ಎಪಿಎಂಸಿ ರೈಲ್ವೇ ಅಂಡರ್ ಪಾಸ್- ಆರಂಭಗೊಂಡ ಕಾಮಗಾರಿ

0

ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಕಾಮಗಾರಿ ಸ್ಥಳಕ್ಕೆ ಭೇಟಿ

ಪುತ್ತೂರು: ಎಪಿಎಂಸಿ ರೈಲ್ವೇ ಅಂಡರ್ ಪಾಸ್‌ಗೆ ಸಂಬಂಧಿಸಿ ಎಪಿಎಂಸಿ ರಸ್ತೆಯ ಈಗಿರುವ ರೈಲ್ವೇಗೇಟ್‌ನಿಂದ 100 ಮೀಟರ್ ಅಂತರದಲ್ಲಿ ಸೂತ್ರಬೆಟ್ಟು ರಸ್ತೆಯಾಗಿ ರೈಲ್ವೇ ಹಳಿ ಬಳಿ ಕಾಮಗಾರಿ ಆರಂಭಗೊಂಡಿದ್ದು, ಜು. 26ರಂದು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಇಂಜಿನಿಯರ್ ಜೊತೆ ಕಾಮಗಾರಿಯ ಮಾಹಿತಿ ಪಡೆದರು.

ನೈರುತ್ಯ ರೈಲ್ವೇ ಇಂಜಿನಿಯರ್ ಕೆ.ಪಿ.ನಾಯ್ಡು ಅವರು ಈ ಸಂದರ್ಭದಲ್ಲಿ ಕಾಮಗಾರಿಯ ನಡೆಯುವ ಕುರಿತು ದಿನೇಶ್ ಮೆದು ಅವರಿಗೆ ಮಾಹಿತಿ ನೀಡಿದರು. ಸೂತ್ರಬೆಟ್ಟು ರಸ್ತೆಯ ಭಾಗ ಮತ್ತು ಹೆಬ್ಬಾರಬೈಲು ರಸ್ತೆಯ ಭಾಗದಿಂದ ನಡೆಯುವ ಕಾಮಗಾರಿಯಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಅಗಲೀಕರಣಕ್ಕೆ ಬೇಕಾಗುವಷ್ಟು ಜಾಗ ರೈಲ್ವೇ ಇಲಾಖೆಯ ವ್ಯಾಪ್ತಿಯಲ್ಲಿದೆ. ಹಾಗಾಗಿ ಈಗಾಗಲೇ ಜೆಸಿಬಿ ಮೂಲಕ ಪೊದೆಗಳ ತೆರವು ಮಾಡಿ ರೈಲ್ವೇ ಹಳಿಯ ತನಕ ಕಾಮಗಾರಿ ನಡೆಸಲು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಾಸಕರ, ಸಂಸದರ ಮೂಲಕ ಸರಕಾರದ ಹಂತದಲ್ಲಿ ವ್ಯವಸ್ಥೆ:

ಕಾಮಗಾರಿಯಲ್ಲಿ ಸಮಸ್ಯೆ ಬಂದರೆ ಮಾಹಿತಿ ನೀಡಿ ಅದನ್ನು ಶಾಸಕರ ಮತ್ತು ಸಂಸದರ ಮೂಲಕ ಸರಕಾರದ ಗಮನಕ್ಕೆ ತಂದು ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿಯುವಂತೆ ಮಾಡಿ ಎಂದು ದಿನೇಶ್ ಮೆದು ಅವರು ಇಂಜಿನಿಯರ್‌ಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಾಮಗಾರಿಯ ಗುತ್ತಿಗೆ ಪಡೆದಿರುವ ಬೆಂಗಳೂರಿನ ಎಸ್.ವಿ.ಕನ್‌ಸ್ಟ್ರಕ್ಷನ್ ಇಂಜಿನಿಯರ್ ಮನು, ಸಹಾಯಕ ಗುತ್ತಿಗೆದಾರ ರಾಮಚಂದ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here