ದರ್ಬೆ ಶ್ರೀಶಾರದಾ ಕಲಾ ಕೇಂದ್ರ ಟ್ರಸ್ಟ್‌ನ ವಾರ್ಷಿಕೋತ್ಸವ, ಶಾಸ್ತ್ರೀಯ ಸಂಗೀತ ಕಛೇರಿ

0

ಪುತ್ತೂರು : ದರ್ಬೆ ದೀಪಕ್ ಗ್ಯಾರೇಜು ಹಿಂದುಗಡೆ ವ್ಯವಹರಿಸುತ್ತಿರುವ ಶ್ರೀಶಾರದಾ ಕಲಾ ಕೇಂದ್ರ ಟ್ರಸ್ಟ್‌ನ 29ನೇ ವಾರ್ಷಿಕೋತ್ಸವ ಜು.24ರಂದು ಪುತ್ತೂರು ಪುರಸಭಾಭವನದಲ್ಲಿ ನಡೆಯಿತು.


ಗಣೇಶ್ ಡಿ.ಎಸ್.ರವರು ದೀಪಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಪಂಚರತ್ನ ಗೋಷ್ಠಿ ಗಾಯನ ನಡೆಸಿ ಕಾರ್ಯಕ್ರಮ ಆರಂಭಿಸಿದರು. ನಂತರ ಸಂಸ್ಥೆಯ ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಿರ್ವಹಿಸಿದರು. ಹಿಮ್ಮೇಳದಲ್ಲಿ ಸಂಸ್ಥೆಯ ಮೃದಂಗ ಶಿಕ್ಷಕ ವಿದ್ವಾನ್ ಶ್ಯಾಂ ಭಟ್ ಸುಳ್ಯ ಭಾಗವಹಿಸಿದರು. ಸಂಸ್ಥೆಯ ಮೃದಂಗ, ಕೊಳಲು ಹಾಗೂ ಪಿಟೀಲು ವಿದ್ಯಾರ್ಥಿಗಳು ಮೆರುಗು ಹೆಚ್ಚಿಸಿದರು.


ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮ ನಡೆಯಿತು. ಶ್ರೀಶಾರದಾ ಕಲಾ ಕೇಂದ್ರ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ ಮಾತನಾಡಿ ಶುಭಹಾರೈಸಿದರು. ಸೀತಾರಾಮ ಗೌಡ ಕುವೈಟ್ ರವರು ಮಾತನಾಡಿ ಕಲೆಗೆ ವಯಸ್ಸಿನ ಮಿತಿ ಇಲ್ಲ, ಓರ್ವ ಕಲಾವಿದನಿಗೆ ಜೀವನದಲ್ಲಿ ಧ್ಯೇಯ, ತಾಳ್ಮೆ ಹಾಗೂ ಏಕಾಗ್ರತೆ ಅತ್ಯಂತ ಅಗತ್ಯ. ಇದು ಆತನನ್ನು ಉನ್ನತ ಪದವಿಗೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ಅಂಬಿಕಾ ವಿದ್ಯಾಲಯದ ಮುಖ್ಯ ಶಿಕ್ಷಕಿ ವಿದುಷಿ ಮಾಲತಿ ಡಿ. ಮಾತನಾಡಿ ಸಂಸ್ಥೆಯ ಏಳಿಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ವ್ಯಕ್ತಿಯ ಅವಿಭಾಜ್ಯ ಅಂಗವಾಗಿ ಕಲೆಯು ಯಾವ ರೀತಿಯಲ್ಲಿ ನೆಮ್ಮದಿಯನ್ನು ನೀಡುತ್ತದೆ ಹಾಗೂ ವಿದ್ಯಾರ್ಥಿಗಳು ಕಲಾಭ್ಯಾಸದಿಂದ ಯಾವ ರೀತಿಯಲ್ಲಿ ಏಕಾಗ್ರತೆ ಸಾಧಿಸಬಹುದು ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮ ನೀಡಿದ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ವಿದುಷಿ ದಿವ್ಯಶ್ರೀಸುದರ್ಶನ್ ವಂದಿಸಿದರು.
೬.೩೦ರಿಂದ ಸಂಸ್ಥೆಯ ನೃತ್ಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಪ್ರದರ್ಶಿಸಲಾಯಿತು. ಹಿಮ್ಮೇಳ ಕಲಾವಿದರುಗಳಾಗಿ ಹಾಡುಗಾರಿಕೆ, ನಟುವಾಂಗ ಹಾಗೂ ನಿರ್ದೇಶನ ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್, ಕೊಳಲಿನಲ್ಲಿ ಕೃಷ್ಣ ಕುಮಾರ್ ಪುತ್ತೂರು, ಮೃದಂಗದಲ್ಲಿ ವಿದ್ವಾನ್ ಶ್ಯಾಂ ಭಟ್ ಸುಳ್ಯ, ಕೀಬೋರ್ಡ್‌ನಲ್ಲಿ ಬಿ.ಎಸ್ ಕಾರಂತ ರಾಮಕುಂಜ ಸಹಕರಿಸಿದರು. ಕಿಶೋರ್ ಕುಮಾರ್ ಪುತ್ತೂರು ವರ್ಣಾಲಂಕಾರ ಹಾಗೂ ದುರ್ಗಾ ಸೌಂಡ್ಸ್ ಪುತ್ತೂರು ಧ್ವನಿ ಮತ್ತು ಬೆಳಕು ನೀಡಿ ಸಹಕರಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ಹಾಗೂ ವಿದುಷಿ ಸಂಧ್ಯಾಗಣೇಶ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here