ಪೆರ್ಲಂಪಾಡಿಯಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

0

ಪುತ್ತೂರು: ಕೊಳ್ತಿಗೆ ಗ್ರಾಮದ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಜು.25ರಂದು ಪೆರ್ಲಂಪಾಡಿಯ ಸುರಕ್ಷಾ ಸಂಕೀರ್ಣದಲ್ಲಿ ಶಾಸಕ ಸಂಜೀವ ಮಠಂದೂರುರವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು ಕರ್ನಾಟಕ ಸರ್ಕಾರದ ಬೇರೆ ಬೇರೆ ಇಲಾಖೆಗೆ ಸಂಬಂಧಪಟ್ಟ ಸವಲತ್ತು ಸೌಲಭ್ಯಗಳು, ಅದೇ ರೀತಿ ಅದರ ಮಾಹಿತಿ ಒಂದೇ ಕಡೆ ಸಿಗಲು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡಲು ಗ್ರಾಮೀಣ ಭಾಗದಲ್ಲಿ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಮೂಲಕ ಕೊಡಿಸುವಂತಹ ಕಾರ್ಯವನ್ನು ಸರಕಾರ ಮಾಡಿದೆ ಎಂದರು. ಅದೇ ರೀತಿ ಸುಮಾರು ೭೦೦ಕ್ಕೂ ಅಧಿಕ ಸೇವೆಗಳು ಕೇಂದ್ರ ಹಾಗೂ ರಾಜ್ಯ ಸರಕಾರ ಮತ್ತು ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್‌ನಿಂದ ಜನರಿಗೆ ಕೊಡಬಹುದಾದ ಸೌಲಭ್ಯಗಳನ್ನು ಗ್ರಾಮ ಒನ್ ಕೇಂದ್ರದ ಮೂಲಕ ಜನರು ಪಡೆದುಕೊಳ್ಳಬಹುದು. ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಸರ್ಕಾರಿ ಕಛೇರಿಗಳಿಗೆ ಅಲೆದಾಡುವುದು, ಭ್ರಷ್ಟಾಚಾರ ಕಡಿಮೆ ಮಾಡಲು ಅನುಕೂಲವಾಗುವುದು. ಇಲಾಖೆಗೆ ಸಂಬಂಧಪಟ್ಟ ಸೇವೆ, ಆರ್.ಟಿ.ಸಿ, ದಾಖಲೆ ಪತ್ರಗಳು, ಪೆನ್ಷನ್, ಇನ್ನಿತರ ಸೇವೆಗಳನ್ನು ಕೂಡ ಗ್ರಾಮ ಒನ್ ಕೇಂದ್ರದ ಮೂಲಕ ಜನರು ಪ್ರಯೋಜನ ಪಡೆದುಕೊಳ್ಳಬಹುದು ಎಂದರು. ಗ್ರಾಮೀಣ ಭಾಗದಲ್ಲಿ ಜನರಿಗೆ ಸಹಕಾರಿಯಾಗುವಂತೆ ಇಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಂತಹ ಪ್ರದೀಪ್ ಕೊಂರ್ಬಡ್ಕ ದೊಡ್ಡಮನೆರವರನ್ನು ಶಾಸಕರು ಶ್ಲಾಘಿಸಿದರು.

ಪುತ್ತೂರು ತಾಲೂಕು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರ. ಕಾರ್ಯದರ್ಶಿ ನಿತೀಶ್ ಶಾಂತಿವನ, ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ಯಾಮಸುಂದರ ರೈ ಕೆರೆಮೂಲೆ, ಉಪಾಧ್ಯಕ್ಷ ನಾಗವೇಣಿ ಕೆ., ಸದಸ್ಯರಾದ ಯತೀಂದ್ರ ಗೌಡ ಕೊಚ್ಚಿ, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ್ ಕುಮಾರ್ ರೈ ದುಗ್ಗಳ, ಪುತ್ತೂರು ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ತೀರ್ಥಾನಂದ ಗೌಡ ದುಗ್ಗಳ, ಜನಾರ್ದನ ಗೌಡ ಪೆರ್ಲಂಪಾಡಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶಿವರಾಮ ಭಟ್ ಬಿರ್ಣಕಜೆ, ಉದಯಕುಮಾರ್ ಜಿ.ಕೆ, ಸುಧೀರ್ ಕಟ್ಟಪುಣಿ, ಕೆ.ಡಿ.ಪಿ ಸದಸ್ಯರಾದ ಭಾಸ್ಕರ ರೈ ಕಂಟ್ರಮಜಲು, ಶ್ರೀಷಣ್ಮುಖದೇವ ದೇವಸ್ಥಾನ ಬಾಯಂಬಾಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಿರಾಜ್ ಪಾಂಬಾರು, ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳಾದ ವಿಶ್ವನಾಥ್ ಶೆಟ್ಟಿ, ತಿರುಮಲೇಶ್ವರ ದೊಡ್ಡಮನೆ, ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ ಇದರ ಸಂಚಾಲಕರಾದ ಗಣೇಶ್ ಭಟ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಮೋಕ್ಷಿತ್ ಬಾಯಂಬಾಡಿ, ಬಿಜೆಪಿ ಯುವ ಮೋರ್ಚಾ ನರಿಮೊಗರು ಮಹಾಶಕ್ತಿ ಕೇಂದ್ರದ ಪ್ರ.ಕಾರ್ಯದರ್ಶಿ ಮಂಜುನಾಥ್ ದುಗ್ಗಳ, ಶೀನಪ್ಪ ಗೌಡ ಮಾಲೆತ್ತೋಡಿ, ನಾರಾಯಣ ಗೌಡ ಕೊಂರ್ಬಡ್ಕ, ಆನಂದ ಗೌಡ ಕರ್ತಡ್ಕ ಹಾಗೂ ಪ್ರಮುಖರು, ಪಕ್ಷದ ಮುಖಂಡರುಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಶಾಸಕರನ್ನು ಸುರಕ್ಷಾ ಸಂಕೀರ್ಣ ಕಟ್ಟಡದ ಮಾಲಕರಾದ ವೀರಪ್ಪ ಗೌಡ ಪೆರ್ಲಂಪಾಡಿರವರು ಶಾಲು ಹಾಕಿ ಗೌರವಿಸಿದರು.
ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಮಾಲಕರಾದ ಪ್ರದೀಪ್ ಕೊಂರ್ಬಡ್ಕ ದೊಡ್ಡಮನೆ, ಭಾಗ್ಯಶ್ರೀ ಕರ್ತಡ್ಕ ಹೂ ಗುಚ್ಛ ನೀಡಿ ಅತಿಥಿಗಳನ್ನು ಸ್ವಾಗತಿಸಿದರು.
ಕೊಳ್ತಿಗೆ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರಾದ ಸತೀಶ್ ಪಾಂಬಾರು ಕಾರ್ಯಕ್ರಮ ನಿರೂಪಿಸಿ, ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ಅಶೋಕ್ ಒರ್ಕೊಂಬು ವಂದಿಸಿದರು.

LEAVE A REPLY

Please enter your comment!
Please enter your name here