ಪುತ್ತೂರು:ನಿವೃತ್ತ ಎಆರ್ಎಸ್ಐ ಉಮೇಶ್ ರಾವ್ ಅವರ ತಾಯಿ ರಾಜೀವಿ(94ವ)ರವರು ಜು.27ರಂದು ಸ್ವಗೃಹದಲ್ಲಿ ನಿಧನರಾದರು. ಸಾಲ್ಮರ ಸಂಕೀರ್ತನಾ ನಿಲಯ ದಿ.ದಾಮೋದರ ರಾವ್ ಅವರ ಪತ್ನಿ ರಾಜೀವಿ ಅವರು ವಯೋಸಹಜವಾಗಿ ನಿಧನರಾದರು. ಮೃತರು ಪುತ್ರರಾದ ಗಣೇಶ್ ಬೀಡಿ ಸಂಸ್ಥೆಯ ನಿವೃತ್ತ ಉದ್ಯೋಗಿ ಪುರುಷೋತ್ತಮ ರಾವ್, ಕೃಷಿಕ ದಿವಾಕರ ರಾವ್, ನಿವೃತ್ತ ಎಆರ್ಎಸ್ಐ ಉಮೇಶ್ ರಾವ್, ಉದ್ಯಮಿ ರವೀಂದ್ರ ರಾವ್, ಪುತ್ರಿಯರಾದ ಯಶೋದಾ, ರೋಹಿಣಿ, ಸೊಸೆಯಂದಿರು, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಇಂದು ಅಂತ್ಯಕ್ರಿಯೆ:
ಮೃತ ರಾಜೀವಿ ಅವರ ಅಂತ್ಯಕ್ರಿಯೆಯನ್ನು ಜು.೨೮ರಂದು ನೆರವೇರಿಸಲಾಗುವುದು ಎಂದು ಮೃತರ ಪುತ್ರ ಉಮೇಶ್ ರಾವ್ ಅವರು ತಿಳಿಸಿದ್ದಾರೆ.