ಎಸ್‌ವೈಎಸ್ ಈಶ್ವರಮಂಗಲ ಸೆಂಟರ್ ವತಿಯಿಂದ ಈದ್ ಸ್ನೇಹಕೂಟ 

0

ಬಡಗನ್ನೂರುಃ ಎಸ್‌ವೈಎಸ್ ಈಶ್ವರಮಂಗಲ ಸೆಂಟರ್ ಇದರ ವತಿಯಿಂದ ಈದ್ ಸ್ನೇಹಕೂಟ ಬಹು ಅಬ್ದುಲ್ ಜಲೀಲ್ ಸಖಾಫಿ ಕರ್ನೂರುರವರ  ಅಧ್ಯಕ್ಷತೆಯಲ್ಲಿ ತೈಬಾ ಸೆಂಟರ್‌ನಲ್ಲಿ ಜರುಗಿತು.  ಹಂಝ ಉಸ್ತಾದರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸ್ನೇಹ ಕೂಟವನ್ನು  ನೆ.ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ರೈ ಉದ್ಘಾಟಿಸಿದರು.
ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ. ಅಬ್ದುರ್ರಶೀದ್ ಝೈನಿಯವರು ಸಂದೇಶ ಭಾಷಣ ಮಾಡಿದರು. ನಮ್ಮ ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ಪರಸ್ಪರ ಅನ್ಯೋನ್ಯತೆಯಿಂದ ಬದುಕುವ ಪಾರಂಪರೆ ಇದೆ. ಧರ್ಮದ ಬಗ್ಗೆ ಅರಿವಿಲ್ಲದವರಿಂದ ಇಲ್ಲಿ ಕೆಲವೊಮ್ಮೆ ಗೊಂದಲ ಸೃಷ್ಟಿಯಾಗುತ್ತದೆಯೇ ಹೊರತು ಧರ್ಮದ ಬಗ್ಗೆ ಜ್ಞಾನವಿದ್ದವರಿಂದ ಯಾವುದೇ ಸಮಸ್ಯೆ ಬರುವುದಿಲ್ಲ. ಇಲ್ಲಿ ಯಾವುದೇ ಧರ್ಮವು ದ್ವೇಷವನ್ನು ಕಲಿಸುವುದಿಲ್ಲ. ಅದನ್ನು ಪ್ರೋತ್ಸಾಹಿಸುವುದೂ ಇಲ್ಲ. ಪ್ರತಿಯೊಂದು ಮಂದಿರ ಮಸೀದಿ ಇಗರ್ಜಿಗಳಿಂದ ಮೊಳಗುವ ಮಂತ್ರ ಒಂದೇ ಆಗಿದೆ. ಅದು ಇಲ್ಲಿ ಜೀವಿಸುವ ಪ್ರತಿಯೊಬ್ಬರಿಗೂ ಶಾಂತಿ ಸಮಾಧಾನ ನೆಮ್ಮದಿ ಸಿಗಲಿ ಎಂದಾಗಿದೆ. ಯಾವುದೇ ಸಮಸ್ಯೆ ಇದ್ದರೂ ಪರಸ್ಪರ ಕೂತು ಚರ್ಚಿಸಿ ಅದಕ್ಕೆ ಪರಿಹಾರ ಕಾಣಬೇಕೆ ಹೊರತು ಗೊಂದಲದ ವಾತಾವರಣವನ್ನು ಸೃಷ್ಟಿ ಮಾಡಬಾರದು ಎಂದು ಹೇಳಿದ ಅವರು ಇಸ್ಲಾಂ ಹಾಗೂ ಭಾರತದ ಪಾರಂಪರ್ಯತೆಯನ್ನು ವಿವರಿಸುವ ಮೂಲಕ ಸೇರಿದ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೇಮನಾಥ ಶೆಟ್ಟಿ ಕಾವು ಮಾತನಾಡಿ ಇಂತಹ ಸ್ನೇಹಕ್ಕೂಟ ಎಲ್ಲಾ ಧರ್ಮದವರಿಂದಲೂ ನಡೆಯಲಿ. ಇದು ನಮಗೆಲ್ಲರಿಗೂ  ಒಂದು ಪ್ರೇರಣೆಯಾಗಿದೆ ಪ್ರೀತಿ ವಿಶ್ವಾಸ ನಂಬಿಕೆ ಕಡಿಮೆಯಾದಾಗ ಅದನ್ನು ಪರಸ್ಪರ ಕೂತು ಮಾತನಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಬಡಗನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಆಳ್ವ ಮಾತನಾಡಿ, ಇಂಡಿಯನ್ ಗ್ರಾಂಡ್ ಮುಫ್ತಿ ಎ ಪಿ ಅಬೂಬಕರ್ ಮುಸ್ಲಿಯಾರ ಅವರ ನೇತೃತ್ವದಲ್ಲಿ ನಡೆಯುವ ಸಾಮಾಜಿಕ ಸಾಂಸ್ಕೃತಿಕ ವಿದ್ಯಾಭ್ಯಾಸ ರಂಗದಲ್ಲಿ ಮಾಡಿದ ಬದಲಾವಣೆ ಅವಿಸ್ಮರಣೀಯ. ಎ ಪಿ ಉಸ್ತಾದರ ನೇತೃತ್ವದಲ್ಲಿ ಕಾರ್ಯಾಚರಿಸುವ ಸಂಘಟನೆಗಳಿಂದ ಎಷ್ಟೋ ಬಡ ವಿದ್ಯಾರ್ಥಿಗಳ ವಿದ್ಯೆ ಹಾಗೂ ಸಮಾಜದಲ್ಲಿ ಹಿಂದುಳಿದವರನ್ನು ಮೇಲಕ್ಕೆ ಎತ್ತುವ ಕಾರ್ಯಾಚರಣೆ ಕಾಣುವಾಗ ನಮಗೆ ತುಂಬಾ ಸಂತೋಷವಾಗುತ್ತದೆ ಎಂದರು.
ನೆ.ಮುಡ್ನೂರು ಪಂಚಾಯತ್  ಸದಸ್ಯ ಚಂದ್ರಹಾಸ  ಮಾತನಾಡಿ ನನಗೆ ಇಸ್ಲಾಂ ಮತ್ತು ಮುಸ್ಲಿಮರ ಬಗ್ಗೆ ಇರುವ ಅಪನಂಬಿಕೆಗಳು ಈ ಸ್ನೇಹಕೂಟದ ಮೂಲಕ ಪರಿಹಾರವಾಯಿತು ಎಂದರು .
ಈಶ್ವರಮಂಗಲದ  ವೈದ್ಯರಾದ ಶ್ರೀ ಕುಮಾರ್ ಮಾತನಾಡಿ ಬಾಂಧವ್ಯದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಮುಖ್ಯ ಅಥಿತಿಗಳಾಗಿ  ಶ್ರೀರಾಮ್ ಪಕ್ಕಳ, ಶ್ರೀರಾಮ ಮೇನಾಲ, ಸತೀಶ್ ರೈ ಕಟ್ಟಾವು, ರಮೇಶ್ ಶಿರ್ಲಾಲ, ರವಿರಾಜರೈ ಸಜಂಕಾಡಿ, ಅಬ್ದುಲ್ ಅಝೀಝ್ ಮಿಸ್ಬಾಹಿ ಮಾತನಾಡಿ ಶುಭ ಹಾರೈಸಿದರು. 
ಕಾರ್ಯಕ್ರಮದಲ್ಲಿ ಮುಹಮ್ಮದ್ ಮದನಿ,  ಲಿಂಗಪ್ಪಗೌಡ, ಇಬ್ರಾಹಿಂ ಪಲ್ಲತ್ತೂರು, ಕಾಶ್ಮೀರ ಡಿಸೋಜ, ಅಬ್ದುಲ್ ರೆಹಮಾನ್ ಹಾಜಿ ಮೇನಾಲ, ಪ್ರದೀಪ್ ರೈಕರ್ನೂರು, ಗುರುಪ್ರಸಾದ್ ರೈ ಕುದ್ಕಾಡಿ, ಅಬ್ದುಲ್ ರಹಮಾನ್ ಬಿ ಕೆ, ಎನ್ ಐ  ಅಬ್ದುಲ್ ಖಾದರ್ ಕರ್ನೂರು, ವೀರಪ್ಪ ಮೇನಾಲ, ಸುರೇಶ್ ಮೇನಾಲ, ಇಬ್ರಾಹಿಂ ಮೈರೋಳು,  ಸಂಸುದ್ದೀನ್, ಹನೀಫಿ, ಇಸ್ಮಾಯಿಲ್ ಕೆ ಎಚ್, ಶರೀಫ್ ಪಿ ಎಚ್, ತ್ವಹಾ ಸಆದಿ ತಕ್ಯುದ್ದೀನ್ ಮದನಿ, ಸೂಫಿ ಗಾಳಿಮುಖ, ಮುಹಮ್ಮದ್ ಕರ್ನೂರು ಇ ಎ ಮುಹಮ್ಮದ್  ಮೇನಾಲ,   ಹಸೈನಾರ್ ಮಾಡನ್ನೂರು, ಸಿ ಕೆ ಮುಹಮ್ಮದ್ ಕೊಯಿಲ, ಮನ್ಸೂರ್ ಹಾಜಿ ಕೊಟ್ಯಾಡಿ, ಲತೀಫ್ ಮುಸ್ಲಿಯಾರ್ ಮೀನಾವು,  ರಜಾಕ್ ಮೇನಾಲ, ದಾವೂದ್ ಹಿಮಮಿ ಸಖಾಫಿ ಕಬೀರ್ ಹಿಮಮಿ ಸೀನಾನ್ ಸಆದಿ ಅಬ್ದುಲ್ ರಹ್ಮಾನ್ ಅನಿಲೆ ಇಬ್ರಾಹಿಂ ಝುಹರಿ ಕುಕ್ಕಾಜೆ ಉಪಸ್ಥಿತರಿದ್ದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಹಮೀದ್ ಕೊಯಿಲ ಸ್ವಾಗತಿಸಿ ಕೋಶಾಧಿಕಾರಿ ಹನೀಫ್ ಹಾಜಿ ಗಾಳಿಮುಖ ವಂದಿಸಿದರು.

LEAVE A REPLY

Please enter your comment!
Please enter your name here