ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

0

 

ಪುತ್ತೂರು: ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರರವರು, ರಾಜ್ಯಶಾಸ್ತ್ರ ವಿದ್ಯಾರ್ಥಿಗಳು ರೂಪಿಸಿದ ಜ್ಞಾನಬಿಂಬ ಎಂಬ ಭಿತ್ತಿಪತ್ರಿಕೆಯ ಕಾರ್ಗಿಲ್ ವಿಜಯ್ ದಿವಸ್ ಎಂಬ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ರೇಖಾ ಕೆ. ಮಾತನಾಡಿ, ಕಾರ್ಗಿಲ್ ದಿನದ ಮಹತ್ವವನ್ನು ವಿವರಿಸಿದರಲ್ಲದೆ, ದೇಶದ ಗಡಿ ನುಗ್ಗಲು ಯತ್ನಿಸಿದ ಪರಕೀಯರಿಗೆ ಪಾಠ ಕಲಿಸಿದ ದಿನವಾದ ಜು.26ನ್ನು ಭಾರತೀಯರು ಸುವರ್ಣಕ್ಷರಗಳಲ್ಲಿ ಬರೆದಿದಬಹುದಾದ ದಿನವಾಗಿದೆ. ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದ ಅವರು, ಭಾರತೀಯರಾದ ನಾವೆಲ್ಲ ದೇಶಕ್ಕಾಗಿ ತ್ಯಾಗ ಬಲಿದಾನಗೈಯುವ ಯೋಧರನ್ನು ಸದಾ ಸ್ಮರಿಸೋಣ ಎಂದರು.

ಕಾರ್ಯಕ್ರಮದಲ್ಲಿ ತೃತೀಯ ಬಿ. ಎ ಬಿ.ಎಲ್ ಎಲ್ ಬಿ ಯ ವಿದ್ಯಾರ್ಥಿನಿ ಸ್ವರ್ಣಗೌರಿ, ದ್ವಿತೀಯ ಬಿ.ಎ ಬಿ.ಎಲ್ ಎಲ್ ಬಿ.ಯ ವಿದ್ಯಾರ್ಥಿ ಸೂರ್ಯ ಹಾಗೂ ಪ್ರಥಮ ಬಿ.ಎ ಬಿ.ಎಲ್ ಎಲ್ ಬಿ.ಯ ವಿದ್ಯಾರ್ಥಿ ಮನ್ವಿತ್ ಗೌಡ ಕಾರ್ಗಿಲ್ ದಿನಾಚರಣೆಯ ಹಿನ್ನಲೆಯಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ದೇಶವನ್ನು ನೆನೆಯುವ, ಯೋಧರಿಗೆ ಗೌರವ ಸಲ್ಲಿಸುವ ವಿಶೇಷ ದೇಶಭಕ್ತಿಗೀತೆಗಳನ್ನು ವಿದ್ಯಾರ್ಥಿಗಳಾದ ಕು. ಗಾಯತ್ರಿ, ಕು.ವಾಣಿ, ಕು. ಶ್ರೀರಕ್ಷಾ, ಕು. ಪ್ರತೀಕ್ಷಾ, ಕು. ಸೌರಭ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಸಹಾಯಕ ಪ್ರಾಧ್ಯಾಪಕ  ಸಂಗೀತಾ ಎಸ್ ಎಂ,  ಸುಭಾಷಿನಿ ಜೆ, ಕೌಶಿಕ್ ಸಿ, ಕು. ಶ್ರೀರಕ್ಷಾ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಗೀತಾಗೌರಿ, ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕಿ  ಸಂಧ್ಯಾ ಪಿ.ಎಂ, ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಕುಮಾರ್ ಎಂ.ಕೆ, ಕಂಪ್ಯೂಟರ್ ಸಹಾಯಕ  ತಿಲಕ್ ಟಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿ ನಾಯಕ ನಿಶಾನ್ ವಂದಿಸಿದರು.

 

LEAVE A REPLY

Please enter your comment!
Please enter your name here