ಪುತ್ತೂರು ನಲಿಕೆಯವರ ಸಮಾಜ ಸೇವಾ ಸಂಘ ಕಛೇರಿ ಉದ್ಘಾಟನೆ, ಪದಗ್ರಹಣ ಕಾರ್ಯಕ್ರಮ

0

ಪುತ್ತೂರು: ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ನೂತನ ಕಛೇರಿ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ದರ್ಬೆಯಲ್ಲಿ ನಡೆಯಿತು. ಹಿರಿಯರಾದ ಚೆನ್ನಮ್ಮ ಸೇಡಿಯಾಪು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಸ್ಥಾಪಕಾಧ್ಯಕ್ಷ ಚಂದ್ರ ಇದ್ಪಾಡಿಯವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಹಿರಿಯರಾದ ಕುಟ್ಟಿ ನಲಿಕೆ ಬುಳೇರಿಕಟ್ಟೆ ಮತ್ತು ಕುಂಞ ಸವಣೂರು ದೀಪ ಬೆಳಗಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ದೇವದಾಸ್ ಕುರಿಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸ್ಥಾಪಕ ಅಧ್ಯಕ್ಷ ಚಂದ್ರ ಇದ್ಪಾಡಿಯವರು ನೂತನ ಅಧ್ಯಕ್ಷ ರವಿ ಎಂಡೆಸಾಗುರವರಿಗೆ ಶಾಲು ಹಾಕಿ ಗೌರವಿಸಿ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಸಂಘಟನೆ ನಡೆದು ಬಂದ ದಾರಿ, ಕಾರ್ಯಚಟುವಟಿಕೆ ಮತ್ತು ಸಂಘಟನೆ ಬಲವರ್ಧನೆಗೆ ಸಹಕಾರ ಕೋರಿ, ನಮ್ಮ ನಲಿಕೆ ಜನಾಂಗದ ಪ್ರತಿಭೆಯನ್ನು ಸಮಾಜಕ್ಕೆ ತೋರಿಸಬೇಕೆಂದು ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಡೊಂಬಯ್ಯ ಕಾಪೆಜಾಲು, ದುರ್ಗಾಪ್ರಸಾದ್ ಕಲ್ಲಗುಡ್ಡೆ, ಶ್ರೀಧರ ಪೆರ್ಲಂಪಾಡಿ, ಮೋನಪ್ಪ ಮಾಡಾವು, ಕಿಟ್ಟ ಅಜಿಲ ಕಣಿಯಾರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಸುಬ್ರಾಯ ಕಲ್ಮಂಜರವರು ಸಂಘದ ಜವಬ್ದಾರಿ, ಸಂಘಟನೆ ಬಗ್ಗೆ ಮಾಹಿತಿ ನೀಡಿದರು. ಸಲಹೆಗಾರರಾದ ವಿಜಯ ಪಾಂಡಿ ಸಂಘದ ರೂಪುರೇಷೆಯ ಬಗ್ಗೆ ವಿವರಿಸಿದರು. ನೂತನ ಅಧ್ಯಕ್ಷ ರವಿ ಎಂಡೆಸಾಗುರವರು ಮಾತನಾಡಿ, ಸಂಘದ ಅಭಿವೃದ್ಧಿಯೊಂದಿಗೆ ಸಂಘದ ವತಿಯಿಂದ ಸಭಾಭವನ ನಿರ್ಮಿಸುವ ಬಗ್ಗೆ ಮಾತನಾಡಿ ಎಲ್ಲರ ಸಹಕಾರ ಕೋರಿದರು. ಜಿಲ್ಲಾ ಉಪಾಧ್ಯಕ್ಷ ರಾಮಣ್ಣ ಪಿಲಿಂಜ ಕಛೇರಿಗೆ 2 ಚೆಯರ್ ಹಾಗೂ ಕೋಶಾಧಿಕಾರಿ ಮೋನಪ್ಪ ಮಾಡಾವು ಮೇಜು ಕೊಡುಗೆಯಾಗಿ ನೀಡಿದರು. ಅರ್ಪಣಾ ಈಶ್ವರಮಂಗಲ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣ ಬುಳೇರಿಕಟ್ಟೆ ವರದಿ ವಾಚಿಸಿ ವಂದಿಸಿದರು. ಜಯರಾಮ ಮಾಣಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here