ಪಳ್ಳತ್ತಾರು ಶಾಲೆಯಲ್ಲಿ ಪ್ರೊಜೆಕ್ಟರ್ ಉದ್ಘಾಟನೆ, ಸಮವಸ್ತ್ರ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ

0

ಕಾಣಿಯೂರು: ಪಳ್ಳತ್ತಾರು ದ.ಕ.ಜಿ.ಪಂ.ಸ. ಹಿರಿಯ ಪ್ರಾಥಮಿಕ ಶಾಲೆಗೆ ಬಿ ಪಿ ರಾವ್ ಕಂಪೆನಿ ಬೆಂಗಳೂರು ಇವರು ಕೊಡುಗೆಯಾಗಿ ನೀಡಿದ ಪ್ರೊಜೆಕ್ಟರ್ ಉದ್ಘಾಟನೆ ಹಾಗೂ ಊರವರ ಸಹಕಾರದಿಂದ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ನಡೆಯಿತು.

ಪುತ್ತೂರು ತಾಲೂಕು ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಅವರು ಪ್ರೊಜೆಕ್ಟರ್ ಉದ್ಘಾಟಿಸಿದರು. ಬೆಳಂದೂರು ಪಂ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಉಮ್ಮರ್ ಶಾಫಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಹಸ್ತಾಂತರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಂದೂರು ಪಂ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ವಹಿಸಿದ್ದರು. ಪುತ್ತೂರು ತಾಲೂಕು ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕರುಣಾಕರ ಪೂಜಾರಿ ಪಟ್ಟೆ ಶುಭ ಹಾರೈಸಿದರು.

ಬಳಿಕ ಪಳ್ಳತ್ತಾರು ಶಾಲೆಗೆ ಅನುದಾನ ಒದಗಿಸಿಕೊಟ್ಟ ಪುತ್ತೂರು ತಾಲೂಕು ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿಯವರನ್ನು ಎಸ್ ಡಿ ಎಂ ಸಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೆಳಂದೂರು ಪಂ ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಪಿ ಡಿ ಓ ನಾರಾಯಣ, ವಾರ್ಡ್ ಸದಸ್ಯೆ ಹರಿಣಾಕ್ಷಿ, ಸವಣೂರು ಕ್ಲಸ್ಟರ್ ಸಿ ಆರ್ ಪಿ ಕುಶಾಲಪ್ಪ, ವಸಂತ ಪೂಜಾರಿ ಕೆಲೆಂಬಿರಿ, ಸುಪ್ರೀತ್ ಕುಮಾರ್ ಜೈನ್, ನಝೀರ್ ದೇವಸ್ಯ, ನವಾಝ್ ಸಖಾಫಿ, ಶಿಕ್ಷಕ ರಂಗನಾಥ, ಶಿಕ್ಷಕಿಯರಾದ ಸರೋಜ, ಝರೀನಾ, ಅಡುಗೆ ಸಿಬ್ಬಂದಿಗಳಾದ ಸರೋಜಿನಿ, ಸುನಂದಾ ಸೇರಿದಂತೆ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ಸೀತಾರಾಮ ಕೆ. ಜಿ ಸ್ವಾಗತಿಸಿ ಶಿಕ್ಷಕ ಕುಶಾಲಪ್ಪ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here