ಕೇಬಲ್ ಟಿ ವಿ, ಕಂಪ್ಯೂಟರ್ ತಂತ್ರಜ್ಞಾನದ ಮಾಂತ್ರಿಕ ಸೋನಿ ಗೋನ್ಸಾಲ್ವಿಸ್ ನಿಧನ

ಪುತ್ತೂರು: ಪುತ್ತೂರು ಕೇಬಲ್ ನೆಟ್‌ವರ್ಕ್(ಪಿ.ಸಿ.ಎನ್)ನಲ್ಲಿ ಹಲವಾರು ವರ್ಷಗಳ ಕಾಲ ಆಪರೇಟರ್ ಆಗಿದ್ದು ಮಾತ್ರವಲ್ಲದೆ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಬಹಳ ಚತುರತೆಯನ್ನು ಹೊಂದಿದ್ದ ಇಲ್ಲಿನ ಬೊಳ್ವಾರು ಉರ್ಲಾಂಡಿ ನಿವಾಸಿ ಜೋಸೆಫ್ ಅಲಿಸ್ಟರ್(ಸೋನಿ) ಗೊನ್ಸಾಲ್ವಿಸ್(50ವ.)ರವರು ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.30 ರಂದು ನಸುಕಿನ ಜಾವ ನಿಧನ ಹೊಂದಿದ್ದಾರೆ.

ದಿ.ಜೋಯ್ ಜೆರಾಲ್ಡ್ ಗೊನ್ಸಾಲ್ವಿಸ್ ಹಾಗೂ ಸೆಲಿನ್ ಗೊನ್ಸಾಲ್ವಿಸ್‌ರವರ ಪುತ್ರರಾಗಿರುವ ಮೃತ ಸೋನಿ ಗೊನ್ಸಾಲ್ವಿಸ್‌ರವರು ಕೇಬಲ್ ಟಿ.ವಿಯಲ್ಲಿ ಕೆಲಸ ನಿರ್ವಹಿಸುವ ಜೊತೆಗೆ ತಾಲೂಕು ಪತ್ರಕರ್ತರ ಸಂಘದ ಮಾಜಿ ಸದಸ್ಯರಾಗಿ, ಪುತ್ತೂರು ತಾಲೂಕು ಫೊಟೋಗ್ರಾಫರ್ ಅಸೋಸಿಯೇಶನ್‌ನ ಮಾಜಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದ ಸೋನಿ ಗೊನ್ಸಾಲ್ವಿಸ್‌ರವರು ತಾಯಿ ಸೆಲಿನ್ ಗೊನ್ಸಾಲ್ವಿಸ್, ಪತ್ನಿ ರೋಸ್ ಮೇರಿ ಫೆರ್ನಾಂಡೀಸ್, ಪುತ್ರಿ ಆನ್ಸಿಲ್ಲ ರೀಮಾ, ಸಹೋದರರಾದ ಬೇಸಿಲ್ ಗೊನ್ಸಾಲ್ವಿಸ್, ಜೋಸೆಫ್ ಗೊನ್ಸಾಲ್ವಿಸ್, ಗೋಡ್‌ಪ್ರಿ ಗೊನ್ಸಾಲ್ವಿಸ್, ಸಹೋದರಿ ಅನಿತಾರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.