ಪುತ್ತೂರು : ಹಿಂದು ಜಾಗರಣ ವೇದಿಕೆ ಈಶ್ವರಮಂಗಲ ಇದರ ವತಿಯಿಂದ ಈಶ್ವರಮಂಗಲದ ಹೃದಯ ಭಾಗದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತದ ಬಳಿ ಕಾರ್ಗಿಲ್ ವಿಜಯೋತ್ಸವ ಮತ್ತು ಹುತಾತ್ಮರಿಗೆ ನುಡಿ ನಮನ ಕಾರ್ಯಕ್ರಮ ಜು.26ರಂದು ಸಂಜೆ ನಡೆಯಿತು.
ನಿವೃತ್ತ ಯೋಧರಿಗೆ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಹೂ ಗುಚ್ಛ ನೀಡಿ ಗೌರವಿಸಲಾಯಿತು. ನಿವೃತ ಯೋಧ ನಾರಾಯಣ ರೈ ಬೆಡಿಗದ್ದೆಯವರು ದೀಪ ಬೆಳಗಿಸಿದರು. ಪೂರ್ಣತ್ಮಾ ರಾಮ್, ಹಿಂದು ಜಾಗರಣ ವೇದಿಕೆಯ ಗೌರವಾಧ್ಯಕ್ಷ ಶ್ರೀಕೃಷ್ಣ ಭಟ್ ಮುಂಡ್ಯ, ಶ್ರೀಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಮ ಪಿ, ನಿವೃತ ಶಿಕ್ಷಕ ಆನಂದ ರೈ ಸಾಂತ್ಯರವರು ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಮಾತನಾಡಿದರು. ನಿವೃತ ಯೋಧ ರವಿರಾಜ್ ಪುಂಡಿಕಾಯಿ, ನೆಟ್ಟಣಿಗೆ ಮುಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ದೀಪಕ್ ಕುಮಾರ್ ಮುಂಡ್ಯ, ರೈತ ಸಂಘದ ಮುಖಂಡ ಅಮರನಾಥ ಆಳ್ವ, ರಾಜೇಶ್ ಪಂಚೋಡಿ, ಪರಿವಾರದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು. ಅಕ್ಷಣ ಮತ್ತು ಅರ್ಪಣ ಸಹೋದರಿಯರು ವಂದೇ ಮಾತರಂ ಹಾಡಿದರು.