ಅರಿಯಡ್ಕ ಗ್ರಾ.ಪಂ ಗ್ರಾಮ ಸಭೆ

0

ಬಡಗನ್ನೂರುಃ  ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಮಾಡನ್ನೂರು ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ್ ಮಾಡುವ ಬಗ್ಗೆ ಸರ್ಕಾರಕ್ಕೆ ಬರೆಯಲು  ಅರಿಯಡ್ಕ ಗ್ರಾ.ಪಂ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಗ್ರಹ.  

ಸಭೆಯು ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ರವರ ಅಧ್ಯಕ್ಷತೆಯಲ್ಲಿ ಕಾವು ಜನಮಂಗಲ ಸಭಾಂಗಣದಲ್ಲಿ ಜು.21 ರಂದು ನಡೆಯಿತು.  ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯಲ್ಲಿ ಅರಿಯಡ್ಕ ಹಾಗೂ ಮಾಡನ್ನೂರು ಎರಡು ಗ್ರಾಮಗಳನ್ನು ಹೊಂದಿದ್ದು  ಅಭಿವೃದ್ಧಿ ನಿಟ್ಟಿನಲ್ಲಿ ಮಾಡನ್ನೂರು ಗ್ರಾಮವನ್ನು ಕಡೆ ಗಣಸಲಾಗುತ್ತದೆ  ಗ್ರಾ.ಪಂ ಅಭಿವೃದ್ಧಿ ದೃಷ್ಟಿಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಬೆಸೆಯುವ ಕೆಲಸ ಮಾಡುತ್ತಿದೆ. ಮಾಡನ್ನೂರು ಗ್ರಾಮವು ವಿಸ್ತಾರವಾಗಿದ್ದು ಈ ಭಾಗದಲ್ಲಿ ಹೆಚ್ಚಿನವರು ಬಡತನ ರೇಖೆಗಿಂತ ಕೆಳಗಿರುವ ಜನರು ಮತ್ತು ಅನಕ್ಷರಸ್ಥರು ಆಗಿದ್ದಾರೆ ಇಲ್ಲಿ ಹೆಚ್ಚಿನವರಿಗೆ  ಯಾವುದೇ ದಾಖಲೆಗಳನ್ನು ಹೊಂದಿಲ್ಲ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಮಾಡುವ ಭರವಸೆ ನೀಡುತ್ತಾರೆ ಅನಂತರ ಅವರ ಪಾಡಿಗೆ ಇರುತ್ತಾರೆ. ಭರವಸೆ ಹಾಗಯೇ ಉಳಿಯುತ್ತದೆ. ಇದರಿಂದ ಬಡವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಮಾಡನ್ನೂರು ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ್ ಅಗಬೇಕು. ಈ ಬಗ್ಗೆ ಸರ್ಕಾರಕ್ಕೆ ಬರೆಯಲು  ನಿರ್ಣಯ ಮಾಡುವಂತೆ ಮಾಡುತ್ತದೆ ಗ್ರಾಮಸ್ಥ ಇಸುಬು ಸಭೆಯನ್ನು ಒತ್ತಾಯಿಸಿದರು. ಬಳಿಕ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಮಾಡನ್ನೂರು ಗ್ರಾಮಕ್ಕೆ ಖಾಯಂ ಆರೋಗ್ಯ ಕಾರ್ಯಕರ್ತರ ನೇಮಕಾತಿ ಮಾಡಲು ಒತ್ತಾಯ
