾದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಕಚೇರಿಯಲ್ಲಿ ಚುನಾವಣಾಧಿಕಾರಿ ಎ.ಎಸ್.ಕೌಸರಿಯವರ ನೇತೃತ್ವದಲ್ಲಿ ನಡೆಯಿತು. ಅಧ್ಯಾಪಕರಾದ ಇಬ್ರಾಹೀಂ ಮುಸ್ಲಿಯಾರ್ ಹಾಗೂ ಕಮಿಟಿ ಪ್ರಮುಖರ ಸಮ್ಮುಖದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ೧೪ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ನಿರ್ದೇಶಕ ಸಮಿತಿಯ ಚೇರ್‌ಮೆನ್ ಆಗಿ ಇಬ್ರಾಹಿಂ ಮುಸ್ಲಿಯಾರ್ ಉರುವಾಲುಪದವು, ಕನ್ವೀನರ್ ಅಹ್ಮದ್ ಸ್ವಾಲಿಹ್ ಕೌಸರಿ ಆಯ್ಕೆಗೊಂಡರು. ಸದಸ್ಯರಾಗಿ ಅಹ್ಮದ್ ಹಾಜಿ, ಅಬ್ದುಲ್ ರಝಾಕ್ ಬಲ್ಲೇರಿ, ಇಸ್ಮಾಯಿಲ್ ಡೆಂಜಿಬಾಗಿಲು ಆಯ್ಕೆಯಾದರು.

ಎಸ್.ಕೆ.ಎಸ್.ಬಿ.ವಿ ಅಧ್ಯಕ್ಷರಾಗಿ ಮುಹಮ್ಮದ್ ಸಾನಿಲ್ ಹಸನ್, ಪ್ರಧಾನ ಕಾರ್ಯದರ್ಶಿಯಾಗಿ ಮುಯೀನುದ್ದೀನ್, ಕೋಶಾಧಿಕಾರಿಯಾಗಿ ಮುಹಮ್ಮದ್ ಆಶಿಕ್, ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ಫಾಕ್, ವಿಧ್ಯಾರ್ಥಿ ನಾಯಕಿ ಚೇರ್‌ಮೆನ್ ಆಗಿ ಅಫ್ರಾ, ಕನ್ವೀನರ್ ಆಯಿಷಾ ಶಮಾ, ಅಲಿಫ್ ಕೋಡಿನೇಟರ್ ಮುಯೀನುದ್ದೀನ್, ಅದಬ್ ಕೋಡಿನೇಟರ್ ಮುಹಮ್ಮದ್ ಸಾನಿಲ್ ಹಸನ್, ಖಿದ್ಮಾ ಕೋಡಿನೇಟರ್ ಮುಹಮ್ಮದ್ ಸ್ವಾಲಿಹ್, ಟೆಕ್ ಅಡ್ಮೀನ್ ಕೋಡಿನೇಟರ್ ಸಯ್ಯದ್ ಮಹ್‌ದೀ ಹಾಗೂ ರೇಂಜ್ ಕೌನ್ಸಿಲರ್‌ಗಳಾಗಿ ಸಲೀಂ ಸಾಹೇಬ್, ಮುಹಮ್ಮದ್ ರವೂಫ್ ಮತ್ತು ಮುಹಮ್ಮದ್ ಸ್ವಾಲಿಹ್ ಆಯ್ಕೆಗೊಂಡರು.

ಬದ್ರೀಯಾ ಜುಮಾ ಮಸೀದಿ ಕಮಿಟಿ ಗೌರವಾಧ್ಯಕ್ಷ ಸುಲೈಮಾನ್ ಬಲ್ಲೇರಿ, ಕೋಶಾಧಿಕಾರಿಯಾದ ಅಬ್ದುಲ್ ಮಜೀದ್, ಜೊತೆ ಕಾರ್ಯದರ್ಶಿ ಮುನೀರ್ ಪಂಜ, ಮುರ್ಶಿದುಲ್ ಅನಾಮ್ ಯೆಂಗ್‌ಮೆನ್ಸ್ ಅಧ್ಯಕ್ಷ ರಫೀಕ್ ಬಲ್ಲೇರಿ ಹಾಗೂ ಅಬೂ ತ್ವಾಹಿರ್ ವಳತ್ತಡ್ಕ, ಮುಹಮ್ಮದ್ ಸಲೀಂ ವಳತ್ತಡ್ಕ, ಕರೀಂ ಬಲ್ಲೇರಿ, ಇಸಾಕ್ ದರ್ಖಾಸ್, ಶರೀಫ್ ಬಲ್ಲೇರಿ, ಸಬ್ಜಾನ್ ಸಾಹೇಬ್, ಇಕ್ಬಾಲ್ ವಳತ್ತಡ್ಕ, ಮಿಸ್ಬಾಹ್, ತುಫೈಲ್, ಅನ್ಸಾರ್, ಸಿನಾನ್ ಸಿ.ಎಚ್, ರಿಝ್ವಾನ್, ಸಿನಾನ್ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here