ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ : ಸುದಾನ ಶಾಲೆ ದ್ವಿತೀಯ, ಶೌರ್ಯ ಪುನಚ್ಚ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ದರ್ಬೆ ಸಂತ ಪಿಲೋಮಿನಾ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಸುದಾನ ಶಾಲೆಯ 17ರ ವಯೋಮಾನದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 14 ರ ವಯೋಮಾನದ ಪ್ರಾಥಮಿಕ ಹುಡುಗರ ಮತ್ತು ಹುಡುಗಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದೇ ವಿಭಾಗದಲ್ಲಿ ಶೌರ್ಯ ಪುನಚ್ಚ(8) ಜಿಲ್ಲಾ ಮಟ್ಟದ ಸ್ಪರ್ದೆಗೆ ಆಯ್ಕೆಯಾಗಿದ್ದಾರೆ. ಫಾಲಿಲ್ (10), ಯಶಸ್ (10), ಸತ್ಯಪ್ರಸಾದ್ (10), ಶ್ರೀವರ್ಧನ್(10), ಮೆಹರೂಫ್ (9), ಪ್ರಥೋಶ್ (7), ನಿಕಿಲ್ (7). ಅದ್ವಿಜ್ (6), ಅಕಿಲ್ (7), ನಿದಿಶಾ (7), ರಚನಾ (7), ಶರ್ವಿನಾ(7), ಸಂಖ್ಯಾ(6) ರವರು ಪಂದ್ಯಾಟದಲ್ಲಿ ಸ್ಪರ್ಧಿಸಿರುತ್ತಾರೆ. ಯೋಗನಂದರವರು ಮತ್ತು ದೈಶಿ.ಶಿಕ್ಷಕರು ತರಬೇತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here