- ಅಧ್ಯಕ್ಷ :ಪ್ರದ್ವಿನ್ ರೈ ಕೆ., ಕಾರ್ಯದರ್ಶಿ :ಧನುಷ್ ರೈ ಬಿ., ಸಭಾಪತಿ :ನಿಶಾಂತ್ ರೈ
ಪುತ್ತುರು : ತಿಂಗಳಾಡಿ ರೋಟರಾಕ್ಟ್ ಕ್ಲಬ್ ಇದರ 2022-23ನೇ ಸಾಲಿನ ಅಧ್ಯಕ್ಷರಾಗಿ ಪ್ರದ್ವಿನ್ ರೈ ಕೆ., ಕಾರ್ಯದರ್ಶಿಯಾಗಿ ಧನುಷ್ ರೈ ಬಿ., ಮತ್ತು ಸಭಾಪತಿಯಾಗಿ ನಿಶಾಂತ್ ರೈ ಆಯ್ಕೆಯಾಗಿದ್ದು ಪದಗ್ರಹಣ ಸಮಾರಂಭ ಜು.30ರಂದು ಸಂಜೆ 6:30ಕ್ಕೆ ತಿಂಗಳಾಡಿಯ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಪದಗ್ರಹಣ ಅಧಿಕಾರಿಯಾಗಿ ರೋಟರಿ ಪುತ್ತೂರು ಪೂರ್ವ ಅಧ್ಯಕ್ಷ MPHF. ಶರತ್ ಕುಮಾರ್ ರೈ, ಅತಿಥಿಯಾಗಿ MPHF. ರತ್ನಾಕರ್ ರೈ ಜಿ., ಜಿಲ್ಲಾ ಪ್ರತಿನಿಧಿಯಾಗಿ ನಿಖಿಲ್ ಖ.ಏ, ವಲಯ ಪ್ರತಿನಿಧಿಯಾಗಿ ಏ.ಒ ಸಿಯಾಕ್ ಭಾಗವಹಿಸಲಿದ್ದಾರೆ.
ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಕೃತಿಕ್ ರೈ, ಸಮುದಾಯ ಸೇವಾ ವಿಭಾಗದ ನಿರ್ದೇಶಕರಾಗಿ ಸನತ್ ಕುಮಾರ್ ರೈ, ವೃತ್ತಿ ಸೇವಾ ವಿಭಾಗದ ನಿರ್ದೇಶಕರಾಗಿ ರೋಹಿತ್ ರೈ ಜಿ., ಅಂತಾರಾಷ್ಟ್ರೀಯ ಸೇವಾ ವಿಭಾಗದ ನಿರ್ದೇಶಕರಾಗಿ ವರುಣ್ ಕುಮಾರ್, ಕೋಶಾಧಿಕಾರಿ ಹರೀಶ್ ರೈ ಮಿತ್ತೋಡಿ,ಕ್ರೀಡಾ ಕಾರ್ಯದರ್ಶಿಯಾಗಿ ಸೃಜನ್ ರೈ, ಯುವಜನ ಸೇವಾ ನಿರ್ದೇಶಕರಾಗಿ ಸ್ವರೂಪ್ ರೈ, ಸಾಂಸ್ಕೃತಿಕ ಸೇವಾ ನಿರ್ದೇಶಕರಾಗಿ ಸಂಪತ್ ಕುಮಾರ್ ರೈ ಆಯ್ಕೆಯಾಗಿರುತ್ತಾರೆ. ಅನೀಶ್ ಶೆಟ್ಟಿ ನಿಕಟಪೂರ್ವ ಅಧ್ಯಕ್ಷರಾಗಿರತ್ತಾರೆ.
ಸಂಸ್ಥೆಯ ಪರಿಚಯ : ರೋಟರಿ ಪುತ್ತೂರು ಪೂರ್ವ ಪ್ರಾಯೋಜಿತ ಸಂಸ್ಥೆಯಾಗಿ ರತ್ನಕರ್ ರೈ ಜಿ. ರವರು ಸ್ಥಾಪಕ ಅಧ್ಯಕ್ಷರಾಗಿ ರೋಟರಾಕ್ಟ್ ತಿಂಗಳಾಡಿ ಸುಮಾರು 20 ಅಧ್ಯಕ್ಷರುಗಳನ್ನು ಕಂಡಿದೆ. ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ.