ವಿ.ವಿ ಅಂತರ್-ಕಾಲೇಜು ವೈಟ್‌ಲಿಪ್ಟಿಂಗ್ ಸ್ಪರ್ಧೆ-ಫಿಲೋಮಿನಾ ಕಾಲೇಜಿಗೆ ಮೂರನೇ ಸ್ಥಾನ

0


ಪುತ್ತೂರು: ಮೂಡಬಿದ್ರೆ ಆಳ್ವಾಸ್ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ ಅಂತರ್-ಕಾಲೇಜು ವೈಟ್‌ಲಿಪ್ಟಿಂಗ್ ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಕಾಲೇಜು ಮೂರನೇ ಸ್ಥಾನ ಲಭಿಸಿದೆ.

ಕಾಲೇಜಿನ ಪ್ರಥಮ ಎಂಕಾಂನ ಕಿರಣ್ ಕುಮಾರ್‌ರವರಿಗೆ ಚಿನ್ನದ ಪದಕ, ಅಂತಿಮ ಬಿಕಾಂನ ನಿಶ್ಚಿತ್ ರೈ ಬೆಳ್ಳಿ ಪದಕ, ಪ್ರಥಮ ಬಿಎಯ ಅಭಿ ರಾಮಚಂದ್ರ ಬೆಳ್ಳಿ ಪದಕ, ಪ್ರಥಮ ಬಿಕಾಂನ ಶ್ರೇಯಸ್ ಕಂಚಿನ ಪದಕ, ಪ್ರಥಮ ಬಿಎಯ ಕಿಶೋರ್ ಕುಮಾರ್ ಕಂಚಿನ ಪದಕ, ಅಂತಿಮ ಬಿಎಯ ಧನ್ಯಶ್ರೀ ಬೆಳ್ಳಿ ಪದಕ, ದ್ವಿತಿಯ ಬಿಕಾಂನ ಹರ್ಷಿತಾ ಬೆಳ್ಳಿ ಪದಕ, ದ್ವಿತೀಯ ಬಿಕಾಂನ ಬ್ಯೂಲಾ ಕಂಚಿನ ಪದಕ, ದ್ವಿತೀಐ ಬಿಕಾಂನ ವೆನಿಶಾ ಜೆಸ್ಸಿಕಾ ಮಸ್ಕರೇನ್ಹಸ್ ಕಂಚಿನ ಪದಕವನ್ನು ಜಯಿಸಿಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here