ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನಲ್ಲಿ ಪ್ರತಿಭಾ ಕಾರಂಜಿ, ಕ್ಲಬ್‌ಗಳ ಉದ್ಘಾಟನೆ

0

 

ನೆಲ್ಯಾಡಿ: ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂಕರವಾಗಿರುವ ಡ್ಯಾನ್ಸ್, ಸಂಗೀತ, ಯೋಗತರಬೇತಿ, ಕರಾಟೆ, ಸ್ಕೇಟಿಂಗ್ ಹಾಗೂ ಅಬಾಕಸ್ ತರಬೇತಿ ನೀಡುವ ಕ್ಲಬ್‌ಗಳ ಉದ್ಘಾಟನೆ ಜು.22ರಂದು ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲೆಯ ಹಳೆವಿದ್ಯಾರ್ಥಿಗಳಾದ ನೃತ್ಯ ಕಲಾವಿದೆ ಆಪ್ತ ಶೆಟ್ಟಿ, ಪೆನ್ಸಿಲ್ ಆರ್ಟ್‌ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮನ್ಸೂರ್‌ರವರು ತಮ್ಮ ಸೃಜನಾತ್ಮಕತೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲರಾದ ರೆ.ಫಾ.ತೋಮಸ್ ಬಿಜಿಲಿ ಒಐಸಿ, ಕೋಶಾಧಿಕಾರಿ ರೆ.ಫಾ.ಜೈಸನ್ ಸೈಮನ್, ಉಪಪ್ರಾಂಶುಪಾಲರಾದ ಜೋಸ್ ಎಂ.ಜೆ., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ರಹಾಂ ಕೆ.ಪಿ., ಉಪಸ್ಥಿತರಿದ್ದರು. ವಿವಿಧ ಕ್ಲಬ್‌ಗಳ ಉಸ್ತುವಾರಿ ವಹಿಸಿದ ಶಿಕ್ಷಕರಾದ ಸುರೇಖ, ಹರೀಶ್, ಅಲ್ಫೋನ್ಸಾ, ಪದ್ಮಾವತಿ, ವಿಜೇಶ್ ಬಿಳಿನೆಲೆ, ಪ್ರಶಾಂತ್‌ರವರನ್ನು ಸಂಸ್ಥೆಯ ಶಿಕ್ಷಕಿ ಎಲಿಜಬೆತ್‌ರವರು ಪರಿಚಯಿಸಿದರು. ಜೈನಾಬ್ ಪಿದಾ ನಿರೂಪಿಸಿದರು. ಏಂಜಲ್ ಪ್ರಕಾಶ್ ಸ್ವಾಗತಿಸಿ, ಏಂಜಲಿನಾ ವರ್ಗೀಸ್ ವಂದಿಸಿದರು. ಶಿಕ್ಷಕಿ ಲಿಸ್ಸಿ ಕೆ.ಜೆ.,ಪ್ರತಿಭಾ ಕಾರಂಜಿ ನಿರ್ವಹಣೆಯ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here