ಜು. 29: ಉಷಾ ಪಾಲಿಕ್ಲಿನಿಕ್‌ನಲ್ಲಿ ಡಾ.ಅರವಿಂದ್ ರೈರವರಿಂದ ಉಚಿತ ಮೂಲವ್ಯಾಧಿ ತಪಾಸಣಾ ಶಿಬಿರ

0

ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಉಷಾ ಪಾಲಿಕ್ಲಿನಿಕ್ ಸಹಯೋಗದೊಂದಿಗೆ ಜುಲೈ 29ರಂದು ಬೆಳಗ್ಗೆ 10 ಗಂಟೆಯಿಂದ 1 ಗಂಟೆ ತನಕ ಉಚಿತ ಮೂಲವ್ಯಾಧಿ /ಫೈಲ್ಸ್, ಫಿಸ್ಟುಲಾ, ಫಿಶರ್ ತಪಾಸಣಾ ಶಿಬಿರ ನಡೆಯಲಿದೆ. ಮಲ ವಿಸರ್ಜನೆ ಮಾಡುವಲ್ಲಿ ಗೆಡ್ಡೆ, ತುರಿಕೆ, ಮಲಬದ್ಧತೆ, ರಕ್ತ ಹೋಗುವ ಸಮಸ್ಯೆ ಇದ್ದವರು ಈ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು. ಖ್ಯಾತ ಶಸ್ತçಚಿಕಿತ್ಸಾ ತಜ್ಞರಾದ ಡಾ.ಅರವಿಂದ ರೈರವರು ತಪಾಸಣೆ ನಡೆಸಲಿದ್ದಾರೆ. ಅಪಾಯಿಂಟ್‌ ಮೆಂಟ್ ಪಡಕೊಂಡವರಿಗೆ ಮಾತ್ರ. ಹೆಚ್ಚಿನ ಮಾಹಿತಿಗೆ 9008256005 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here