ಕಡಬ ಹೋಬಳಿ ಸಹಾಯಕ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಸೇವಾ ನಿವೃತ್ತಿ-ಬೀಳ್ಕೋಡುಗೆ, ಸನ್ಮಾನ

0


ಪುತ್ತೂರು: ಕೃಷಿ ಇಲಾಖೆಯ ಕಡಬ ಹೋಬಳಿ ಸಹಾಯಕ ಕೃಷಿ ಅಧಿಕಾರಿಯಾಗಿದ್ದ ತಿಮ್ಮಪ್ಪ ಗೌಡರವರು ಜು. ೩೦ ರಂದು ಸೇವಾ ನಿವೃತ್ತಿ ಹೊಂದಿದ್ದು, ಇವರ ಬೀಳ್ಕೋಡುಗೆ ಹಾಗೂ ಸನ್ಮಾನ ಸಮಾರಂಭ ಪುತ್ತೂರು ದರ್ಬೆಯ ಕೃಷಿ ಇಲಾಖೆಯ ಕಚೇರಿಯಲ್ಲಿ ಜರಗಿತು.

ಪ್ರಾಮಾಣೀಕ ಸೇವೆ-ಶಿವಶಂಕರ್
ಕೃಷಿ ಇಲಾಖೆಯ ಪುತ್ತೂರು ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಶಿವಶಂಕರ್‌ರವರು ಅಧ್ಯಕ್ಷತೆ ವಹಿಸಿ, ಮಾತನಾಡಿ ತಿಮ್ಮಪ್ಪ ಗೌಡರವರು ಒಟ್ಟು ೩೪ ವರ್ಷಗಳ ಕಾಲ ಕೃಷಿ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಜನಮೆಚ್ಚುಗೆ ಪಡೆದಿದ್ದಾರೆ ಎಂದರು.

ಗೌರವಕ್ಕೆ ಪಾತ್ರರಾಗಿದ್ದಾರೆ- ನಾರಾಯಣ ಶೆಟ್ಟಿ
ಪುತ್ತೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿರವರು ಮಾತನಾಡಿ ಸರಳ ವ್ಯಕ್ತಿತ್ವದ ಮೂಲಕ ತಿಮ್ಮಪ್ಪ ಗೌಡರವರು ಇಲಾಖೆ ಮತ್ತು ಜನಮಾನಸದ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಅತ್ಮತೃಪ್ತಿ ಇದೆ- ತಿಮ್ಮಪ್ಪ ಗೌಡ
ಸನ್ಮಾನ ಸ್ವೀಕರಿಸಿದ ತಿಮ್ಮಪ್ಪ ಗೌಡರವರು ಮಾತನಾಡಿ ಪ್ರಾಮಾಣಿಕವಾಗಿ ಕೃಷಿ ಇಲಾಖೆಯಲ್ಲಿ ಕೆಲಸವನ್ನು ನಿರ್ವಹಿಸಿದ್ದೇನೆ ಎಂಬ ಅತ್ಮತೃಪ್ತಿ ಇದೆ ಎಂದು ಹೇಳಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಜತ್ತಪ್ಪ ಗೌಡ, ವಿಠಲ ರೈ, ಕೃಷಿ ಇಲಾಖೆಯ ಅಧಿಕಾರಿಗಳಾದ ಶುಭಕರ್, ಭರಮಣ್ಣವರ್, ಮೀನಾಕ್ಷಿ, ಅಭಿಷೇಕ್, ಕಡಬ ಕೃಷಿ ಇಲಾಖೆಯ ಗೀತಾ, ಸೀಮಾರವರುಗಳು ಸಂದಬೋಚಿತವಾಗಿ ಮಾತನಾಡಿದರು. ತಿಮ್ಮಪ್ಪ ಗೌಡರವರು ಪತ್ನಿ ರತ್ನಾವತಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಯಶಸ್ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here