ವಿವೇಕಾನಂದ ಕ.ಮಾ. ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ

0

 

ಪುತ್ತೂರು : ಉತ್ತಮ ಜೀವನ ಮೌಲ್ಯಗಳೊಂದಿಗೆ ಶಿಸ್ತನ್ನು ಅಳವಡಿಸಿಕೊಂಡು ಶಾಲಾ ದಿನಗಳಲ್ಲಿ ವಿವಿಧ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಾಗ ಮುಂದೆ ದೇಶ ಸೇವೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಕಾರ್ಗಿಲ್ ವಿಜಯೋತ್ಸವವು ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿದಿನವು ನಮ್ಮ ದೇಶಕ್ಕಾಗಿ ಹುತಾತ್ಮರಾದ ಅನೇಕ ಸೈನಿಕರ ತ್ಯಾಗವನ್ನು ಸ್ಮರಿಸಿಕೊಂಡು ನಮ್ಮನ್ನು ನಾವು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ನಿಜವಾದ ದೇಶಪ್ರೇಮ ಎಂದು ವಿವೇಕಾನಂದ ಪದವಿ ಕಾಲೇಜಿನ ಎನ್‌ಸಿಸಿ ವಿಭಾಗದ ಸೀನಿಯರ್ ಅಂಡರ್ ಆಫೀಸರ್ ಹೇಮಸ್ವಾತಿ ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ಕೌಟ್ ವಿದ್ಯಾರ್ಥಿಗಳು ಪುಲ್ವಾಮ ದಾಳಿಯ ಬಗೆಗಿನ ಕಿರು ಪ್ರಹಸನ ಪ್ರದರ್ಶಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳಾದ ಕುಮಾರಿ ಧಾತ್ರಿ ಆರ್. ರೈ ಕಾರ್ಗಿಲ್ ವಿಜಯೋತ್ಸವ, ಕುಮಾರಿ ಅವನಿ ಆತ್ಮ ನಿರ್ಭರ ಭಾರತ ಯೋಜನೆಯ ಮಾಹಿತಿ ತಿಳಿಸಿದರು.

ಸ್ಕೌಟ್-ಗೈಡ್ ಕ್ಯಾಪ್ಟನ್‌ಗಳಾದ ಹರಿಣಾಕ್ಷಿ, ರಾಜೇಶ್, ಕೀರ್ತನ್, ಪ್ರೌಢಶಾಲಾ ಮುಖ್ಯಗುರು ಆಶಾ ಬೆಳ್ಳಾರೆ, ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ, ಶಿಕ್ಷಕ ಬಂಧುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹಶಿಕ್ಷಕಿ ವೀಣಾಕುಮಾರಿ ಕಾರ್ಯಕ್ರಮ್ನ ನಿರೂಪಿಸಿದರು.

 

LEAVE A REPLY

Please enter your comment!
Please enter your name here