ಜುಲೈ 31: ಪುತ್ತೂರು ಸ್ಕಿನ್ ಕ್ಲಿನಿಕ್, ಲೇಸರ್ ಸೆಂಟರ್‌ನಲ್ಲಿ ಅತ್ಯಾಧುನಿಕ ಲೇಸರ್ ಯಂತ್ರಗಳ ಅನಾವರಣ

0

ಪುತ್ತೂರು: ಬೊಳುವಾರಿನಲ್ಲಿರುವ ಪುತ್ತೂರು ಸ್ಕಿನ್ ಕ್ಲಿನಿಕ್, ಲೇಸರ್ ಸೆಂಟರ್‌ನಲ್ಲಿ ಅತ್ಯಾಧುನಿಕಲೇಸರ್ ಯಂತ್ರದ ಉದ್ಘಾಟನಾ ಸಮಾರಂಭ ಜುಲೈ 31ರಂದು ನಡೆಯಲಿದೆ.

ಡರ್ಮಟಾಲಜಿ, ಕಾಸ್ಮೆಟೋಲಜಿ ಹಾಗೂ ಲೇಸರ್ ಚಿಕಿತ್ಸೆಯಲ್ಲಿ ಖ್ಯಾತಿ ಹೊಂದಿರುವ ಪುತ್ತೂರು ಸ್ಕಿನ್ ಕ್ಲಿನಿಕ್, ಲೇಸರ್ ಸೆಂಟರ್‌ನಲ್ಲಿ ಅಲ್ಟ್ರಾ ಶಾರ್ಟ್ ಪಲ್ಸ್ ಟ್ರಿಪಲ್ ವೇವ್‌ಲೆಂಥ್ ಡಿಯೋಡ್ ಲೇಸರ್ ಸಿಸ್ಟಮ್ ಹಾಗೂ ೩೦೮ಎನ್‌ಎಂ ಎಕ್ಸೈಮರ್ ಲೇಸರ್ ಸಿಸ್ಟಮ್ ಅನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ. ಇದರಿಂದ ದೇಹದಲ್ಲಿ ಬೆಳೆಯುವ ಅನಪೇಕ್ಷಿತ ಕೂದಲುಗಳನ್ನು ಶಾಶ್ವತ ಇಲ್ಲವಾಗಿಸಲು ಹಾಗೂ ತೊನ್ನು, ಸೋರಿಯಾಸಿಸ್, ಎಕ್ಜಿಮಾಕ್ಕೆ ಚಿಕಿತ್ಸೆ ನೀಡಲು ಪರಿಣಾಮಕಾರಿ ಲೇಸರ್ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಪುತ್ತೂರು ಸ್ಕಿನ್ ಕ್ಲಿನಿಕ್, ಲೇಸರ್ ಸೆಂಟರ್‌ನ ಡಾ. ಸಚಿನ್ ಶೆಟ್ಟಿ ತಿಳಿಸಿದ್ದಾರೆ.

ಈಗಾಗಲೇ ಚರ್ಮ ಹಾಗೂ ಸೌಂದರ್ಯ ವರ್ಧಕ ಚಿಕಿತ್ಸೆಯಲ್ಲಿ ಗುರುತಿಸಿಕೊಂಡಿರುವ ಪುತ್ತೂರು ಸ್ಕಿನ್ ಕ್ಲಿನಿಕ್, ಲೇಸರ್ ಸೆಂಟರ್ ಹೊಸದಾಗಿ ಲೇಸರ್ ಯಂತ್ರಗಳನ್ನು ಪರಿಚಯಿಸುವ ಮೂಲಕ, ಚರ್ಮದಲ್ಲಿ ಕಾಣಿಸಿಕೊಳ್ಳುವ ಕೆಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದೆ.

