ಸವಣೂರು ಉ.ಹಿ.ಪ್ರಾ.ಶಾಲೆಯಲ್ಲಿ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಣೆ

0

 

ಪುತ್ತೂರು: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಕ್ಕಳ ಪೌಷ್ಟಿಕಾಂಶ ನಿವಾರಣೆ, ಪ್ರಯುಕ್ತ 1ರಿಂದ8ನೇ ತರಗತಿಯವರೆಗಿನ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಣಾ ಕಾರ್ಯಕ್ರಮದ ಉದ್ಘಾಟನೆಯು ಸವಣೂರು ಉ ಹಿ ಪ್ರಾ ಶಾಲೆಯಲ್ಲಿ ಜು. 26 ರಂದು ಜರಗಿತು.

ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಮಹಮ್ಮದ್ ಹನೀಫ್, ಸವಣೂರು ಗ್ರಾ ಪಂ, ಸದಸ್ಯೆ ಚಂದ್ರಾವತಿ ಸುಣ್ಣಾಜೆ, ಎಸ್ ಡಿ ಎಮ್ ಸಿ ಸದಸ್ಯರಾದ ನಳಿನಿ, ಉಮ್ಮರ್, ಅಶ್ರಪ್ ಇವರು ಮಕ್ಕಳಿಗೆ ಬೇಯಿಸಿದ ಮೊಟ್ಟೆ, ಬಾಳೆಹಣ್ಣು, ಚಿಕ್ಕಿಯನ್ನು ಮಕ್ಕಳಿಗೆ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಬಾಲಕೃಷ್ಣ ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೇಬಲ್ ರೋಡ್ರಿಗಸ್ ಸ್ವಾಗತಿಸಿ. ತುಳಸಿ,ಆಶಾಲತ ಕೆ, ಮಲ್ಲಿಕಾ,ಆಶಾ ಎಮ್.ಮೋಕ್ಷ ಜೆ ರೈ, ರೇವತಿ,ಕುಮಾರಿ ಹರ್ಷಿಣಿ ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here