ಶಾಲಾ ಸಮಯದಲ್ಲಿ ಒಂದೇ ಬಸ್ಸು..! ನೇತಾಡುತ್ತಲೇ ಪ್ರಯಾಣಿಸುವ ವಿದ್ಯಾರ್ಥಿಗಳು

0

ಪುತ್ತೂರು; ಬಡಗನ್ನೂರು ಗ್ರಾಮದ ಸುಳ್ಯಪದವುಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು ಈ ಕಾರಣಕ್ಕೆ ಆ ಭಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಸಂಕಷ್ಟ ಪಡುವಂತಾಗಿದೆ.

ಸುಳ್ಯಪದವಿನಿಂದ ಪ್ರತೀ ದಿನ ಬೆಳಿಗ್ಗೆ 8.30 ಕ್ಕೆ ಪುತ್ತೂರಿಗೆ ಬಸ್ ಹೊರಡುತ್ತಿತ್ತು. ಆದರೆ ಕೆಲದಿನಗಳಿಂದ ಬಸ್ ವೇಳಾ ಪಟ್ಟಿಯನ್ನು ಕೆಎಸ್‌ಆರ್‌ಟಿಸಿ ಬದಲಾವಣೆ ಮಾಡಿತ್ತು. ಅ ಬಳಿಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಸ್ ವ್ಯವಸ್ಥೆಯಲ್ಲಿ ಲೋಪವಾಗಿದೆ. ಈ ಮೊದಲು ಬೆಳಿಗ್ಗೆ 8.15 ಕ್ಕೆ ಸುಳ್ಯಪದವಿನಿಂದ ಪುತ್ತೂರು ಕಡೆಗೆ ಖಾಸಗಿ ಬಸ್ ವ್ಯವಸ್ಥೆ ಇತ್ತು. ಅದೇ ಸಮಯಕ್ಕೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದೇ ಸಮಯಕ್ಕೆ ಎರಡು ಬಸ್ ಹೊರಡುವುದರಿಂದ ಖಾಸಗಿ ಬಸ್ ಮಾಲಕರು ತನ್ನ ಸಮಯವನ್ನು ಬದಲಾವಣೆ ಮಾಡಿದ್ದಾರೆ. ಖಾಸಗಿ ಬಸ್ ವ್ಯವಸ್ತೆಯು ರದ್ದುಗೊಂಡ ಕಾರಣ ಎರಡು ಬಸ್ಸಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳು ಒಂದೇ ಬಸ್ಸಿನಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ನೇತಾಡುತ್ತಲೇ ವಿದ್ಯಾರ್ಥಿಗಳ ಪ್ರಯಾಣ

ಸುಳ್ಯಪದವಿನಿಂದ ಪುತ್ತೂರು ಸೇರಿದಂತೆ ಸ್ಥಳೀಯ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬಸ್ಸಿನಲ್ಲಿ ಸ್ಥಳವಕಾಶವಿಲ್ಲದೆ ಬಾಗಿಲಲ್ಲೇ ನೇತಾಡಿಕೊಂಡು ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸುಳ್ಯಪದವು ಮಾರ್ಗದಲ್ಲಿ ಪಟ್ಟೆಯಾಗಿ ಸಂಚರಿಸುವ ಏಕೈಕ ಸರಕಾರಿ ಬಸ್ಸಿನಲ್ಲಿ ವಿದ್ಯಾರ್ಥಿಗಳೇ ತುಂಬಿ ಹೋಗುತ್ತಿರುವ ಕಾರಣ ಸಾರ್ವಜನಿಕರು ಬಸ್ಸಿನಲ್ಲಿ ಪ್ರಯಾಣ ಮಾಡಲು ಅಸಾಧ್ಯವಾಗಿದೆ. ಕೆಎಸ್‌ಆರ್‌ಟಿಸಿ ಬಸ್ಸಿನ ವೇಳಾ ಪಟ್ಟಿ ಬದಲಾವಣೆಯಿಂದ ಇಲ್ಲಿ ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ಆರೋಪಿಸಿದ್ದಾರೆ. ಸಂಬಂಧಿಸಿದ ಇಲಾಖೆಯವರು ತಕ್ಷಣವೇ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here