ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪೊಲೀಸ್ ಪೇದೆ ಬಾಲಕೃಷ್ಣರನ್ನು ಅಮಾನತುಗೊಳಿಸಿ ತನಿಖೆಗೊಳಪಡಿಸಿ- ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಎಸ್ಪಿಗೆ ಮನವಿ

0

ಬೆಳ್ಳಾರೆ:ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಹಿಂದೆ ಬೆಳ್ಳಾರೆಯ ಪೊಲೀಸ್ ಕಾನ್‌ಸ್ಟೇಬಲ್ ಬಾಲಕೃಷ್ಣ ಅವರ ಕೈವಾಡ ಇರುವ ಅನುಮಾನವಿರುವುದರಿಂದ ಅವರನ್ನು ಕೂಡಲೇ ಅಮಾನತುಗೊಳಿಸಿ ತನಿಖೆ ನಡೆಸುವಂತೆ ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಅವರು ಬೆಳ್ಳಾರೆ ಠಾಣಾಧಿಕಾರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಪೇದೆ ಬಾಲಕೃಷ್ಣ ಅವರ ಬಗ್ಗೆ ಕೆಲವು ಅನುಮಾನಗಳಿದ್ದು ಅವುಗಳ ಬಗ್ಗೆ ತನಿಖೆ ನಡೆಸಬೇಕೆಂದು ಪುನೀತ್ ಕೆರೆಹಳ್ಳಿ ಮನವಿ ಮಾಡಿದ್ದಾರೆ.

