ಹಿರಿಯ ನಾಗರಿಕರ ಮೇಲೆ ಅನಾರಿಕರಂತೆ ವರ್ತಿಸಿರುವ ಸುಬ್ರಹ್ಮಣ್ಯ ಎಸ್.ಐ, ಜಂಬೂರಾಜ್, ಬೆಳ್ಳಾರೆ ಠಾಣೆಯ ಪಿ.ಸಿ ಬಾಲಕೃಷ್ಣ ಅವರ ಅಮಾನತಿಗೆ ಕಡಬ ವಿ.ಹಿಂ.ಪ ಆಗ್ರಹ

0

ಕಡಬ: ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರದ ಮೆರವಣಿಗೆಯ ಸಂದರ್ಭ ಕಾರ್ಯಕರ್ತರ ಮೇಲೆ ಯದ್ವಾತದ್ವಾ ಲಾಠಿ ಪ್ರವಾರ ನಡೆಸಿದ ಸುಬ್ರಹ್ಮಣ್ಯ ಎಸ್.ಐ. ಜಂಬೂರಾಜ್ ಮತ್ತು ಬೆಳ್ಳಾರೆ ಠಾಯ ಕಾನ್ಸ್ಸ್ಟೇಬಲ್ ಬಾಲಕೃಷ್ಣ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಕಡಬ ವಿ.ಹಿಂ.ಪ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಲಾಗಿದೆ.

ಹಿರಿಯ ಕಾರ್ಯಕರ್ತ ಕಾಸರಗೋಡಿನ ರಮೇಶ್ ಅವರ ಮೆಲೆ ಎಸ್.ಐ. ಜಂಬೂರಾಜ್ ಮತ್ತು ಪಿ.ಸಿ ಬಾಲಕೃಷ್ಣ ಅವರು ದುರ್ವರ್ತನೆ ತೋರಿ ಅನಾಗರಿಕರಂತೆ ವರ್ತಿಸಿದ್ದಾರೆ, ಇವರನ್ನು ಕೂಡಲೇ ಅಮಾನತು ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ವಿ.ಹಿಂ.ಪ. ಕಡಬ ಪ್ರಖಂಡದ ಪ್ರಮುಖರು ತಿಳಿಸಿದ್ದಾರೆ. ಈ ಬಗ್ಗೆ ಅವರು ಕಡಬ ತಹಸೀಲ್ದಾರ್ ಮೂಲಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಡಬ ಪ್ರಖಂಡದ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಉಪಾಧ್ಯಕ್ಷ ಸುರೇಶ್ ಎನ್. ಕೋಟೆಗುಡ್ಡೆ, ಬಜರಂಗದಳದ ಜಯಂತ್, ಸಂತೋಷ್ ಮರ್ದಾಳ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here