ಜು. 31: ಬಡಗನ್ನೂರು ಶಾಲಾ ಸಹಶಿಕ್ಷಕ ಶ್ರೀಧರ ಬೋಳಿಲ್ಲಾಯ ಸೇವಾ ನಿವೃತ್ತಿ

0

ಪುತ್ತೂರು: ಬಡಗನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಧರ ಬೋಳಿಲ್ಲಾಯರವರು ಜು. 31ರಂದು ವೃತ್ತಿಯಿಂದ ನಿವೃತ್ತಿಗೊಳ್ಳಲಿದ್ದಾರೆ.‌

ಬಿ. ಕೆ. ವಾಸುದೇವ ಬೊಳಿಲ್ಲಾಯ ಮತ್ತು ಶ್ರೀಮತಿ ಸತ್ಯಭಾಮಾ ಇವರ ಐದನೇ ಪುತ್ರರಾಗಿ ಪಾಣಾಜೆ ಗ್ರಾಮದ ಕಡಮಾಜೆ ಎಂಬಲ್ಲಿ 13 ಜುಲೈ 1962ರಲ್ಲಿ ಜನಿಸಿದ ಇವರು, ಪ್ರಾಥಮಿಕ ಶಿಕ್ಷಣವನ್ನು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಆರ್ಲಪದವಿನಲ್ಲಿ ಪಡೆದು, ಸುಭೋದ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿ ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು, ಮಂಗಳೂರಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ವೃತ್ತಿಪರ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. 14ನೇ ಜನವರಿ 1999ರಂದು ಸರಕಾರಿ ಸೇವೆಗೆ ಸೇರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏಕತ್ತಡ್ಕದಲ್ಲಿ ಮೊದಲ ಸರಕಾರಿ ಸೇವೆಯನ್ನು ಪ್ರಾರಂಭಿಸಿ, 9 ಆಗಸ್ಟ್ 2014 ರವರೆಗೆ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.
10 ಆಗಸ್ಟ್ 2015ರಂದು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಬಡಗನ್ನೂರು ಇಲ್ಲಿಗೆ ವರ್ಗಾವಣೆಗೊಂಡು 31 ಜುಲೈ 2022ರವರೆಗೆ ಪೇರಲ್ತಡ್ಕ ಹಾಗೂ ಬಡಗನ್ನೂರಿನಲ್ಲಿ ನಿಯೋಜನೆಯ ಮೇಲೂ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಪತ್ನಿ ಅರುಣಾ, ಮಗಳು ಶರಧಿ, ಮಗ-ಸೊಸೆ ಶ್ರೇಯಸ್ ಮತ್ತು ಮೈತ್ರಿ ಇವರೊಂದಿಗೆ ತುಂಬು ಜೀವನವನ್ನು ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here