ಪುನೀತ್ ಕೆರೆಹಳ್ಳಿ ನೀಡಿರುವ ಮನವಿ ಪತ್ರದಲ್ಲಿ…: ಪ್ರವೀಣ್ ನೆಟ್ಟಾರು ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಾಗೂ `ಹುಬ್ಬಳ್ಳಿ ರಮೇಶ್’ ಅವರ ಮೇಲೆ ದೌರ್ಜನ್ಯ ನಡೆಸಿದ ಪೇದೆ ಬಾಲಕೃಷ್ಣರನ್ನು ಅಮಾನತು ಮಾಡಬೇಕು.ಜೊತೆಗೆ 4 ಅನುಮಾನಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಹಿಂದಿನಿಂದಲೂ ಮುಸ್ಲಿಂ ಸಮುದಾಯದ ಜೊತೆ ಇರುವ ಅತೀ ಹೆಚ್ಚು ಒಡನಾಟ. ಮೊನ್ನೆ ಪ್ರವೀಣ ನೆಟ್ಟಾರು ಅವರ ಹತ್ಯೆ ನೆಡೆದ ಸ್ಥಳಕ್ಕೆ ಕೇವಲ ಎರಡೇ ನಿಮಿಷದಲ್ಲಿ ಬಾಲಕೃಷ್ಣ ಅವರು ಹಾಜರಾಗಿದ್ದು ಹೇಗೆ? ಸರಕಾರಿ ಉದ್ಯೋಗಿ ಆಗಿ ಸರ್ಕಾರದ ಆ್ಯಂಬುಲೆನ್ಸ್ಗೆ ಯಾಕೆ ಕರೆ ಮಾಡಿಲ್ಲ?ಈ ಹಿಂದೆ ಕೋಮು ಗಲಾಟೆ ನಡೆಸಿದ ಜಮಾಲ್ ಮೊಬೈಲ್ ಸಂಖ್ಯೆ ಹೇಗೆ ಇವರ ಬಳಿ ಇತ್ತು?ಈಗಾಗಲೇ ಊರಿನ ಎಲ್ಲರ ಬಾಯಲ್ಲಿ ಬರುವ ಮಾತು, `ಪೇದೆ ಬಾಲಕೃಷ್ಣಗೆ ಹತ್ಯೆ ನಡೆಯುವ ವಿಷಯ ಗೊತ್ತಿತ್ತು’ ಎಂಬುವುದು.ಈ ಎಲ್ಲ ಅನುಮಾನಗಳ ಕುರಿತೂ ತನಿಖೆ ನಡೆಸಬೇಕು ಎಂದು ಪುನೀತ್ ಕೆರೆಹಳ್ಳಿ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಹಿಂದೆ ಪೇದೆ ಬಾಲಕೃಷ್ಣರನ್ನು ಬೆಳ್ಳಾರೆಯ ಠಾಣೆಯಿಂದ ವರ್ಗಾವಣೆ ಮಾಡಬೇಕೆಂದು ಮೃತ ಪ್ರವೀಣ್ ನೆಟ್ಟಾರು ಅವರು ನಳಿನ್ ಕಟೀಲ್ ಜೊತೆ ಮಾತು ಅಡಿದ್ದು ಬಹಿರಂಗವಾಗಿ ಪೇದೆ ಬಾಲಕೃಷ್ಣರಿಗೆ ವಿಷಯ ತಿಳಿದು ಈ ದ್ವೇಷದಿಂದ ಕೃತ್ಯಕ್ಕೆ ಸಹಕಾರ ನೀಡಿದರೇ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ, ಅಷ್ಟೇ ಅಲ್ಲ ಯಾವಾಗಲೂ 10 ಗಂಟೆಗೆ ಬಾಗಿಲು ಮುಚ್ಚುವ ನ್ಯೂ ಕಾಮಧೇನು ಮಾಲಿಕ ಅಂದು 8 ಗಂಟೆಗೆ ಸಿಸಿ ಟಿವಿ ಅಫ್ ಮಾಡಿ ಯಾಕೆ ಹೋದದ್ದು.ಇದನ್ನು ಬಾಲಕೃಷ್ಣ ಅವರೇ ಹೇಳಿಕೊಟ್ಟರಾ? ಎಂಬ ಅನುಮಾನವೂ ಬಲವಾಗಿ ಕಾಡುತ್ತಿದೆ.ಇವೆಲ್ಲಾ ಅನುಮಾನಗಳಿಗೆ ಸ್ಪಷ್ಟನೆ ಸಿಗಬೇಕಾದರೆ ಬಾಲಕೃಷ್ಣ ಅವರನ್ನು ಅಧಿಕಾರದಿಂದ ಅಮಾನತು ಮಾಡಿ ಕೂಡಲೇ ತನಿಖೆಗೆ ಒಳಪಡಿಸಬೇಕು.ಬಾಲಕೃಷ್ಣ ಅಧಿಕಾರದಲ್ಲೇ ಇದ್ದರೆ ಸಾಕ್ಷಿ ನಾಶ ಮಾಡುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿರುವ ಕಾರಣ ಕೂಡಲೇ ಕ್ರಮ ಜರುಗಿಸಬೇಕೆಂದು ಕರ್ನಾಟಕದ ಸಮಸ್ತ ಹಿಂದೂ ಕಾರ್ಯಕರ್ತರ ಪರವಾಗಿ ಆಗ್ರಹಿಸುತಿದ್ದೇನೆ ಎಂದು ಪುನೀತ್ ಕೆರೆಹಳ್ಳಿ ಮನವಿಯಲ್ಲಿ ತಿಳಿಸಿದ್ದಾರೆ.ಪೇದೆ ಬಾಲಕೃಷ್ಣ ಅವರ ಮೇಲೆ ಅನುಮಾನ ವ್ಯಕ್ತಪಡಿಸಿ ಪತ್ರ ರವಾನೆಯಾಗಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • ಅಮಾನತು ಮಾಡದಿದ್ದರೆ ಬೆಳ್ಳಾರೆ ಚಲೋ
    ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾಗಿದ್ದ ಪ್ರವೀಣ್ ನೆಟ್ಟಾರು ಅವರ ಪಾರ್ಥೀವ ಶರೀರದ ಮೆರವಣಿಗೆ ಸಂದರ್ಭ ಬೆಳ್ಳಾರೆಯಲ್ಲಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದ ಪೊಲೀಸರನ್ನು ಕೇವಲ ವರ್ಗಾವಣೆ ಮಾಡಿರುವುದು ಸರಿಯಲ್ಲ.ಕೂಡಲೇ ಪೇದೆ ಬಾಲಕೃಷ್ಣ ಅವರನ್ನು ವೃತ್ತಿಯಿಂದ ಅಮಾನತು ಮಾಡಬೇಕು.ಇಲ್ಲದಿದ್ದರೆ ಕರ್ನಾಟಕದ ಸಮಸ್ತ ಹಿಂದೂ ಕಾರ್ಯಕರ್ತರು ಬೆಳ್ಳಾರೆ ಚಲೋ ಹೋರಾಟ ಹಮ್ಮಿಕೊಳ್ಳುತ್ತೇವೆ
    -ಪುನೀತ್ ಕೆರೆಹಳ್ಳಿ, ಅಧ್ಯಕ್ಷ ರಾಷ್ಟ್ರ ರಕ್ಷಣಾ ಪಡೆ

LEAVE A REPLY

Please enter your comment!
Please enter your name here