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಅರಿಯಡ್ಕ ಹಾಗೂ ಮಾಡನ್ನೂರು ಗ್ರಾಮದಲ್ಲಿ ಒಬ್ಬರೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ  ಎರಡು ಗ್ರಾಮದ ಸಮಸ್ಯೆ ಬಗೆಹರಿಸಲು ಕಷ್ಟಕರ ವಾಗಿದೆ ಮಾಡನ್ನೂರು ಉಪ ಅರೋಗ್ಯ ಕೇಂದ್ರ ವ್ಯಾಪ್ತಿಯ ಮಾಡನ್ನೂರು ಗ್ರಾಮದಲ್ಲಿ ಯಾವುದೇ ಅರೋಗ್ಯ ಸಮಸ್ಯೆ ಎದುರಾದಾಗ ತಕ್ಷಣ ಪ್ರಾಥಮಿಕ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಓರ್ವ ಕಾರ್ಯಕರ್ತೆ ಎರಡು ಗ್ರಾಮವನ್ನು ಸಂಪರ್ಕಿಸಿ ಜನರ ಅರೋಗ್ಯ ಸಮಸ್ಯೆ ಬಗೆಹರಿಸಲು ಸಾದ್ಯವಿಲ್ಲ ಅದರಿಂದ ಮಾಡನ್ನೂರು ಉಪ ಕೇಂದ್ರಕ್ಕೆ ಖಾಯಂ ಅರೋಗ್ಯ ಕಾರ್ಯಕರ್ತರ ನೇಮಕಾತಿ ಮಾಡುವಂತೆ ನಿತಿನ್ ರೈ ಪಾಪೆಮಜಲು ಒತ್ತಾಯ, ಇವರೊಂದಿಗೆ ಇಸುಬು, ಮತ್ತು ಮಹಮ್ಮದ್ ಕುಂಞಿ ಧ್ವನಿ ಗೂಡಿಸಿದರು.
ಈ ಬಗ್ಗೆ ಮಾರ್ಗದರ್ಶಿ ಅಧಿಕಾರಿ ಪುತ್ತೂರು ತಾ. ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ನವೀನ್ ಭಂಡಾರಿ ಉತ್ತರಿಸಿ ಅರೋಗ್ಯ ಕಾರ್ಯಕರ್ತರ ನೇಮಕಾತಿ ಸರಕಾರದ ಮಟ್ಟದಲ್ಲಿ ಆಗಬೇಕಿದೆ. ಸರ್ಕಾರಕ್ಕೆ ಬರೆಯುವ ಎಂದು ಹೇಳಿದರು. ಈ ಬಗ್ಗೆ ನಿರ್ಣಯ ಸರ್ಕಾರಕ್ಕೆ ಬರೆಯಲು ನಿರ್ಣಯ ಮಾಡಲಾಯಿತು.
ಅಧಿಕಾರಿಗಳ ಗೈರು ಬಗ್ಗೆ ಸಾರ್ವಜನಿಕರು ತರಾಟೆ
ಗ್ರಾಮ ಸಭೆಗೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು, ಕೆ.ಎಸ್. ಆರ್.ಟಿ.ಸಿ ಅಧಿಕಾರಿಗಳು ಎಲ್ಲಿ ಎಂದು ಪ್ರಶ್ನಿಸಿದರು. ಕಾವು – ಈಶ್ವರಮಂಗಲ ಸಂಪರ್ಕ ರಸ್ತೆಯ ಮಾಡನ್ನೂರು ಮಸೀದಿ ಮೇಲ್ಬಾಗದಿಂದ ಕೆಳಗಿನ ತನಕ ಚರಂಡಿ ವ್ಯವಸ್ಥೆ ಆಗಬೇಕಿದೆ. ಚರಂಡಿ ಇಲ್ಲದೆ ಕೊಳಚೆ ನೀರು ತಂಬಿ ಶಾಲಾ ಮಕ್ಕಳಿಗೆ ಹಾಗೂ ನಾಗರಿಕರಿಗೆ ಅಡ್ಡ ದಾಟಲು ಸಾಧ್ವಾಗುತ್ತಿಲ್ಲ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಇಸುಬು ಮಾಡನ್ನೂರು ಅಕ್ರೋಶ ವ್ಯಕ್ತಪಡಿಸಿದರು.
