ಜು.31: ನಿಡ್ಪಳ್ಳಿ ಶಾಲಾ ಮುಖ್ಯಗುರು ಉದಯ ಕುಮಾರ್ ಎಸ್. ಸೇವಾ ನಿವೃತ್ತಿ

0

ನಿಡ್ಪಳ್ಳಿ; ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇಲ್ಲಿ ಕಳೆದ 2 ವರ್ಷಗಳಿಂದ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉದಯ ಕುಮಾರ್ ಶರವು ಜು.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಬಡಗನ್ನೂರು ಗ್ರಾಮದ ಶರವು ಕೃಷ್ಣಯ್ಯ ಮತ್ತು ಸುಮತಿ ದಂಪತಿ ಮಗನಾಗಿ ಜನಿಸಿದ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಯಿಲ ಬಡಗನ್ನೂರು ಇಲ್ಲಿ 1 ರಿಂದ 4 ರವರೆಗೆ ಮತ್ತು ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ ಇಲ್ಲಿ 5 ರಿಂದ 7 ರವರೆಗೆ ವ್ಯಾಸಂಗ ಮಾಡಿದ್ದರು. ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆ ಈಶ್ವರಮಂಗಲ ಇಲ್ಲಿ ತನ್ನ ಪ್ರೌಢ ಶಿಕ್ಷಣ ಪೂರೈಸಿ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಶಿಕ್ಷಕ ತರಬೇತಿ ಪಡೆದರು.

ಶಿಕ್ಷಕ ವೃತ್ತಿ ಆರಂಭ; 1993 ರಲ್ಲಿ ಸಜಂಕಾಡಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ತನ್ನ ಸೇವೆಯನ್ನು ಆರಂಭಿಸಿದರು. ನಂತರ 1996 ರಿಂದ ಬಡಗನ್ನೂರು ಗ್ರಾಮದ ಕೊಯಿಲ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದರು. 2006 ರಿಂದ 2014 ರವರೆಗೆ ಪಡುಮಲೆ ಶಾಲೆಗೆ ನಿಯೋಜನೆಗೊಂಡು ಸೇವೆ ಸಲ್ಲಿಸಿದ್ದರು. 2020 ರಲ್ಲಿ ಮುಖ್ಯ ಗುರುಗಳಾಗಿ ಭಡ್ತಿ ಹೊಂದಿ ನಿಡ್ಪಳ್ಳಿ ಶಾಲೆಯಲ್ಲಿ 2 ವರ್ಷಗಳ ಕಾಲ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ಜು.31 ರಂದು ತನ್ನ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.

2004 ರಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. 1996 ರಲ್ಲಿ ಜನ ಮೆಚ್ಚಿದ ಶಿಕ್ಷಕ ಎಂಬ ಪ್ರಶಸ್ತಿಗೆ ಭಾಜನರಾಗಿದ್ದರು.
ಪತ್ನಿ ಭಾರತಿ ಗೃಹಿಣಿಯಾಗಿದ್ದು ಪುತ್ರ ಶರದ್ ಬೆಂಗಳೂರು ಬಾಷ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಡಗನ್ನೂರು ಗ್ರಾಮದ ಶರವು ಎಂಬಲ್ಲಿ ಇವರು ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here