ಆಲಂಕಾರು ಸಿ.ಎ. ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆಯವರಿಗೆ ಬೀಳ್ಕೊಡುಗೆ

0

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 39 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿಗೊಂಡಿರುವ ಪ್ರಶಾಂತ ರೈ ಮನವಳಿಕೆಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಜು.30ರಂದು ಸಂಘದ ಸಭಾಭವನದಲ್ಲಿ ನಡೆಯಿತು.

ಉಪಾಧ್ಯಕ್ಷರಾದ ಪ್ರದೀಪ್ ರೈ ಮನವಳಿಕೆ ಮಾತನಾಡಿ, ಪ್ರಶಾಂತ ರೈಯವರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ತಮ್ಮ ಕರ್ತವ್ಯದ ಅವಧಿಯಲ್ಲಿ ನೇರ ನಡೆ ನುಡಿಯಿಂದ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದವರು. ಸಂಘದ ಅಭಿವೃದ್ದಿಗೆ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯ. ಮುಖ್ಯ ಕಾರ್ಯನಿರ್ವಹಣಾಽಕಾರಿ ಪ್ರಶಾಂತ ರೈಯವರು ವ್ಯವಹಾರದ ಜಾಣ್ಮೆ ರೂಢಿಸಿಕೊಂಡಿದ್ದರು. ಎಂದು ಹೇಳಿ ಅವರ ನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.

