ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ-ಸಾಂತ್ವನ

0

 

ಬೆಳ್ಳಾರೆ:ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ಕುಮಾರ್ ನೆಟ್ಟಾರು ಮನೆಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಸುದ್ದಿಯೊಂದಿಗೆ ಮಾತನಾಡಿ ” ಪ್ರವೀಣ್ ಬಹಳ ದಿನಗಳಿಂದ ನನಗೆ ಪರಿಚಯ.ನಾನು ಪುತ್ತೂರು ಕ್ಷೇತ್ರದಲ್ಲಿ ಶಾಸಕನಾಗಿದ್ದಾ ಪ್ರವೀಣ್ ತಂದೆಯೊಂದಿಗೆ ನನಗೆ ನಿಕಟ ಸಂಭಂಧವಿತ್ತು.ಮೊನ್ನೆ ಗೆಜ್ಜೆಗಿರಿಯಲ್ಲಿ ಬ್ರಹ್ಮಕಲಶ ಆಗುವಾಗಲೂ ಆತ ಚೆನ್ನಾಗಿ ಪ್ರಸಾದ ಸಮಿತಿಯಲ್ಲಿ ತನ್ನ ಜವಬ್ದಾರಿ ನಿರ್ವಹಿಸಿದ್ದನ್ನು ನೋಡಿದ್ದೇನೆ.ಪ್ರವೀಣ್ ಬಗ್ಗೆ ಎಲ್ಲರಿಗೂ ಒಳ್ಳೆಯ ಅಭಿಪ್ರಾಯವಿದೆ.ಈ ರೀತಿಯ ಘಟನೆ ನಡೆಯಬಾರದಾಗಿತ್ತು.ಯಾರದೋ ಮನೆಯ ಮಕ್ಕಳನ್ನು ಈ ರೀತಿ ಕೊಲೆ ಮಾಡುವುದು ಸರಿಯಲ್ಲ.ಇದು ನಿಲ್ಲಬೇಕು ” ಎಂದರು.

LEAVE A REPLY

Please enter your comment!
Please enter your name here