ಪುತ್ತೂರು ತಾಲೂಕು ಡಿ ವರ್ಗ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ಸನ್ಮಾನ

0

ಪುತ್ತೂರು: ಪುತ್ತೂರು ತಾಲೂಕು ಡಿ ವರ್ಗ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಭಡ್ತಿ ಹೊಂದಿದವರಿಗೆ ಹಾಗು ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವು ಜು.23 ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಡಿ.ಗ್ರೂಫ್ ನೌಕರ ಸಂಘದ ಜಿಲ್ಲಾಧ್ಯಕ್ಷ ಪ್ರವೀಣ್, ಕಾರ್ತಿಕ, ಎಸ್.ಡಿ.ಎ ಸಂಘದ ಅಧ್ಯಕ್ಷ ಮನೋಹರ ಎಂ.ಎಸ್, ಡಿ.ವರ್ಗ ನೌಕರ ಸಂಘದ ಮಾಜಿ ಅಧ್ಯಕ್ಷ ಗಣೇಶ್ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಚಂದ್ರ ಗೌಡ, ಉಪಾಧ್ಯಕ್ಷ ಪದ್ಮನಾಭ ಮತ್ತು ಪದಾಧಿಕಾರಿಗಳಿಗೆ ಪದಪ್ರದಾನ ಕಾರ್ಯಕ್ರಮ ನಡೆಯಿತು. ನೂತನ ಕೋಶಾಧ್ಯಕ್ಷೆ ಮೀನಾಕ್ಷಿ ತಾಲೂಕು ಪಂಚಾಯತ್, ಗೌರವಾಧ್ಯಕ್ಷ ಈಶ್ವರ ಕುಲಾಲ್, ಸಂಘಟನಾ ಕಾರ್ಯದರ್ಶಿ ಸುಷ್ಮಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭಿನಂದನೆ:
ಸರಕಾರಿ ಸೇವೆಯಲ್ಲಿ ಭಡ್ತಿ ಹೊಂದಿರುವ ವಿಠ್ಠಲ ಮತ್ತು ಲೋಕೇಶ್, ನಿವೃತ್ತಿ ಹೊಂದಿದ ಚನಿಯಪ್ಪ ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here