ಲಭ್ಯವಿರುವ ಚಿಕಿತ್ಸೆಗಳು:
ಟ್ರಿಪಲ್ ವೇವ್‌ಲೆಂಥ್ ಡಿಯೋಡ್ ಲೇಸರ್ ಯಂತ್ರದ ಮೂಲಕ ಅನಪೇಕ್ಷಿತ ಕೂದಲುಗಳಿಂದ ರಕ್ಷಣೆ, ಮುಖದಲ್ಲಿರುವ ರಿಂಕಲ್‌ಗಳ ತೆಗೆಯುವಿಕೆ, ಪಿಗ್‌ಮೆಂಟೇಷನ್‌ಗಳಿಂದ ರಕ್ಷಣೆ, ೩೦೮ ಎನ್‌ಎಂ ಎಕ್ಸೈಮರ್ ಲೇಸರ್ ಮೂಲಕ ತೊನ್ನು ರೋಗಕ್ಕೆ ಚಿಕಿತ್ಸೆ, ಸೋರಿಯಾಸಿಸ್, ಎಕ್ಜಿಮಾ / ಡರ್ಮಟಿಟೀಸ್, ಅಟೋಪಿಕ್ ಡೆರ್ಮಟಿಟೀಸ್, ರೇಡಿಯೋ ಫ್ರಿಕ್ವೆನ್ಸಿ ಅಬ್ಲೆಷನ್ ಮೂಲಕ ಸ್ಕಿನ್ ಟ್ಯೂಮರ್‌ಗಳ ತೆಗೆಯುವಿಕೆ, ಮಚ್ಚೆ ತೆಗೆಯುವಿಕೆ ಮತ್ತು ಚರ್ಮದ ಸಣ್ಣ ಸರ್ಜರಿ, ಕೆಮಿಕಲ್ ಪೀಲಿಂಗ್ ಮೂಲಕ ಮೊಡವೆ, ಪಿಗ್ಮೆಂಟೇಷನ್ / ಮೆಲಾಸ್ಮಾ, ಸ್ಕಿನ್ ಲೈಟ್ನಿಂಗ್, ಸ್ಕಿನ್ ರಿಜುವೆನೇಷನ್ ಮತ್ತು ವಯಸ್ಸನ್ನು ಮರೆಮಾಚುವಂತಹ ಚಿಕಿತ್ಸೆ ನೀಡಲಾಗುತ್ತಿದೆ.

ಇದರ ಜೊತೆಗೆ ಕೂದಲು ಚಿಕಿತ್ಸೆಗಳಾದ ಕೂದಲು ಉದುರುವಿಕೆಗೆ ಪಿಆರ್‌ಪಿ (ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ) ಥೆರಪಿ, ಮೈಕ್ರೋನೀಡ್ಲಿಂಗ್, ಮೈಕ್ರೋನೀಡ್ಲಿಂಗ್ ಮತ್ತು ಮೆಸೋಥೆರಪಿ ಮೂಲಕ ಕಲೆಗಳ ಹಾಗೂ ರಿಂಕಲ್‌ಗಳ ತೆಗೆಯುವಿಕೆ, ತೊನ್ನು ರೋಗಕ್ಕೆ ಸರ್ಜರಿ ಮೂಲಕ ಮಿನಿಯೇಚರ್ ಪಂಚ್ ಗ್ರಾಫ್ಟಿಂಗ್, ಸುಕ್ಷನ್ ಬ್ಲಿಸ್ಟರ್ ಗ್ರಾಫ್ಟಿಂಗ್, ಅಟೋಲೊಗಸ್ ನಾನ್ ಕಲ್ಚರ್‍ಡ್ ಎಪಿಡರ್‍ಮಲ್ ಸೆಲ್ ಸಸ್‌ಪೆನ್ಷನ್ಸ್, ಚರ್ಮಕ್ಕೆ ಸಂಬಂಧಪಟ್ಟ ಇತರ ಚಿಕಿತ್ಸೆಗಳು ಪಂಚ್ ಮತ್ತು ಶೇವ್ ಬಯೋಪ್ಸಿ, ಲಿಕ್ವಿಡ್ ನೈಟ್ರೋಜನ್ ಕ್ರಿಯೋಥೆರಪಿ, ಕೆಮಿಕಲ್ ಕಾಟೆರಿಷನ್ ಮೊದಲಾದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಇದೀಗ ಅಲ್ಟ್ರಾ ಶಾರ್ಟ್ ಪಲ್ಸ್ ಟ್ರಿಪಲ್ ವೇವ್‌ಲೆಂಥ್ ಡಿಯೋಡ್ ಲೇಸರ್ ಸಿಸ್ಟಮ್ ಹಾಗೂ ೩೦೮ಎನ್‌ಎಂ ಎಕ್ಸೈಮರ್ ಲೇಸರ್ ಸಿಸ್ಟಮ್ ಅನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ.

