ಉಪ್ಪಿನಂಗಡಿ ಯುವವಾಹಿನಿ ಘಟಕದಿಂದ ಪ್ರವೀಣ್ ನೆಟ್ಟಾರುರವರಿಗೆ ನುಡಿನಮನ

0

ಪುತ್ತೂರು : ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಸಮಾಜ ಸೇವಕ, ಧಾರ್ಮಿಕ ಮುಂದಾಳು, ರಾಜಕೀಯ ಮುಖಂಡ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ, ಉಪ್ಪಿನಂಗಡಿ ಯುವವಾಹಿನಿ ಘಟಕದ ನಿಕಟಪೂರ್ವ ಸಂಘಟನಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ರವರಿಗೆ ಉಪ್ಪಿನಂಗಡಿ ಯುವವಾಹಿನಿ ಘಟಕದಿಂದ ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್‌ನಲ್ಲಿ ನುಡಿನಮನ ನಡೆಯಿತು. ಘಟಕದ ಗೌರವ ಸಲಹೆಗಾರ ವರದ್‌ರಾಜ್ ಎಂ. ಮೃತರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಗೌರವ ಸಲ್ಲಿಸಿದರು. ಘಟಕದ ಗೌರವ ಸಲಹೆಗಾರ ಕರುಣಾಕರ ಸುವರ್ಣ ಮತ್ತು ಡಾ, ರಾಜರಾಮ್ ಕೆ.ಬಿ ನುಡಿನಮನ ಸಲ್ಲಿಸಿದರು. ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತುಕಲಸೆ, ಮಾಜಿ ಅಧ್ಯಕ್ಷ ಡಾ. ಸದಾನಂದ ಕುಂದರ್, ಅಶೋಕ್ ಕುಮಾರ್ ಪಡ್ಪು, ಜಯವಿಕ್ರಂ ಕಲ್ಲಾಪು, ಅಜಿತ್ ಕುಮಾರ್ ಪಾಲೇರಿ, ಕೃಷ್ಣಪ್ಪ ಪೂಜಾರಿ ಕಲ್ಲೇರಿ, ಡೀಕಯ್ಯ ಗೌ೦ಡತ್ತಿಗೆ, ಗುಣಕರ ಅಗ್ನಾಡಿ, ಚಂದ್ರಶೇಖರ್ ಸನೀಲ್, ಲೋಕೇಶ್ ಬೆತ್ತೋಡಿ, ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here