ಪುತ್ತೂರು: ಕೆಯ್ಯೂರು ಗ್ರಾಮದ ಬೊಳಿಕ್ಕಲ ಸ್ಥಾನತರು ಮನೆ ನಿವಾಸಿ ವಿಠಲ್ ರೈ(70ವ)ರವರು ಜು. ೨೧ರಂದು ನಿಧನರಾದರು. ಬಿ.ಎಸ್ ವಿಠಲ್ ರೈ ಅವರು ಅನಾರೋಗ್ಯದಿಂದಾಗಿ ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ರಾಜೀವಿ ರೈ, ಪುತ್ರಿಯರಾದ ಶರಣ್ಯ, ಲಾವಣ್ಯ, ಸುಕನ್ಯ ಮತ್ತು ಪುತ್ರ ಲೋಕೇಶ್ ಹಾಗು ಸಹೋದರ ಪದ್ಮನಾಭ ರೈ ಅವರನ್ನು ಅಗಲಿದ್ದಾರೆ.