ಜು.31:ಕೊಂಬೆಟ್ಟು ಶಿಸ್ತಿನ ಟೀಚರ್ ಗೀತಾಮಣಿಯವರಿಗೆ ನಿವೃತ್ತಿ

0

ಪುತ್ತೂರು:ಕೊಂಬೆಟ್ಟು ಸ.ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಕಳೆದ ಸುದೀರ್ಘ 36 ವರ್ಷಗಳ ಸೇವೆ ಸಲ್ಲಿಸಿದ `ಶಿಸ್ತಿನ ಟೀಚರ್’ ಎಂದೇ ಚಿರಪರಿಚಿತರಾಗಿರುವ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಮಣಿ ಅವರು ಜು.೩೧ರಂದು ನಿವೃತ್ತಿ ಹೊಂದಲಿದ್ದಾರೆ. ಶ್ರೀಮತಿ ಗೀತಾಮಣಿ ಎಸ್.ರವರು 19.07.1986ರಂದು ವೃತ್ತಿಗೆ ಸೇರಿದ್ದರು.

 

ಉಪ್ಪಿನಂಗಡಿ ಸಾಂತ್ಯ ತಿಮ್ಮಯ್ಯ ಪೂಜಾರಿ ಮತ್ತು ಜಾನಕಿ ದಂಪತಿಯ ಏಳು ಮಕ್ಕಳಲ್ಲಿ ಹಿರಿಯ ಮಗಳಾಗಿ ಗೀತಾಮಣಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉಪ್ಪಿನಂಗಡಿಯ ಸಂತ ಫಿಲೋಮಿನಾ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿಯಲ್ಲಿ ಪೂರೈಸಿ, ತಮ್ಮ ವೃತ್ತಿಪರ ಶಿಕ್ಷಣ ಸಿಪಿಎಡ್ ಅನ್ನು ಎಂ ಕೆ ಅನಂತರಾಜ್, ಸಿಒಇಡಿ ಅನ್ನು ಕಾಲೇಜ್ ಮೂಡಬಿದ್ರೆ ಇಲ್ಲಿ ಪೂರೈಸಿ, 1986 ರಂದು ಸರಕಾರಿ ಪದವಿ ಪೂರ್ವ ಕಾಲೇಜ್ ಕೊಂಬೆಟ್ಟು ಇಲ್ಲಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿ, ಇದೇ ಸಂಸ್ಥೆಯಲ್ಲಿ 36 ವರ್ಷಗಳ ಕರ್ತವ್ಯ ನಿರ್ವಹಿಸಿದ್ದಾರೆ.ತಮ್ಮ ಸುಧೀರ್ಘ ಸೇವಾವಧಿಯಲ್ಲಿ ಅನೇಕ ಬಾರಿ ಖೋ ಖೋ, ತ್ರೋಬಾಲ್, ಟೇಬಲ್ ಟೆನ್ನಿಸ್, ಶಟ್ಲ್ ಬ್ಯಾಡ್ಮಿಂಟನ್, ಮತ್ತು ಬಾಲ್ ಬ್ಯಾಡ್ಮಿಂಟನ್ ತಂಡಗಳಲ್ಲಿ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಕರೆದೊಯ್ದಿದ್ದರು.ಇದಲ್ಲದೆ ಹರ್ಡಲ್ಸ್, ಶಾಟ್ ಪುಟ್, ಡಿಸ್ಕಸ್ ತ್ರೋ ಮತ್ತು ಕಬಡ್ಡಿ ಪ್ರತಿಭೆಗಳನ್ನು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದ್ದರು.ಇವರ ಪತಿ ಜಯಂತ ಪೂಜಾರಿ, ಪುತ್ರರಾದ ಅಜಯ್ ಜಿ,ಎಸ್, ವಿಜಯರ್ ಜೆ.ಎಸ್ ಹಾಗು ಪುತ್ರಿ ಶಿತಿ ಆಗಿದ್ದು, ಸಾರಕೆರೆ ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here