ನಮ್ಮನ್ನು ಮೇಲಕ್ಕೆ ತಂದವರು ಡಾ.ಎಂ.ಕೆ.ಪ್ರಸಾದ್ – ಡಿವಿಎಸ್

0

ಪುತ್ತೂರು: ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ ಡಾ. ಬಿ.ಸಿ.ರಾಯ್ ವೈದ್ಯರ ದಿನದ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಕೆ.ಪ್ರಸಾದ್‌ರವರನ್ನು ಕೇಂದ್ರದ ಮಾಜಿ ಸಚಿವ ಹಾಲಿ ಸಂಸದ ಡಿ.ವಿ.ಸದಾನಂದ ಗೌಡ ಅವರು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅಭಿನಂದಿಸಿದರು.


ಇದೇ ಸಂದರ್ಭದಲ್ಲಿ ಅವರು ಮಾತನಾಡಿ ವೈದ್ಯ ಸೇವೆಯೊಂದಿ ಜನಸೇವೆ ಮಾಡಿ ನಮ್ಮನ್ನು ಮೇಲಕ್ಕೆ ತಂದವರೇ ಡಾ.ಎಂ.ಕೆ.ಪ್ರಸಾದ್. ಅವರಿಗೆ ವಿಶೇಷ ಪ್ರಶಸ್ತಿ ಲಭಿಸಿದು ನನಗೆ ಸಂತೋಷ. ಒಂದು ಸಮಯದಲ್ಲಿ ಪುತ್ತೂರಿನಲ್ಲಿ ಹಿಂದುತ್ವ ಉಳಿಯಲು ಕಾರಣಕರ್ತರೇ ಡಾಕ್ಟರ್. ಅವರಿಗೆ ನಾನು ಸದಾ ಚಿರಋಣಿ ಎಂದ ಅವರು ಡಾ.ಎಂ.ಕೆ.ಪ್ರಸಾದ್ ಅವರ ಕಾಲು ಹಿಡಿದು ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉದ್ಯಮಿ ರೈ ಎಸ್ಟೇಟ್‌ನ ಅಶೋಕ್ ಕುಮಾರ್ ಕೋಡಿಂಬಾಡಿ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್, ಗಣೇಶ್,ಎಪಿಎಂಸಿ ನಿಕಟಪೂರ್ವ ಸದಸ್ಯ ತೀರ್ಥರಾಮ ದುಗ್ಗಳ, ಆಪ್ತ ಸಹಾಯಕ ಧರ್ಣಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here