ಮೃತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 1ಕೋಟಿ ಪರಿಹಾರ ನೀಡಲು ಆಗ್ರಹಿಸಿ ಕಡಬ ಬಿಲ್ಲವ ಸಂಘಟನೆಯಿಂದ ಆಗ್ರಹ-ಮನವಿ ಸಲ್ಲಿಕೆ

0

ಕಡಬ: ಜುಲೈ 26ರ ರಾತ್ರಿ ಹತ್ಯೆಗೀಡಾದ ಬಿಲ್ಲವ ಸಮಾಜದ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ 1ಕೋಟಿ ಪರಿಹಾರ ನೀಡಬೇಕೆಂದು ಕಡಬ ಬಿಲ್ಲವ ಸಂಘಟನೆಯ ವತಿಯಿಂದ ಆಗ್ರಹಿಸಲಾಗಿದೆ.


ಈ ಬಗ್ಗೆ ಜು.29ತಂದು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಸಭೆ ನಡೆಸಿದ ಕಡಬ ಬಿಲ್ಲವ ಮುಖಂಡರು ಶ್ರದ್ಧಾಂಜಲಿ ಸಮರ್ಪಿಸಿ, ಕಡಬ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಮೃತ ಪ್ರವೀಣ್ ಅವರು ಯುವವಾಹಿನಿ ಮತ್ತು ಬಿಲ್ಲವ ಸಂಘ ಹಾಗೂ ಗೆಜ್ಜೆಗಿರಿ ಕ್ಷೇತ್ರದ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸರಳ ಸಜ್ಜನಿಕೆಯ ವ್ಯಕ್ತಿ ಪ್ರವೀಣ್ ನೆಟ್ಟಾರ್ ಇವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬ ಹಾಗೂ ಬಿಲ್ಲವ ಸಮಾಜ ಅತೀವ ದುಃಖದಲ್ಲಿದೆ, ಅತೀ ಬಡ ಕುಟುಂಬದ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸರಕಾರದಿಂದ 1 ಕೋಟಿ ಪರಿಹಾರ ನೀಡಬೇಕಾಗಿ ಮರ್ದಾಳ, ಕಡಬ, ಆಲಂಕಾರು ವಲಯ ಹಾಗೂ ಯುವವಾಹಿನಿ ಘಟಕ ಕಡಬ ಇದರ ನೇತ್ರತ್ವದಲ್ಲಿ ಮನವಿ ಮಾಡಲಾಯಿತು.

ಪ್ರಾರಂಭದಲ್ಲಿ ಕಡಬ ಮೃತರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಕಡಬ ತಹಸೀಲ್ದಾರ್ ಕಛೇರಿಯ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಉಪ ತಹಸೀಲ್ದಾರ್ ಮನೋಹರ್ ಕೆ.ಟಿ. ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಬಿಲ್ಲವ ಕಡಬ ವಲಯದ ಸಂಚಾಲಕರಾದ ಜಯಪ್ರಕಾಶ್ ದೋಳ, ಮರ್ದಾಳ ವಲಯದ ಸಂಚಾಲಕರಾದ ಸತೀಶ್ ಕೆ. ಐತ್ತೂರ್, ಯುವವಾಹಿನಿ ಕಡಬ ಘಟಕದ ಅಧ್ಯಕ್ಷ ಪ್ರವೀಣ್ ಓಂಕಾಳ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ನೂಚಿಲ, ಹಾಗೂ ಬಿಲ್ಲವ ಮುಖಂಡರಾದ ಜಿನ್ನಪ್ಪ ಸಾಲಿಯನ್, ವಸಂತ ಬದಿಬಾಗಿಲು, ಸುಂದರ ಪೂಜಾರಿ ಅಂಗಣ, ಭಾಸ್ಕರ ಪೂಜಾರಿ,ಲಕ್ಷ್ಮೀಶ ಬಂಗೇರ, ಕುಸುಮಾಧರ ಎನ್ಕಜೆ, ಆನಂದ ಟೈಲರ್, ಮತ್ತು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರುಗಳು, ಯುವವಾಹಿನಿ ಕಡಬ ಘಟಕದ ಪದಾಧಿಕಾರಿಗಳು ಸದಸ್ಯರು, ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು, ಪುಷ್ಪಾರ್ಚನೆ, ಮೌನ ಪ್ರಾರ್ಥನೆ, ಬಳಿಕ ಶಿವ ಪ್ರಸಾದ್ ನೂಚಿಲ ಸ್ವಾಗತಿಸಿ ಅನಿಸಿಕೆ ವ್ಯಕ್ತಪಡಿಸಿದರು,ನಂತರ ಪ್ರವೀಣ್ ನೆಟ್ಟರ್ ಬಗ್ಗೆ ವಸಂತ ಬದಿಬಾಗಿಲು, ಕುಸುಮಾಧರ ಎನ್ಕಜೆ, ಸತೀಶ್ ಕೆ ಐತ್ತೂರು, ಲಕ್ಷ್ಮೀಶ ಬಂಗೇರ, ಅನಿಸಿಕೆ ವ್ಯಕ್ತಪಡಿಸಿ,ಯುವವಾಹಿನಿ ಕಡಬ ಘಟಕದ ಅಧ್ಯಕ್ಷ ಪ್ರವೀಣ್ ಓಂಕಾಲ್ ಧನ್ಯವಾದ ಸಲ್ಲಿಸಿ,ಅನಿಸಿಕೆ ವ್ಯಕ್ತಪಡಿಸಿದರು.

ಪ್ರವೀಣ್ ಮನೆಗೆ ಭೇಟಿ

ಮನವಿ ನೀಡಿದ ಬಳಿಕ ಕಡಬ ವಲಯ ಪದಾಧಿಕಾರಿಗಳು, ಕೇಂದ್ರ ಸಮಿತಿಯ ಪದಾಧಿಕಾರಿಗಳು ಮೃತ ಪ್ರವೀಣ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

LEAVE A REPLY

Please enter your comment!
Please enter your name here