ಕುಟ್ರುಪಾಡಿ: ಮಧ್ಯ ರಾತ್ರಿ ಮನೆಗೆ ನುಗ್ಗಿ ತಪಾಸಣೆ ನಡೆಸಿ ಹೋದ ಕಡಬ ಪೊಲೀಸರು! ಕಾರಣ ತಿಳಿಯದೆ ಮನೆಯವರು ಆತಂಕದಲ್ಲಿ…

0

ಕಡಬ: ಮಧ್ಯರಾತ್ರಿ ಬಾಗಿಲು ಬಡಿದು ದಿಢೀರ್ ಮನೆಯೊಳಗೆ ಬಂದ ಪೊಲೀಸರನ್ನು ಕಂಡು ಮನೆ ಮಂದಿ ಗಲಿಬಿಲಿಗೊಂಡ ಘಟನೆ ಭಾನುವಾರ ರಾತ್ರಿ ಕುಟ್ರುಪ್ಪಾಡಿ ಗ್ರಾಮದಲ್ಲಿ ನಡೆದಿದೆ.

ಬಜೆತ್ತಡ್ಕದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮನೆಗೆ ರಾತ್ರಿ 12:30 ಕ್ಕೆ ಬಂದ ಖಾಕಿಧಾರಿಗಳು ಬಾಗಿಲು ಬಡಿದು ಮನೆ ಮಂದಿಯನ್ನು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಬಳಿಕ ಮನೆಯೊಳಗೆ ನಿದ್ರಿಸಿದ್ದ ಓರ್ವನ ಕಾಲುಗಳನ್ನು ಟಾರ್ಚ್ ಬಳಸಿ ಸೂಕ್ಷ್ಮವಾಗಿ ಗಮನಿಸಿ ಬಳಿಕ ಮನೆಯ ಇನ್ನೊಂದು ಬಾಗಿಲಿನಲ್ಲೂ ಹುಡುಕಾಟ ನಡೆಸಿದ್ದಾರೆ. ಪೊಲೀಸರನ್ನು ಕಂಡು ಮನೆಮಂದಿ ಗಲಿಬಿಲಿಗೊಂಡಿದಲ್ಲದೆ ಮನೆ ಮಂದಿ ಕಾರಣ ಕೇಳಿದಾಗ ಉತ್ತರಿಸದೆ ಹೋದ ಕಾರಣ ಮನೆ ಮಂದಿ ಆತಂಕದಲ್ಲಿರುವುದಾಗಿ ತಿಳಿದು ಬಂದಿದೆ.

ಕಾರಣ ತಿಳಿಸಿದರೆ ಗೊಂದಲ ನಿವಾರಣೆ:
ಈ ಮಾಹಿತಿ ನೀಡಿರುವ ಮನೆಯವರು ಪೋಲಿಸರು ರಾತ್ರೋ ರಾತ್ರಿ ಮನೆಗೆ ನುಗ್ಗಿ ತಪಾಷಣೆ ನಡೆಸಿ ಬಳಿಕ ಏನೂ ಹೇಳದೆ ಹೋಗಿರುವುದು ಸರಿಯಾ ಒಂದು ವೇಳೆ ಬೇರೆ ಏನಾದರೂ ವಿಚಾರಕ್ಕೆ ಸಂಬಂಧಿಸಿ ಸಂಶಯದಲ್ಲಿ ಬಂದಿದ್ದರೂ ಬಳಿಕವಾದರೂ ಕಾರಣ ತಿಳಿಸಬಹುದಲ್ವ ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕೆ   ಪೊಲೀಸರೇ ಉತ್ತರಿಸಬೇಕಷ್ಟೆ.

LEAVE A REPLY

Please enter your comment!
Please enter your name here