ಹೊಸ ಲೇಸರ್ ಯಂತ್ರಗಳು:
ಅಲ್ಟ್ರಾ ಶಾರ್ಟ್ ಪಲ್ಸ್ ಟ್ರಿಪಲ್ ವೇವ್‌ಲೆಂಥ್ ಡಿಯೋಡ್ ಲೇಸರ್ ಸಿಸ್ಟಮ್: ಪುತ್ತೂರು ಸ್ಕಿನ್ ಕ್ಲಿನಿಕ್, ಲೇಸರ್ ಸೆಂಟರ್‌ನಲ್ಲಿ ಹೊಸದಾಗಿ ಪರಿಚಯಿಸುತ್ತಿರುವ ಒಂದು ಯಂತ್ರ ಇದು. ಮುಖದಲ್ಲಿ ಹಾಗೂ ದೇಹದ ಇತರ ಭಾಗಗಳಲ್ಲಿ ಕಾಣಿಸಿಕೊಳ್ಳುವ ಅನಪೇಕ್ಷಿತ ಕೂದಲುಗಳನ್ನು ಶಾಶ್ವತವಾಗಿ ತೆಗೆಯುವ ಲೇಸರ್ ಯಂತ್ರ ಇದಾಗಿದೆ.

೩೦೮ಎನ್‌ಎಂ ಎಕ್ಸೈಮರ್ ಲೇಸರ್ ಸಿಸ್ಟಮ್: ತೊನ್ನು, ಸೋರಿಯಾಸಿಸ್, ಎಕ್ಜಿಮಾಕ್ಕೆ ಲೇಸರ್ ಚಿಕಿತ್ಸೆ ನೀಡುವ ಯಂತ್ರ ಇದು. ತೊನ್ನು ರೋಗ ಅಥವಾ ಪಾಂಡು ರೋಗಕ್ಕೆ ಲೇಸರ್ ಚಿಕಿತ್ಸೆ ನೀಡುವ ಮೂಲಕ ಶಮನ ಮಾಡಬಹುದು. ಇದುವರೆಗೆ ಸೋರಿಯಾಸಿಸ್‌ಗೆ ಔಷಧ ನೀಡಲಾಗುತ್ತಿತ್ತು. ಆದರೆ ಇದೀಗ ಹೊಸ ಲೇಸರ್ ಯಂತ್ರ ಆವಿಷ್ಕರಿಸಿದ್ದು, ಪರಿಣಾಮಕಾರಿ ಫಲಿತಾಂಶ ಪಡೆಯಬಹುದು. ಎಕ್ಜಿಮಾ ಎಂದರೆ ಚರ್ಮದ ಅಲರ್ಜಿಗೆ ಸಂಬಂಧಪಟ್ಟ ಸಮಸ್ಯೆ. ಬಹಳಷ್ಟು ಮಂದಿ ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹೊಸ ಲೇಸರ್ ಯಂತ್ರದ ಮೂಲಕ ಈ ಸಮಸ್ಯೆಯಿಂದಲೂ ಪರಿಹಾರ ಕಂಡುಕೊಳ್ಳಬಹುದು.

LEAVE A REPLY

Please enter your comment!
Please enter your name here