ಸಂಘದ ನಿರ್ದೇಶಕರಾದ ಸುಧಾಕರ ಪೂಜಾರಿ ಕಲ್ಲೇರಿ, ಅಶಾತಿಮ್ಮಪ್ಪ ಗೌಡ ಕುಂಡಡ್ಕ,ಸಂತೋಷ್ ಕುಮಾರ್ ಕುಂಞಕ್ಕು,ರಾಮಚಂದ್ರ ಏಣಿತ್ತಡ್ಕ,ಶೇಷಪತಿ ರೈ ಗುತ್ತುಪಾಲು, ಸಿಬ್ಬಂದಿಗಳಾದ ಮನೋಹರ ಪ್ರಕಾಶ್,ರವಿರಾಜ್ ರೈ, ಆನಂದ ಗೌಡ,ಲೋಕನಾಥ ರೈ ಕೇಲ್ಕ,ರಾಧಾಕೃಷ್ಣ ,ಅಶಾಲತಾ ಮಹೇಶ್,ಸಂತೋಷ್ ರೈ ಆರುವಾರರವರು ಪ್ರಶಾಂತ ರೈ ಮನವಳಿಕೆಯವರ ಗುಣಗಾನ ಮಾಡಿ ನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಶಾಂತ ರೈ ಹಾಗು ಅವರ ಪತ್ನಿ ನಂದಿನಿ ಪಿ.ರೈ ಯವರನ್ನು ಆಡಳಿತ ಮಂಡಳಿಯವರು,ಸಿಬ್ಬಂದಿಗಳು ಸೇರಿ ಶಾಲು, ಹಾರ ಫಲಪುಷ್ಪ ನೀಡಿ ಗೌರವಿಸಿದರು. ಸಿಬ್ಬಂದಿಗಳ ವತಿಯಿಂದ ಪ್ರಶಾಂತ ರೈ ಯವರಿಗೆ ಚಿನ್ನದ ಖಡಗ ತೊಡಿಸಿ ಗೌರವಿಸಿ ನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಕ್ಯಾಂಪ್ಕೋ ವತಿಯಿಂದ ಶಾಖಾ ಮ್ಯನೇಜರ್ ಉದಯ ಬಿ.ಆರ್ ಹಾಗು ಸಿಬ್ಬಂದಿಗಳು ಶಾಲು ಹಾಗು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಪ್ರಶಾಂತ ರೈರವರು ನಾನು ಇವತ್ತು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಜವಾಬ್ದಾರಿಯಿಂದ ನೀರಳನಾಗಿದ್ದೇನೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗ, ಅಡಳಿತ ಮಂಡಳಿಯವರನ್ನು ಬಿಟ್ಟು ಹೋಗುವಾಗ ಭಾವನಾತ್ಮಕವಾಗಿ ಬೇಸರ ವಾಗುತ್ತಿದೆ. ನನಗೆ ಅನ್ನ ನೀಡಿದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಾನು ಯಾವತ್ತೂ ಚಿರ ಋಣಿ,ಎಂದು ತಿಳಿಸಿ ತನ್ನ ಬಾಲ್ಯದಲ್ಲಿನ ಜೀವನದ ಬಗ್ಗೆ,ಆನಂತರ ಸೇವೆಗೆ ಸೇರಿದ ನಂತರದ ದಿವಸದಿಂದ ಕೊನೆಯ ತನಕದ ಆಡಳಿತ ಮಂಡಳಿಯ ಬದಲಾವಣೆ,ಕಾರ್ಯವೈಖರಿಯ ಬಗ್ಗೆ ತಿಳಿಸಿ, ಸಂಘ ಅಭಿವೃದ್ದಿ ಹೊಂದಿದರೆ ಅದರ ಲಾಭ ಸಂಘದ ಸಿಬ್ಬಂದಿಗಳಿಗೆ ದೊರಕುತ್ತದೆ.ಆಡಳಿತ ಮಂಡಳಿಯವರು ಸೇವಾ ರೂಪದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದ್ದರಿಂದ ಸಿಬ್ಬಂದಿಗಳು ತಮ್ಮ ಕರ್ತವ್ಯ ಪ್ರeಯಿಂದ ಕರ್ತವ್ಯವನ್ನು ನಿರ್ವಹಿಸಬೇಕು. ರಮೇಶ್ ಭಟ್ಟ ಉಪ್ಪಂಗಳರವರ ಅವಽಯ ನಂತರ ಸಂಘ ಅಭಿವೃದ್ದಿಗೊಂಡಿತು ಹಾಗು ಬೆಳವಣಿಗೆ ಆಯಿತು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆಯವರು ಮಾತನಾಡಿ, ದ.ಕ ಜಿಲ್ಲೆಯಲ್ಲಿ ಸೆಕ್ಷನ್ 144 ಇರುವ ಕಾರಣ ಪ್ರಶಾಂತ ರೈ ಯವರ ಬೀಳ್ಕೋಡುಗೆ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಮಾಡಿರುವುದಾಗಿ ತಿಳಿಸಿ ಸೆಕ್ಷನ್ ಮುಗಿದ ನಂತರ ಎಲ್ಲಾ ಸದಸ್ಯರನ್ನು ಕರೆದು ಬೀಳ್ಕೋಡುಗೆ ಕಾರ್ಯಕ್ರಮ ಮಾಡುವುದಾಗಿ ಹೇಳಿದರು. ಪ್ರಶಾಂತ ರೈ ಯವರ ಕಾರ್ಯತತ್ಪರತೆಯ ಬಗ್ಗೆ ಸಿಬ್ಬಂದಿಗಳಿಗೆ ತಿಳಿಸಿ ನಾವು ಅಽಕಾರಕ್ಕೆ ಬರುವ ಸಂಧರ್ಭ ದಲ್ಲಿ ಬಹಳಷ್ಟು ಟೀಕೆ ಹಾಗು ಟಿಪ್ಪಣಿಗಳನ್ನು ಎದುರಿಸಿದ್ದೇವೆ. ದೇವರ ದಯೆ ಯಿಂದ 495 ಕೋಟಿ ರೂ. ಇದ್ದ ವ್ಯವಾಹಾರ ಈಗ 900 ಕೋಟಿ ರೂ.ಗೆ ತಲುಪಿರುವುದು ಅತ್ಯಂತ ಸಂತೋಷದ ವಿಚಾರ ವಾಗಿದ್ದು ಸಹಕರಿಸಿದ ಅಡಳಿತ ಮಂಡಳಿಯ ನಿರ್ದೇಶಕರಿಗೆ ಹಾಗು ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಗಳು ಇನ್ನಷ್ಟು ಕಾರ್ಯತತ್ಪರತೆಯಿಂದ ಕೆಲಸ ಮಾಡುವಂತೆ ತಿಳಿಸಿ ನೂತನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ರವರಿಗೆ ಶುಭಾಹಾರೈಸಿದರು. ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಬ್ಬಂದಿಗಳಾದ ಲೋಕನಾಥ ರೈ ಕೇಲ್ಕ ಕಾರ್ಯಕ್ರಮ ನಿರೂಪಿಸಿ,ಅಶಾಲತಾ ಪ್ರಾರ್ಥಿಸಿ ,ಆನಂದ ಗೌಡ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಮೋನಪ್ಪ ಕುಲಾಲ್ ಬೊಳ್ಳರೋಡಿ,ಅಣ್ಣು ನಾಯ್ಕ ಜಯಂಪಾಡಿ,ನಳಿನಿ ಕಾಯರಕಟ್ಟ, ಹಾಗು ಸಿಬ್ಬಂದಿಗಳು ಮತ್ತು ಪ್ರಶಾಂತ ರೈಯವರ ಮಗಳು ಅದಿತಿ ರೈ ಮನವಳಿಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here