ಪುತ್ತೂರು- ಕಾವು  ಕೆ.ಎಸ್ ಆರ್.ಟಿ.ಸಿ ಬಸ್  ಸಂಚಾರ ವ್ಯವಸ್ಥೆ ಮಾಡಲು ಒತ್ತಾಯ
ಪುತ್ತೂರು- ಸುಳ್ಯ ರಾಷ್ಟ್ರೀಯ ಹೆದ್ದಾರಿ ಕಾವು ಭಾಗದಲ್ಲಿ ಬೆಳಗ್ಗೆ ಗಂ 8 ರಿಂದ  11ತನಕ ಯಾವುದೇ ಸರ್ಕಾರಿ ಬಸ್ ನಿಲ್ಲಿಸುವುದಿಲ್ಲ ಇದರಿಂದ ಶಾಲಾ ಕಾಲೇಜು ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಆದರಿಂದ ಪುತ್ತೂರು -ಕಾವು ಭಾಗಕ್ಕೆ ಸರ್ಕಾರಿ ಬಸ್ ಸಂಚಾರ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಮಾಡಿ ಸಂಬಂಧ ಪಟ್ಟ  ಇಲಾಖಾಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
2015 ರಲ್ಲಿ ಫಲಾನುಭವಿಯೋರ್ವರಿಗೆ ಮನೆ ಮಂಜೂರುಗೊಂಡು ಮನೆ ನಿರ್ಮಾಣಕ್ಕೆ ತಲಾಪಾಯ ಹಾಕಿ ಅರು ವರ್ಷಗಳ ಕಾಲ ವಸತಿ ವಂಚಿತರಾದ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ  2022-23 ಸಾಲಿನಲ್ಲಿ ಹೆಚ್ಚುವರಿಯಾಗಿ ಮನೆ  ಮಂಜೂರಾತಿ ಮಾಡುವ ಭರವಸೆ ನೀಡಿದ್ದು 6 ತಿಂಗಳಲ್ಲಿ   ಮಸೆ ನಿರ್ಮಾಣಕ್ಕೆ ಅಡಿಪಾಯ ಹಾಕಿ ಒಂದು ವರ್ಷದೊಳಗಿನ ಮನೆ ಪೂರ್ಣಗೊಳಿಸುವ ಷರತ್ತಿನ ಪ್ರಕಾರ ಮನೆ ನಿರ್ಮಾಣಕ್ಕೆ ತಾ.ಪಂ ಮುಖ್ಯ ಕಾರ್ಯನಿರವಹಣಾಧಿಕಾರಿ ನವೀನ್ ಭಂಡಾರಿ ಗ್ರಾಮ ಸಭೆಯಲ್ಲಿಯೇ ನಿರ್ಧಾರ. 
ವೇದಿಕೆಯಲ್ಲಿ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ,  ಸದಸ್ಯರಾದ ಸದಾನಂದ ಮಣಿಯಾಣಿ, ನಾರಾಯಣ ನಾಯ್ಕ ಚಾಕೋಟೆ, ಭಾರತಿ ವಸಂತ್,ಕೌಡಿಚ್ಚಾರ್ ಪುಷ್ಪಲತಾ ಮರತ್ತಮೂಲೆ, ರೇಣುಕಾ ಸತೀಶ್ ,ವಿನೀತಾ ಕೆ.ವಿ,ಉಷಾರೇಖಾ ರೈ, ,ಹೇಮಾವತಿ ಚಾಕೋಟೆ  ಅನಿತ ಆಚಾರಿಮೂಲೆ, ಪ್ರವೀಣ ಎ.ಬಿ ಶಂಕರ ಮಾಡನ್ನೂರು,ವಿಜೀತ್ ಕೆರೆಮಾರು ಮೋನಪ್ಪ ಕೆರೆಮಾರು,ಹರೀಶ್ ಜಾರಾತ್ತಾರು,ರಾಜೇಶ್ ಎಸ್,ಮೀನಾಕ್ಷಿ ಪಾಪೆಮಜಲು ಸಾವಿತ್ರಿ ಪೊನ್ನೆತ್ತಡ್ಕ,  ಉಪಸ್ಥಿತರಿದ್ದರು. ಪಿಡಿಒ ಪದ್ಮಕುಮಾರಿ   ಸ್ವಾಗತಿಸಿದರು,   ಕಾರ್ಯದರ್ಶಿ ಶಿವರಾಮ ಮೂಲ್ಯ  ವರದಿ ವಂದಿಸಿದರು,. ಗುಮಾಸ್ತ ಪ್ರಭಾಕರ ವಂದಿಸಿದರು,   ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here