ಜು.31: ಫಾತಿಮಾ ಸ್ಮೈಲ್ ಗ್ರೂಪ್ ಆಫ್ ಡೆಂಟಲ್ ಕ್ಲಿನಿಕ್‌ನ 5ನೇ ಸಹಸಂಸ್ಥೆ `ಫಾತಿಮಾ ಸ್ಮೈಲ್ ಸಿಟಿ’ ಡೆಂಟಲ್ ಕ್ಲಿನಿಕ್ ಸುಳ್ಯದಲ್ಲಿ ಶುಭಾರಂಭ

0

ಪುತ್ತೂರು: ಇಲ್ಲಿನ ದರ್ಬೆ ಮಹಾಲಿಂಗೇಶ್ವರ ಕಾಂಪ್ಲೆಕ್ಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಫಾತಿಮಾ ಸ್ಮೈಲ್ ಗ್ರೂಪ್ ಆಫ್ ಡೆಂಟಲ್ ಕ್ಲಿನಿಕ್‌ನ 5ನೇ ಶಾಖೆ `ಫಾತಿಮಾ ಸ್ಮೈಲ್ ಸಿಟಿ’ ಜು.31ರಂದು ಸುಳ್ಯ ಗಾಂಧಿನಗರದ ಯೂನಿಯನ್ ಬ್ಯಾಂಕ್ ಎದುರಿನ ಗ್ಲೋಬಲ್ ಟ್ರೇಡ್ ಸೆಂಟರ್‌ನಲ್ಲಿ ಶುಭಾರಂಭಗೊಳ್ಳಲಿದೆ.

 


ಕಳೆದ12ವರ್ಷಗಳ ಹಿಂದೆ ದರ್ಬೆಯಲ್ಲಿ ಪ್ರಾರಂಭಗೊಂಡು ಹಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನ ಹಾಗೂ ಉಪಕರಣಗಳೊಂದಿಗೆ ಉತ್ತಮ ಸೇವೆಯ ಮೂಲಕ ಮನೆ ಮಾತಾಗಿದೆ. ಪ್ರಾರಂಭದಲ್ಲಿ ಪುತ್ತೂರಿನಲ್ಲಿ ಕ್ಲಿನಿಕ್‌ನ್ನು ಪ್ರಾರಂಭಿಸಿ ಬಳಿಕ ತನ್ನ ಸೇವೆಯನ್ನು ಪುತ್ತೂರು ಮಾತ್ರವಲ್ಲದೆ ಹೊರ ತಾಲೂಕುಗಳಿಗೆ ವಿಸ್ತರಿಸಲು ಮುಂದಾಗಿದ್ದು ಕಲ್ಲಡ್ಕ, ಉಪ್ಪಿನಂಗಡಿ, ವಿಟ್ಲದಲ್ಲಿ ಕ್ಲಿನಿಕ್‌ಗಳನ್ನು ಪ್ರಾರಂಭಿಸಿ ಜನತೆ ಉತ್ತಮ ಸೇವೆ ನೀಡುತ್ತಿದ್ದಾರೆ. ಇದೀಗ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿರುವ ಸಂಸ್ಥೆಯು ಸುಳ್ಯದಲ್ಲಿ 5ನೇ ಸಹ ಸಂಸ್ಥೆಯನ್ನು ಪ್ರಾರಂಭಿಸಿದೆ.

ಲಭ್ಯವಿರುವ ಚಿಕಿತ್ಸೆಗಳು:
ಹಲ್ಲು ಕೀಳುವುದು, ಹಲ್ಲು ತುಂಬಿಸುವುದು, ವಕ್ರದಂತ ಚಿಕಿತ್ಸೆ, ಬೇರುನಾಳ ಚಿಕಿತ್ಸೆ, ಕೃತಕ ಹಲ್ಲು ಜೋಡಣೆ, ಮಕ್ಕಳ ಹಲ್ಲಿನ ಚಿಕಿತ್ಸೆ, ಹಲ್ಲು ಶುಚಿಗೊಳಿಸುವುದು ಹಾಗೂ ಒಸಡು ಶಸ್ತ್ರಚಿಕಿತ್ಸೆಗಳು ಮೊದಲಾದ ಹಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದ ಚಿಕಿತ್ಸೆಗಳು ಕ್ಲಿನಿಕ್‌ನಲ್ಲಿ ಲಭ್ಯವಿದೆ.

ಕ್ಲಿನಿಕ್‌ನಲ್ಲಿರುವ ವೈದ್ಯರುಗಳು:
ಸುಳ್ಯದಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ಕ್ಲಿನಿಕ್‌ನಲ್ಲಿ ಅನುಭವೀ ವೈದ್ಯರುಗಳಾದ ಡಾ.ಮೊಹಮ್ಮದ್ ಅನಸ್, ಡಾ.ಫಾತಿಮತ್ ಜಾಸ್ಮಿನ್ ಎಸ್. ಸೇವೆಗೆ ಲಭ್ಯರಿರುತ್ತಾರೆ. ಜೊತೆಗೆ ಓರಲ್ ಮ್ಯಾಕ್ಸಿಯಾಫೀಸಿಯಲ್ ಸರ್ಜನ್ ಡಾ.ಅಶಿಶ್ ಶೆಟ್ಟಿ, ಪಿಡಿಯಾಡೋಂಟಿಸ್ಟ್ ಡಾ.ಅಲ್ವಿನ್ ಆಂಟನಿ ತೋಟತ್ತಿಲ್, ಪೆರಿಯಾ&ಇಂಪ್ಲೆಂಟಾಲಜಿಸ್ಟ್ ಡಾ.ಝುನೈದಾ, ಡೆಂಟಲ್ ಸರ್ಜನ್‌ಗಳಾದ ಡಾ.ಇಸ್ಮಾಯಿಲ್ ಸರ್‍ಪ್ರಾಝ್, ಡಾ.ಶಾಫಿ ಬಿ. ಹಾಗೂ ಡಾ.ಸಿಯಾದ್ ವಿ. ಮೊದಲಾದ ವೈದ್ಯರು ಕ್ಲಿನಿಕ್‌ಗಳಲ್ಲೂ ಸೇವೆಗೆ ಲಭ್ಯರಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಉಚಿತ ದಂತ ಚಿಕಿತ್ಸೆ:
ಶುಭಾರಂಭದ ಅಂಗವಾಗಿ ಸುಳ್ಯ ಕ್ಲಿನಿಕ್‌ನಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವು ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here