ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಪೋಷಕರ ಸಭೆ

0

ಪುತ್ತೂರು: ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್’ನಲ್ಲಿ ಜು.30ರಂದು  ಪೋಷಕರ ಸಭೆ ನಡೆಯಿತು. ಸಂಸ್ಥೆಯ ಕಾರ್ಯನಿರ್ವಾಹಕ ಶೈಕ್ಷಣಿಕ ನಿರ್ದೇಶಕರಾದ ರಫೀಕ್ ಮಾಸ್ಟರ್ ರವರು ಪೋಷಕರನ್ನುದ್ದೇಶಿಸಿ ಮಾತನಾಡಿ ಮಕ್ಕಳು ನಡೆದಾಡುವ ಸ್ವರ್ಗ, ಬಾಲ್ಯದಲ್ಲಿಯೇ ಹೆತ್ತವರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಿದರೆ ಮುಂದೆ ಅವರು ಹೆತ್ತವರಿಗೆ ಸ್ವರ್ಗದ ಹಾದಿಯಾಗುತ್ತಾರೆ ಎಂದು ಹೇಳಿದರು.
ಲೀಡ್ ಸಂಸ್ಥೆಯ ಅಕಾಡೆಮಿಕ್ ಎಕ್ಸೆಲೆನ್ಸ್ ಮ್ಯಾನೇಜರ್ ಸ್ವಾತಿ ಶೆಟ್ಟಿಯವರು ಪೋಷಕರಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು. ಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ ಅಧ್ಯಕ್ಷತೆ  ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಧುರಾ, ಉಪಾಧ್ಯಕ್ಷರಾದ ಜಾವೆದ್ ಇಬ್ರಾಹಿಂ, ಆಡಳಿತಾಧಿಕಾರಿ ನಝೀರ್ ಅಹಮ್ಮದ್, ಶಿಕ್ಷಕ- ರಕ್ಷಕ ಸಂಘದ ಉಪಾಧ್ಯಕ್ಷೆ ಶೆಫೀನಾ, 
ಲೀಡ್ ಕೀ ಅಕೌಂಟ್ ಮ್ಯಾನೇಜರ್ ಅಜಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಧುರಾ ಎಜುಕೇಶನ್ ಟ್ರಸ್ಟ್ ನ ಅಧೀನದಲ್ಲಿ ನಡೆಯುತ್ತಿದ್ದ ಫಾತಿಮಾ ವಿಮೆನ್ಸ್ ಕಾಲೇಜ್ ನಲ್ಲಿ 2 ವರ್ಷದ ಫಾಳಿಲಾ ಶರೀಅತ್ ಹಾಗೂ ಪಿಯುಸಿ  ಕೋರ್ಸ್ ಪೂರ್ಣಗೊಳಿಸಿ ಪ್ರಥಮ ಸ್ಥಾನಗಳಿಸಿದ ಝೈನಬಾ ಶುರೈರಾ ಹಾಗೂ ದ್ವಿತೀಯ ಸ್ಥಾನಗಳಿಸಿದ ಆಯಿಷತ್ ನೆಜೀಮಾ ಇವರಿಗೆ ಪದವಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಸಂಸ್ಥೆಯ ಮುಖ್ಯಶಿಕ್ಷಕಿ  ರಮ್ಲತ್.ಕೆ ಸ್ವಾಗತಿಸಿದರು. ಶಿಕ್ಷಕಿ ಶ್ವೇತಾ ಮರಿಯಾ ಡಿಸೋಝ ವಂದಿಸಿದರು. ಶಿಕ್ಷಕಿ ಆಯೆಷಾ ನೀಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ತಪಸ್ವಿನಿ, ಮನೋದ, ಪ್ರತೀಕ್ಷಾ, ಫಾತಿಮತ್ ಝಿಯಾನ, ರಾಬಿಯಾ, ಭವ್ಯಾಮಣಿ, ಶಿಕ್ಷಕ ಮುಹಮ್ಮದ್ ಅನೀಸ್, ಶಿಕ್ಷಕೇತರ ವೃಂದದವರಾದ ಖದೀಜತ್ ರೈಹಾನ, ಶ್ವೇತಾ ಮರಿಯಾ ಡಿಸೋಝ ವಿವಿಧ ಕಾರ್ಯಕ್ರಮ  ನಿರ್ವಹಿಸಿದರು.

LEAVE A REPLY

Please enter your comment!
Please enter your name here