ನಾಳೆ(ಆ.2) ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ

0

ಮೂಲನಾಗ ಸನ್ನಿಧಿ, ವಾಸುಕೀ ನಾಗರಾಜ ಸನ್ನಿಧಿಯಲ್ಲಿ ಅಭಿಷೇಕಗಳು

ಸಂಜೆ ಸಾಮೂಹಿಕ ಆಶ್ಲೇಷ ಬಲಿ ಸೇವೆಗೆ ಅವಕಾಶ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.2ರಂದು ನಾಗರ ಪಂಚಮಿ ಉತ್ಸವ ನಡೆಯಲಿದ್ದು, ಸಂಪ್ರದಾಯದ ಪ್ರಕಾರ ದೇವಳದ ಮೂಲನಾಗ ಸನ್ನಿಧಿ ಮತ್ತು ವಾಸುಕೀ ನಾಗರಾಜ ಸನ್ನಿಧಿಯಲ್ಲಿ ಬೆಳಿಗ್ಗೆ ಗಂಟೆ 6 ರಿಂದ ಅಭಿಷೇಕಾದಿಗಳು ಜರುಗಲಿದೆ.

ಮೂಲನಾಗ ಸನ್ನಿಧಿಯಲ್ಲಿ ಬೆಳಿಗ್ಗೆ ಗಂಟೆ 6 ರಿಂದ ಹಾಲಿನ ಮತ್ತು ಸೀಯಾಳ ಅಭಿಷೇಕ ನಡೆಯಲಿದ್ದು, ಗಂಟೆ 7ಕ್ಕೆ ನಾಗತಂಬಿಲ ಸೇವೆ ನಡೆಯಲಿದೆ. ಭಕ್ತರು ನಾಗತಂಬಿಲ ಸೇವೆ ಮಾಡಲು ಅವಕಾಶವಿದೆ. ವಾಸುಕಿ ನಾಗರಾಜ ಸನ್ನಿಧಿಯಲ್ಲೂ ಹಾಲಿನ ಮತ್ತು ಸೀಯಾಳಾಭಿಷೇಕ ನಡೆಯಲಿದ್ದು, ಮಧ್ಯಾಹ್ನ ಗಂಟೆ 11.30ಕ್ಕೆ ನಾಗತಂಬಿಲ ಸೇವೆ, ನಾಗಪೂಜೆ, ಪಂಚಾಮೃತಾಭಿಷೇಕ, ಸಂಜೆ ಸಾಮೂಹಿಕ ಆಶ್ಲೇಷ ಬಲಿ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.

[box type=”info” bg=”#” color=”#” border=”#” radius=”16″]ವಿಶೇಷ ಸೇವೆಗಳು….

 

ನಾಗರಪಂಚಮಿಯ ಅಂಗವಾಗಿ ಬೆಳಿಗ್ಗೆ ಮೂಲನಾಗ ಸನ್ನಿಧಿಯಲ್ಲಿ ನಾಗತಂಬಿಲ ಸೇವೆ ನಡೆಯಲಿದ್ದು, ಮೂಲನಾಗ ಸನ್ನಿಧಿಯಲ್ಲಿ ಮತ್ತು ವಾಸುಕಿ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ ಸೇವಾದರ ರೂ. 325 ಆಗಿದೆ. ನಾಗಪೂಜೆಗೆ ರೂ. 40, ಪಂಚಾಮೃತಾಭಿಷೇಕ ಸೇವೆಗೆ ರೂ. 40, ಸಂಜೆ ನಡೆಯುವ ಸಾಮೂಹಿಕ ಆಶ್ಲೇಷ ಬಲಿ ಸೇವೆಗೆ ರೂ. 500 ಆಗಿದೆ. ಸೇವೆ ಮಾಡಿಸಲಿಚ್ಚಿಸುವ ಭಕ್ತರು ಸೇವೆಗಳ ರಶೀದಿಯನ್ನು ದೇವಳದ ಕೌಂಟರ್‌ನಲ್ಲಿ ಪಡೆಯಬಹುದು.

 

ಕೇಶವಪ್ರಸಾದ್ ಮುಳಿಯ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು [/box]

LEAVE A REPLY

Please enter your comment!
Please enter your name here