ರಾಷ್ಟ್ರಮಟ್ಟದ ವಿಜ್ಞಾನ ಸಂಶೋಧನ ಲೇಖನದಲ್ಲಿ ಫಿಲೋಮಿನಾದ ರಚನಾ ಎನ್.ಆರ್‌ರವರಿಗೆ ಬಹುಮಾನ

0


ಪುತ್ತೂರು: ಭಾರತ ಸ್ವಾತಂತ್ರ್ಯೋತ್ಸವದ ಸುವರ್ಣಮಹೋತ್ಸವ ಪ್ರಯುಕ್ತ ಬೆಂಗಳೂರಿನ ವೈಮಾಂತರಿಕ್ಷ ಸಂಶೋಧನಾಲಯ ಏರ್ಪಡಿಸಿದ ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ವಿಷಯದ ಮೇಲೆ ಏರ್ಪಡಿಸಲಾದ ಒಂದು ದಿನದ ರಾಷ್ಟ್ರೀಯ ಕನ್ನಡ ವಿಜ್ಞಾನ ವಿಚಾರ ಸಂಕಿರಣದಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ಪದವಿ ವಿಭಾಗದ ರಚನಾ ಎನ್.ಆರ್ ಮತ್ತು ಪವನ್ ನಾಯಕ್‌ರವರು ಸಂಶೋಧನ ಲೇಖನವನ್ನು ಮಂಡಿಸಿದರು.

ಭಾರತೀಯ ರಕ್ಷಣಾ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ|ಆರ್ ಪ್ರಹ್ಲಾದ್, ಸಾಹಿತಿ ಮತ್ತು ಪ್ರಾಧ್ಯಾಪಕ ಡಾ|ಕೃಷ್ಣೇಗೌಡರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಈ ವಿಚಾರ ಸಂಕಿರಣದಲ್ಲಿ ಐವತ್ತಕ್ಕೂ ಮಿಕ್ಕಿ ಸಂಶೋಧನ ಲೇಖನಗಳನ್ನು ಸಂಶೋಧಕರು ಮಂಡಿಸಿದರು. ಮೆಟೀರಿಯಲ್ ಸೈನ್ಸ್ ವಿಭಾಗದಲ್ಲಿ ರಚನಾ ಎನ್.ಆರ್ ಅವರಿಗೆ ಅತ್ಯುತ್ತಮ ಪ್ರಬಂಧ ಮಂಡನೆಯ ಬಹುಮಾನ ಲಭಿಸಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here